Snake – ಹಾವು ಎಂಬುದು ನೋಡಲು ಅಪಾಯಕಾರಿಯಾಗಿ ಕಾಣಿಸುವುದಷ್ಟೇ ಅಲ್ಲ, ಅದು ಕಚ್ಚಿದರೇ ಪ್ರಾಣ ಹೋಗುತ್ತದೆ. ಹಾವು ಏನಾದರೂ ವಿಷಪೂರಿತವಾಗಿದ್ದರೆ, ಅದರ ಕಡಿತಕ್ಕೆ ಪ್ರಾಣ ಹೋಗುವುದು ಖಂಡಿತ. ಕೆಲವು ಸಂದರ್ಭಗಳಲ್ಲಿ, ಜನರು ತಮ್ಮ ಅಜಾಗರೂಕತೆಯಿಂದಾಗಿ ಹಾವಿನ ಕಡಿತಕ್ಕೆ ಬಲಿಯಾಗುತ್ತಾರೆ. ಆದರೆ, ಅದೃಷ್ಟ ಚೆನ್ನಾಗಿದ್ದರೆ, ಪ್ರಾಣಾಪಾಯದಿಂದಲೂ ಪಾರಾಗಬಹುದಾಗಿದೆ. ಇದೀಗ ಅಂತಹ ಅದೃಷ್ಟಕ್ಕೆ ಇಲ್ಲೊಂದು ಉತ್ತಮ ಉದಾಹರಣೆಯಾಗಿದೆ ಎನ್ನಬಹುದಾಗಿದೆ.

ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಅತ್ಯಂತ ವಿಷಪೂರಿತ ಹಾವು ದಾಳಿ ಮಾಡಿದೆ. ಆದರೆ ಆಶ್ಚರ್ಯಕರವಾಗಿ, ಅವನು ಪ್ರಾಣದೊಂದಿಗೆ ಬದುಕುಳಿದಿದ್ದಾನೆ. ಅರಣ್ಯದಲ್ಲಿರುವ ಒಂದು ಗುಡಿಸಿಲಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಆ ವ್ಯಕ್ತಿಯ ಮೇಲೆ ಹಾವು ದಾಳಿ ಮಾಡಿದೆ. ದೇವರ ಕೃಪೆಯಿಂದಾಗಿ ಅವನ ಪ್ರಾಣ ಉಳಿದಿದೆ. ಕ್ಷಣಾರ್ಧದಲ್ಲಿ ಅವನು ತನ್ನ ಪ್ರಾಣವನ್ನು ಕಾಪಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಇಂಟರ್ ನೆಟ್ ನಲ್ಲಿ ತುಂಬಾನೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಒಮ್ಮೆ ಶಾಕ್ ಆಗಿದ್ದಾರೆ.
Snake – ಹಾವಿನ ದಾಳಿ: ಟೋಪಿ ವ್ಯಕ್ತಿಯ ಪ್ರಾಣ ಉಳಿಸಿದ್ದು ಹೇಗೆ ಗೊತ್ತಾ?
ವೀಡಿಯೊದಲ್ಲಿ ಕಾಣುವಂತೆ ಅರಣ್ಯದಂತಹ ಪ್ರದೇಶದಲ್ಲಿರುವ ಗುಡಿಸಿನಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದಾನೆ. ಈ ಮರದ ಕೊಠಡಿಯು ಮೇಲೆ ಎಲ್ಲಾ ಬದಿಗಳಿಂದ ತೆರೆದಿರುವಂತೆ ಕಾಣುತ್ತದೆ. ಇದರೊಳಗೆ, ಗೋಡೆಯ ಮೇಲೆ ಒಂದು ಅಪಾಯಕಾರಿ ಹಾವು ಕುಳಿತಿದೆ. ಆ ವ್ಯಕ್ತಿ ಟೋಪಿ ಧರಿಸಿ, ಫೋನ್ ಮಾತನಾಡುತ್ತಾ ಪ್ರಕೃತಿಯನ್ನು ಆಸ್ವಾದಿಸುತ್ತಾ ಮೈಮರೆದಿರುತ್ತಾನೆ. ಆ ವ್ಯಕ್ತಿ ಫೋನ್ ಮಾತನಾಡುತ್ತಿರುವಾಗ, ಹಿಂದಿನಿಂದ ಬಂದ ವಿಷಪೂರಿತ ಹಾವು ಅವನ ತಲೆ ಮೇಲೆ ದಾಳಿ ಮಾಡಿದೆ. ಇಲ್ಲಿ ಅತ್ಯಂತ ಭಯಾನಕ ವಿಷಯವೆಂದರೆ, ಹಾವು ಕಡಿದರೆ, ಅದರ ವಿಷವು ತಲೆಗೆ ಹೋಗಿ ಪ್ರಾಣ ಹೋಗುವ ಸಾಧ್ಯತೆ ಇತ್ತು. ಆದರೆ, ಆ ವ್ಯಕ್ತಿಯ ತಲೆಯ ಮೇಲೆ ಇದ್ದ ಟೋಪಿಯೇ ಅವನ ಪ್ರಾಣವನ್ನು ಕಾಪಾಡಿದೆ. ಒಂದು ವೇಳೆ ಆ ವ್ಯಕ್ತಿ ತಲೆಗೆ ಟೋಪಿ ಧರಿಸಿರದಿದ್ದರೆ, ಹಾವಿನ ಕಡಿತಕ್ಕೆ ಬಲಿಯಾಗುತ್ತಿದ್ದ ಎನ್ನಬಹುದಾಗಿದೆ.
Snake – ವಿಡಿಯೋ ಇಲ್ಲಿದೆ ನೋಡಿ: Click here
ಈ ವೀಡಿಯೊವನ್ನು @AMAZlNGNATURE ಎಂಬ ಎಕ್ಸ್ (ಟ್ವಿಟರ್) ಖಾತೆಯಿಂದ ಶೇರ್ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ 7 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅನೇಕರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾ ಬಳಕೆದಾರರು ವೀಡಿಯೊಗೆ ಸಂಬಂಧಿಸಿದಂತೆ ವಿವಿಧ ಪ್ರತಿಕ್ರಿಯೆಗಳನ್ನು ಕಾಮೆಂಟ್ ಗಳ ಮೂಲಕ ಹರಿಬಿಡುತ್ತಿದ್ದಾರೆ.