India Post Recruitment 2025- ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಅಂಚೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಅಂಚೆ ಇಲಾಖೆ (India Post) 2025 ನೇ ಸಾಲಿನ ಗ್ರಾಮೀಣ ಡಕ್ ಸೇವಕ್ (Gramin Dak Sevak – GDS) ಹುದ್ದೆಗಳ ನೇಮಕಾತಿಗೆ 21,413 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. SSLC ತೇರ್ಗಡೆಯಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಮಾತ್ರವೇ 1,135 ಹುದ್ದೆಗಳ ಅವಕಾಶವಿದೆ. ಯಾವುದೇ ಪರೀಕ್ಷೆ ಇಲ್ಲದೆ ಹುದ್ದೆಗೆ ಆಯ್ಕೆ ಆಗುವ ಅವಕಾಶ ನಿಮ್ಮದಾಗಬಹುದು.

India Post Recruitment 2025- ಮುಖ್ಯ ಮಾಹಿತಿ :
- ಒಟ್ಟು ಹುದ್ದೆಗಳು: 21,413 (ದೇಶಾದ್ಯಂತ) | ಕರ್ನಾಟಕದ ಹುದ್ದೆಗಳು: 1,135
- ಹುದ್ದೆಗಳು: ಗ್ರಾಮೀಣ ಡಾಕ್ ಸೇವಕ (ಬ್ರಾಂಚ್ ಪೋಸ್ಟ್ಮಾಸ್ಟರ್/ಸಹಾಯಕ ಬ್ರಾಂಚ್ ಪೋಸ್ಟ್ಮಾಸ್ಟರ್)
- ಯೋಗ್ಯತೆ: 10ನೇ ತರಗತಿ ಪಾಸ್ + ಕಂಪ್ಯೂಟರ್ ಜ್ಞಾನ ಮತ್ತು ಸೈಕಲ್ ಓಡಿಸುವ ಸಾಮರ್ಥ್ಯ.
- ವಯೋಮಿತಿ: 18–40 ವರ್ಷ (SC/ST/OBC/PwD ಅಭ್ಯರ್ಥಿಗಳಿಗೆ ವಯಸ್ಸಿನ ರಿಯಾಯಿತಿ).
- ಅರ್ಜಿ ಶುಲ್ಕ: ₹100 (SC/ST/PwD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಮುಕ್ತ).
- ವೇತನ: ₹10,000–₹29,380 (ತಿಂಗಳಿಗೆ).
- ಕೊನೆಯ ದಿನಾಂಕ: ಮಾರ್ಚ್ 3, 2025.
India Post Recruitment 2025- ಹುದ್ದೆಗಳ ವಿವರ & ವಿದ್ಯಾರ್ಹತೆ
- ಹುದ್ದೆಯ ಹೆಸರು: ಗ್ರಾಮೀಣ ಡಕ್ ಸೇವಕ್ (GDS)
- ಉದ್ಯೋಗ ಸ್ಥಳ: ಭಾರತದೆಲ್ಲೆಡೆ
- ಅರ್ಹತೆ: ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ (SSLC) ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಸೈಕಲ್ ಓಡಿಸುವ ಸಾಧ್ಯತೆ ಹೊಂದಿರಬೇಕು.
- ಹುದ್ದೆಗಳ ವರ್ಗಗಳು:
- ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (BPM)
- ಅಸಿಸ್ಟೆಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM) / ಡಕ್ ಸೇವಕ್
India Post Recruitment 2025- ವಯೋಮಿತಿ (Age Limit)
- ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ.
- ಮೀಸಲಾತಿಯ ಪ್ರಕಾರ:
- OBC: 3 ವರ್ಷ ರಿಯಾಯಿತಿ
- SC/ST: 5 ವರ್ಷ ರಿಯಾಯಿತಿ
- PWD: 10 ವರ್ಷ ರಿಯಾಯಿತಿ
ಅರ್ಜಿ ಶುಲ್ಕ
- SC/ST/PWD/ಮಹಿಳಾ/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
- ಇತರ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ನಿಗದಿಯಾಗಿದೆ.
ಆಯ್ಕೆ ಪ್ರಕ್ರಿಯೆ (Selection Process)
- ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲ!
- Merit List ಆಧಾರದಲ್ಲಿ ಆಯ್ಕೆ
- ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ
ಮಾಸಿಕ ವೇತನ (Salary Details)
- BPM ಹುದ್ದೆ: ₹12,000 – ₹29,380
- ABPM/ಡಕ್ ಸೇವಕ್: ₹10,000 – ₹24,470
ಅರ್ಜಿ ಸಲ್ಲಿಸುವ ವಿಧಾನ (How to Apply Online)
- India Post GDS Online Portal ಗೆ ಭೇಟಿ ನೀಡಿ.
- ಹೆಸರು ನೋಂದಾಯಿಸಿ ಮತ್ತು ಲಾಗಿನ್ ಆಗಿ.
- ಅಪ್ಲಿಕೇಷನ್ ಫಾರ್ಮ್ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರಿಗೆ ಮಾತ್ರ).
- Submit ಮಾಡಿ ಮತ್ತು ಭವಿಷ್ಯದ ಅಗತ್ಯಕ್ಕೆ ಫಾರ್ಮ್ ಡೌನ್ಲೋಡ್ ಮಾಡಿ.
India Post Recruitment 2025 – ಅಧಿಕೃತ ವೆಬ್ಸೈಟ್ & ಮಹತ್ವದ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 3, 2025
- ಅಧಿಕೃತ ವೆಬ್ಸೈಟ್: India Post GDS Online Portal
- ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Karnataka Post Office ಗೆ ಭೇಟಿ ನೀಡಿ.
ಕರ್ನಾಟಕದಲ್ಲಿ ಹುದ್ದೆಗಳ ಪ್ರಮಾಣ (Vacancies in Karnataka)
ಜಿಲ್ಲೆ | ಹುದ್ದೆಗಳ ಸಂಖ್ಯೆ |
ಬೆಂಗಳೂರು ಪೂರ್ವ | 54 |
ಬೆಂಗಳೂರು ದಕ್ಷಿಣ | 13 |
ತುಮಕೂರು | 64 |
ಮೈಸೂರು | 45 |
ಉಡುಪಿ | 56 |
ಹಾಸನ | 50 |
ಧಾರವಾಡ | 29 |
ಬೆಂಗಳೂರು GPO | 4 |
ಶಿವಮೊಗ್ಗ | 36 |
ವಿಜಯಪುರ | 26 |
ಬೀದರ್ | 24 |
ಕೋಲಾರ | 50 |
ಚಿಕ್ಕಮಗಳೂರು | 37 |
ಮಂಗಳೂರು | 23 |
ಶಿರಸಿ | 33 |
ಕೊಡಗು | 33 |
ಮಂಡ್ಯ | 43 |
ಬಳ್ಳಾರಿ | 41 |
ಬಾಗಲಕೋಟೆ | 24 |
ರಾಯಚೂರು | 13 |
ಗದಗ | 9 |
ಕೊಪ್ಪಳ | 22 |
ಬೀದರ್ | 24 |
ಯಾದಗಿರಿ | 18 |
ಚಿಕ್ಕೋಡಿ | 18 |
ಮಾರ್ಚ್ 3ರ ಕೊನೆಯ ದಿನಾಂಕ ಸಮೀಪಿಸುತ್ತಿದೆ. ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಶೀಘ್ರ ಅರ್ಜಿ ಸಲ್ಲಿಸಿ. ಹೆಚ್ಚಿನ ವಿವರಗಳಿಗೆ ಕರ್ನಾಟಕ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ karnatakapost.gov.in ಗೆ ಭೇಟಿ ನೀಡಿ.
1 Comment
Searching job