Newlywed Woman – ನವವಿವಾಹಿತೆ ಆತ್ಮಹತ್ಯೆ: ಅತ್ತೆ-ಭಾವನಿಂದ ವರ್ಣಭೇದ ಕಿರುಕುಳ, ಡೆತ್ ನೋಟ್‌ನಲ್ಲಿ ಸತ್ಯ ಬಯಲು

Newlywed Woman – ಕನಸಿನ ಜೀವನಕ್ಕೆ ಕಾಲಿಟ್ಟ ನವವಿವಾಹಿತೆಯೊಬ್ಬಳು, ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ಜೀವಕ್ಕೆ ಕೊನೆ ಹಾಡಿಕೊಂಡ ಘಟನೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ. ಕಾರಣ? ಅತ್ತೆ ಮತ್ತು ಭಾವನಿಂದ ಸತತವಾಗಿ ಎದುರಾದ ವರ್ಣಭೇದ ಕಿರುಕುಳ. “ನೀನು ಕಪ್ಪಾಗಿದ್ದೀಯಾ” ಎಂದು ಮಾನಸಿಕವಾಗಿ ಹಿಂಸಿಸಿದ್ದರಿಂದ ಮನನೊಂದ ಯುವತಿ, ಆತ್ಮಹತ್ಯೆಗೆ ಶರಣಾದಳು. ತನ್ನ ಸಾವಿಗೆ ಅತ್ತೆ ಮತ್ತು ಭಾವನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿರುವ ಈ ಯುವತಿಯ ಕಥೆ, ಸಮಾಜದ ಕೊಳಕು ಮನಸ್ಥಿತಿಯನ್ನು ಬಯಲಿಗೆಳೆದಿದೆ.

Newlywed Woman – ವರ್ಣಭೇದ ಕಿರುಕುಳದಿಂದ ಆತ್ಮಹತ್ಯೆ?

ಗದಗದ ಬೆಟಗೇರಿ ಶರಣಬಸವೇಶ್ವರ ನಗರದ ನಿವಾಸಿಯಾದ ಅಮರೇಶ್ ಮತ್ತು ಬಳ್ಳಾರಿಯ ಪೂಜಾ ಅವರ ವಿವಾಹ ಕೇವಲ ನಾಲ್ಕು ತಿಂಗಳ ಹಿಂದೆ ಅದ್ದೂರಿಯಾಗಿ ನೆರವೇರಿತ್ತು. ಆದರೆ, ಮದುವೆಯ ಸಂತಸ ದೀರ್ಘಕಾಲ ಉಳಿಯಲಿಲ್ಲ. ಅತ್ತೆ ಶಶಿಕಲಾ ಮತ್ತು ಭಾವ ವೀರನಗೌಡ, ಪೂಜಾಳನ್ನು “ನೀನು ಕಪ್ಪಾಗಿದ್ದೀಯಾ, ನಮ್ಮ ಅಮರೇಶ್‌ಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗುತ್ತಿದ್ದಳು” ಎಂದು ಪದೇಪದೇ ಕೀಳಾಗಿ ಮಾತನಾಡಿ ಕಿರುಕುಳ ನೀಡಿದರು. ಇದರ ಜೊತೆಗೆ, “ನೀನು ನೋಡಲು ಚೆನ್ನಾಗಿಲ್ಲ, ಅಡುಗೆಯೂ ಸರಿಯಾಗಿ ಮಾಡಲು ಬರುವುದಿಲ್ಲ” ಎಂದು ನಿರಂತರವಾಗಿ ಮಾನಸಿಕವಾಗಿ ಹಿಂಸಿಸಿದರು. ಈ ವರ್ಣಭೇದ ಕಿರುಕುಳಕ್ಕೆ ತಾಳಲಾಗದೆ, ಏಪ್ರಿಲ್ 15, 2025 ರಂದು ಪೂಜಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು.

Newlywed woman dies by suicide due to colorism and harassment from in-laws in Karnataka

Newlywed Woman — ಡೆತ್ ನೋಟ್‌ ನಲ್ಲಿ ಅಡಗಿತ್ತು ಸತ್ಯ

ಪೂಜಾ ತನ್ನ ಸಾವಿಗೆ ಮುನ್ನ ಡೆತ್ ನೋಟ್‌ ಬರೆದಿದ್ದಾಳೆ. “ನನ್ನ ಆತ್ಮಹತ್ಯೆಗೆ ಅತ್ತೆ ಶಶಿಕಲಾ ಮತ್ತು ಭಾವ ವೀರನಗೌಡ ಕಾರಣ. ಇವರಿಗೆ ಕಠಿಣ ಶಿಕ್ಷೆಯಾಗಲಿ. ಅಪ್ಪ-ಅಮ್ಮ, ನನ್ನನ್ನು ಕ್ಷಮಿಸಿ” ಎಂದು ಬರೆದಿಟ್ಟಿದ್ದಾಳೆ. ಈ ಡೆತ್ ನೋಟ್‌ ಆಧರಿಸಿ, ಪೊಲೀಸರು ಶಶಿಕಲಾ ಮತ್ತು ವೀರನಗೌಡರನ್ನು ಬಂಧಿಸಿದ್ದಾರೆ. ಎಸ್ಪಿ ಬಿ. ಎಸ್. ನೇಮಗೌಡ, “ಪ್ರಕರಣದ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

Newlywed Woman – ಕುಟುಂಬದ ಆಕ್ರೋಶ

ಪೂಜಾಳ ಕುಟುಂಬಸ್ಥರು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಅವಳು ತನ್ನ ಅಳಲನ್ನು ಕುಟುಂಬದವರೊಂದಿಗೆ ಹಂಚಿಕೊಂಡಿದ್ದಳು. ಕುಟುಂಬಸ್ಥರು ಸಮಾಧಾನ ಮಾಡಿದರೂ, ಕಿರುಕುಳ ತಡೆಗಟ್ಟಲಾಗಲಿಲ್ಲ. “ಅತ್ತೆ ಮತ್ತು ಭಾವನಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಪೂಜಾಳ ಕುಟುಂಬ ಒತ್ತಾಯಿಸಿದೆ.  ಪೂಜಾಳ ಗಂಡ ಅಮರೇಶ್, ಶಹಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಅವನಿಗೆ ಬೇರೆ ಕಡೆ ವರ್ಗಾವಣೆಯಾಗಿತ್ತು. ಈ ಸಂದರ್ಭದಲ್ಲಿ ಪೂಜಾ ಮನೆಯಲ್ಲಿಯೇ ಇರಬೇಕಿತ್ತು. ಆದರೆ, ಈ ಅವಧಿಯಲ್ಲಿ ಅತ್ತೆ ಮತ್ತು ಭಾವನ ಕಿರುಕುಳ ತಾರಕಕ್ಕೇರಿತು, ಅಂತಿಮವಾಗಿ ಆಕೆಯ ಜೀವನವನ್ನೇ ಕಸಿದುಕೊಂಡಿತು.

Read this also : Gadag : ಡೆತ್‌ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ, ಕುಟುಂಬಸ್ಥರಿಂದ ಗಂಭೀರ ಆರೋಪ?

ಈ ದುರ್ಘಟನೆಯ ಹಿಂದಿನ ಮುಖ್ಯ ಕಾರಣ, ವರ್ಣಭೇದದ ಮನಸ್ಥಿತಿ. ಮಗನಿಗೆ ಕನ್ಯೆ ಸಿಗುತ್ತಿಲ್ಲ ಎಂದು ಊರು ಅಲೆದಾಡಿದ ತಾಯಿ, ಕೊನೆಗೆ ಪೂಜಾಳ ಜೊತೆಗೆ ಮದುವೆ ಮಾಡಿದ್ದರು. ಆದರೆ ಹೊಸದಾಗಿ ಮದುವೆಯಾಗಿ ಮನೆಗೆ ಬಂದ್ ಪೂಜಾಳಿಗೆ ನೀನು ಕಪ್ಪಾಗಿದ್ಯಾ ಎಂದು ಕಿರುಕುಳ ನೀಡಿದ್ದರಿಂದ, ಪೂಜಾ ಸಾವಿನ ಮನೆ ಸೇರಿದ್ದಾಳೆ. ಇಂದಿನ ಸಮಾಜದಲ್ಲಿ ಇನ್ನೂ ವರ್ಣಬೇದ ನೀತಿ ಜಾರಿಯಲ್ಲಿರೋದು ವಿಷಾದನೀಯವಾದ ಸಂಗತಿ ಎಂದೇ ಹೇಳಬಹುದಾಗಿದೆ.

Leave a Comment

Your email address will not be published. Required fields are marked *

Scroll to Top