ಜಗತ್ತಿನಲ್ಲಿ ಆಗಾಗ ಕೆಲವೊಂದು ಪವಾಡಗಳು ನಡೆಯುತ್ತಿರುತ್ತವೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿರುತ್ತವೆ. ಅದೇ ರೀತಿ ಆಂಧ್ರಪ್ರದೇಶ ಪ್ರಸಿದ್ದ ಶ್ರೀಶೈಲಂ ಜಿಲ್ಲೆಯ ದೇವಾಲಯವೊಂದರಲ್ಲಿ ದೊಡ್ಡ ನಾಗರಹಾವು ಶಿವಲಿಂಗವನ್ನು ಸುತ್ತಿಕೊಂಡು ಕಾಣಿಸಿಕೊಂಡಿದ್ದು, ನೆರದಿದ್ದ ಭಕ್ತರು ಆಶ್ಚರ್ಯಗೊಂಡಿದ್ದಾರೆ. ಈ ವೇಳೆ ದೇವಾಲಯದಲ್ಲಿದ್ದ ಕೆಲ ಭಕ್ತರು ವಿಡಿಯೋ ಮಾಡಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ಪಾತಳಗಂಗೆಯಲ್ಲಿ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತಿಕೊಂಡಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ (Viral Video) ಆಗಿದೆ. ಶ್ರೀಶೈಲದ ಪಾತಳ ಗಂಗೆಯಲ್ಲಿ ಚಂದ್ರಲಿಂಗೇಶ್ವರ ಸ್ವಾಮಿಯ ಪುರಾತನ ದೇವಾಲಯವಿದೆ. ಅಲ್ಲಿ ಪ್ರತಿದಿನ ಭಕ್ತರು ಪೂಜೆ ಸಲ್ಲಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ (ಜು.16)ದಂದು ದೇವಾಲಯದ ಆವರಣವನ್ನು ಸ್ವಚ್ಚಗೊಳಿಸಿ ಪೂಜೆ ಸಲ್ಲಿಸಲು ಹೋಗಲಾಯ್ತು. ಈ ಸಮಯದಲ್ಲಿ ದೊಡ್ಡ ನಾಗರಹಾವೊಂದು ಅಲ್ಲಿಗೆ ಬಂದು ಚಂದ್ರಲಿಂಗದ ಸುತ್ತಲೂ ಮಲಗಿರುವುದು ಕಂಡುಬಂದಿದೆ. ಇದನ್ನು ನೋಡಿದ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ.
https://x.com/bigtvtelugu/status/1813074679416168534
ಇನ್ನೂ ಈ ಸಮಯದಲ್ಲಿ ದೇವಾಲಯದಲ್ಲಿದ್ದ ಕೆಲ ಭಕ್ತರು ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ (Viral Video) ಹರಿಬಿಟ್ಟಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಪವಾಡ ಸದೃಶ್ಯವನ್ನು ನೋಡಲು ಸಾಕಷ್ಟು ಭಕ್ತರು ಶ್ರೀಶೈಲ ಭಕ್ತರು ಸೇರಿದ್ದರು. ದೇವಾಲಯದ ಆವರಣಗಳಲ್ಲಿ ಹಾವುಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ. ಆದರೆ ಇಲ್ಲಿಯವರೆಗೂ ಈ ರೀತಿಯ ಘಟನೆ ನಡೆದಿಲ್ಲ ಎಂದು ಅನೇಕ ಭಕ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇವಾಲಯದಲ್ಲಿ ಶಿವಲಿಂಗವನ್ನು ಸುತ್ತಿಕೊಂಡಿರುವ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇದೊಂದು ಪವಾಡ ಎಂದು ಭಕ್ತರು ದೇಗುಲದತ್ತ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.