HomeInternationalಅಪರೂಪದ ಘಟನೆ: ಮೊದಲ ಮಗುವಿಗೆ ಜನ್ಮ ಕೊಟ್ಟ ತಾಯಿ, 22 ದಿನಗಳ ನಂತರ 2 ನೇ...

ಅಪರೂಪದ ಘಟನೆ: ಮೊದಲ ಮಗುವಿಗೆ ಜನ್ಮ ಕೊಟ್ಟ ತಾಯಿ, 22 ದಿನಗಳ ನಂತರ 2 ನೇ ಮಗುವಿಗೆ ಜನ್ಮ ನೀಡಿದ ತಾಯಿ.…..!

ಜಗತ್ತಿನಲ್ಲಿ ಆಗಾಗ ಕೆಲವೊಂದು ಅಪರೂಪದ ಘಟನೆಗಳು ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರು ಒಂದೇ ಬಾರಿ ಮಗುವಿಗೆ ಜನ್ಮ ನೀಡುತ್ತಾರೆ, ಅವಳಿ, ತ್ರಿವಳಿ ಹಾಗೂ ಕೆಲವೊಂದು ಕಡೆ ಐದು ಮಕ್ಕಳಿಗೆ ಜನ್ಮ ನೀಡಿದಂತಹ ಸುದ್ದಿಯನ್ನು ಕೇಳಿರುತ್ತೇವೆ. ಆದರೆ ಇದೀಗ ಇಂಗ್ಲೇಡ್  ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಒಂದು ಮಗುವಿಗೆ ಜನ್ಮ ನೀಡಿದ 22 ದಿನಗಳ ಬಳಿಕ ಮತ್ತೊಂದು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಇದೀಗ ಈ ಸುದ್ದಿ ಚರ್ಚನೀಯವಾದ ವಿಚಾರವಾಗಿದೆ.

ಇಂಗ್ಲೇಡ್ ನ ನಿವಾಸಿಯಾದ ಕೈಲಿ ಡಾಯ್ಲ್ ಎಂಬ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರೆಲ್ಲಾ ವಿಚಿತ್ರ, ಅಪರೂಪ ಎಂಬ ಅನುಮಾನ ನಿಮಗೆ ಮೂಡಬಹುದು. ಮೊದಲ ಮಗು ಜನಿಸಿದ 22 ದಿನಗಳ ಬಳಿಕ ಮತ್ತೊಂದು ಮಗುವ ಹುಟ್ಟಿದೆ. 22 ದಿನಗಳ ಅಂತರದಲ್ಲಿ ಮಕ್ಕಳಿಬ್ಬರೂ ಹುಟ್ಟಲು ಹೇಗೆ ಸಾಧ್ಯವಾಯ್ತು ಎಂಬುದು ಇದೀಗ ಚರ್ಚನೀಯ ವಿಚಾರವಾಗಿದೆ. ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೈಲಿ ಮೊದಲ ಮಗುವಿಗೆ ಜನ್ಮ ಕೊಟ್ಟರು. ಮಗು ಅದಾಗಲೇ ಸತ್ತಿರುವುದಾಗಿ ವೈದ್ಯರು ಘೊಷಣೆ ಮಾಡಿದ್ದರು.

mom gives birth to twins 22 days 1

ಮೃತಪಟ್ಟ ಮಗು 1.1ಪೌಂಡ್ ತೂಕವಿದ್ದು, ಶಿಶುವಿನ ಹೊಕ್ಕಳ ಬಳ್ಳಿಯಲ್ಲಿ ರಕ್ತ ಹೆಪ್ಪು ಗಟ್ಟಿ ಸಾವನ್ನಪ್ಪಿದೆ ಎನ್ನಲಾಗಿತ್ತು. ಎರಡನೇ ಮಗುವಾದರೂ ಸಂಪೂರ್ಣವಾಗಿ ಆರೋಗ್ಯವಾಗಿ ಜನ್ಮಿಸಲಿ ಎಂದು ಕೈಲಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಳಂತೆ. ಆದರೆ ಕೆಲವೇ ಗಂಟೆಗಳಲ್ಲಿ ಕೈಲಿಗೆ ಹೆರಿಗೆ ನೋವು ನಿಂತಿದೆ. ಎರಡು ದಿನ ಆದರೂ ಹೆರಿಗೆ ನೋವು ಕಾಣಿಸದೇ ಇರುವ ಕಾರಣ ಆಕೆಯನ್ನು ವೈದ್ಯರು ಮನೆಗೆ ಕಳುಹಿಸಿದ್ದರು. ಇದಾದ 22 ದಿನಗಳ ಬಳಿಕ ಕೈಲಿಗೆ ಮತ್ತೆ ಹರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ಸ್ವಲ್ಪ ಹೊತ್ತಲ್ಲೇ ಎರಡನೇ ಮಗು ಹುಟ್ಟಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular