Anganwadi Jobs: ಆನ್ ಲೈನ್ ಮೂಲಕ ಮೊದಲ ಬಾರಿಗೆ ಅಂಗನವಾಡಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ…!

3

ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಅಂಗನವಾಡಿಯಲ್ಲಿ ಖಾಲಿಯಿರುವ (Anganwadi Jobs) ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರ ನೇಮಕಾತಿಗೆ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆ ಆಫ್ ಲೈನ್ ಮೂಲಕ ಅರ್ಜೀ ಕರೆಯಲಾಗುತ್ತಿದ್ದ ಸರ್ಕಾರ ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ರಾಜ್ಯದ ಅಂಗನವಾಡಿಗಳಲ್ಲಿ ಖಾಲಿಯಿರು 13593 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ರಾಜ್ಯದ ಅಂಗನವಾಡಿಗಳಲ್ಲಿ 13593 (Anganwadi Jobs) ಅಂಗನವಾಡಿ ಶಿಕ್ಷಕರಿಯರು, ಸಹಾಯಕಿಯರ ನೇಮಕಾತಿಗಾಗಿ ಅರ್ಹರು ಸೂಕ್ತ ದಾಖಲಾತಿಗಳ ಜೊತೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರಿ ಇತ್ತೀಚಿಗೆ ನಡೆದ ಸಭೆಯೊಂದರಲ್ಲಿ ಈ ಸಂಬಂಧ ತೀರ್ಮಾನಿಸಲಾಗಿತ್ತು. ಈ ಮೊದಲು ಅಂಗನವಾಡಿ ಹುದ್ದೆಗಳನ್ನು ಆಫ್ ಲೈನ್ ಮೂಲಕವೇ  ಅರ್ಜಿ ಸಲ್ಲಿಸಲಾಗುತ್ತಿತ್ತು. ಮೊದಲಿಗೆ ಕೆಲವೊಂದು ಜಿಲ್ಲೆಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಮಾಡಲಾಗಿತ್ತು. ಈ ಪ್ರಕ್ರಿಯೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ಆನ್ ಲೈನ್ ಪದ್ದತಿಯನ್ನು ರಾಜ್ಯದಾದ್ಯಂತ ವಿಸ್ತರಣೆ ಮಾಡಿದೆ.

Anganawadi online application 1

ಈ ಅಂಗನವಾಡಿ ಹುದ್ದೆಗಳಿಗೆ (Anganwadi Jobs)  ಅರ್ಜಿ ಸಲ್ಲಿಸುವಂತಹವರು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 12 ನೇ ತರಗತಿ, ಡಿಪ್ಲೋಮಾ ಇಸಿಸಿಐ, ತತ್ಸಮಾನ ಶಿಕ್ಷಣದಲ್ಲಿ ತೇರ್ಗಡೆ ಹೊಂದಿರಬೇಕು. ಸಹಾಯಕಿ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಆಯಾ ಜಿಲ್ಲೆಯವರು, ತಾಲೂಕಿನವರು ಅಂದರೇ ಸ್ಥಳೀಯ ಅರ್ಹರು ಆನ್ ಲೈನ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಬೇರೆ ಜಿಲ್ಲೆ, ತಾಲೂಕಿಗೆ ಸೇರಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಜೊತೆಗೆ ವಾಸಸ್ಥಳ ದೃಢೀಕರಣ, ಡಿ.ಎ.ಆರ್‍.ನಂಬರ್‍, ಆಧಾರ್‍ ಸಹಿತ ಆಯಾ ಗ್ರಾಮದವರು ಕೇಂದ್ರ ಮೂರು ಕಿ.ಮೀ ವ್ಯಾಫ್ತಿಯವರು ಅರ್ಜಿ ಸಲ್ಲಿಸಿದರೇ ಪರಿಗಣಿಸಬಹುದು ಎಂಬ ಸೂಚನೆ ಸಹ ನೀಡಲಾಗಿದೆ.

(Anganwadi Jobs) ಇನ್ನೂ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ಗರಿಷ್ಟ 35 ವರ್ಷದೊಳಗಿರಬೇಕು. ವಿಶೇಷ ಅಗತ್ಯವುಳ್ಳ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು www.karnemakaone.kar.nic.in/abcd/ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

3 thoughts on “Anganwadi Jobs: ಆನ್ ಲೈನ್ ಮೂಲಕ ಮೊದಲ ಬಾರಿಗೆ ಅಂಗನವಾಡಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ…!

Leave a Reply

Your email address will not be published. Required fields are marked *

Next Post

DYFI Protest: ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ದ ಡಿ.ವೈ.ಎಫ್.ಐ ಪ್ರತಿಭಟನೆ

Tue Jul 16 , 2024
ಗುಡಿಬಂಡೆ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳಿದ್ದು, ಅವುಗಳನ್ನು ಕೂಡಲೇ ಬಗೆಹರಿಸಿ ಬಡವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ಇಲ್ಲವಾದಲ್ಲಿ ಆಸ್ಪತ್ರೆಯ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಡಿ.ವೈ.ಎಫ್.ಐ ಸಂಘಟನೆ (DYFI Protest) ಎಚ್ಚರಿಕೆ ನೀಡಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಡಿ.ವೈ.ಎಫ್.ಐ ಸಂಘಟನೆ ವತಿಯಿಂದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ದ ಪ್ರತಿಭಟನೆಯನ್ನು (DYFI Protest) ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ, ಡಿ.ವೈ.ಎಫ್.ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಗುಡಿಬಂಡೆ ತಾಲೂಕು ಅತ್ಯಂತ […]
DYFI Protest
error: Content is protected !!