NIA ನಲ್ಲಿ ಕೆಲಸ ಮಾಡಲು ಆಸೆಯಿದೆಯೇ? ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿದೆ 164 ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!

1

NIA-ಅನೇಕರಿಗೆ ಪೊಲೀಸ್ ಆಗಿ ಕೆಲಸ ಮಾಡಲು ಆಸೆಯಿರುತ್ತದೆ. ಅಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿಯಿರುವ ಹೆಡ್ ಕಾನಿಸ್ಟೇಬಲ್ ಹುದ್ದೆಗಳನ್ನು ಭರ್ತಿ (NIA) ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 164 ಹುದ್ದೆಗಳು ಖಾಲಿಯಿದ್ದು, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹಲವು ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯು ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 164 ಹುದ್ದೆಗಳು ಖಾಲಿಯಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿ ಸಲ್ಲಿಸಬಹುದಾಗಿದೆ. ನ.11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿ.26 ಕೊನೆಯ ದಿನಾಂಕವಾಗಿದೆ. ಈ ಕೆಳಗೆ ಕೆಲವೊಂದು ಪ್ರಮುಖ ಮಾಹಿತಿ ನೀಡಲಾಗಿದೆ.

NIA jobs notification 164 posts 0

ನೋಟಿಫಿಕೇಷನ್ ಲಿಂಕ್ ಇಲ್ಲಿದೆ ನೋಡಿ: Click Here

  • ಹುದ್ದೆಗಳ ವಿವರ
    • ಹುದ್ದೆಗಳು : ಇನ್ಸ್‌ಪೆಕ್ಟರ್, ಹೆಡ್ ಕಾನಿಸ್ಟೇಬಲ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ , ಹೆಡ್ ಕಾನಿಸ್ಟೇಬಲ್
    • ಖಾಲಿ ಹುದ್ದೆಗಳ ಸಂಖ್ಯೆ: 164
    • ಉದ್ಯೋಗ ಸ್ಥಳ : ಭಾರತದಾದಂತ್ಯ
  • ಶೈಕ್ಷಣಿಕ ಅರ್ಹತೆ:
    • ರಾಷ್ಟ್ರೀಯ ತನಿಖಾ ಸಂಸ್ಥೆಯ ಮಾನದಂಡಗಳ ಪ್ರಕಾರ ಇನ್ಸ್ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳು ಪದವಿ ಪಡೆದಿರಬೇಕು.
    • ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೂ ನಿಗದಿತ ವಿಭಾಗದಲ್ಲಿ ಪದವಿ ಹಾಗೂ ಹೆಡ್ ಕಾನಿಸ್ಟೇಬಲ್ ಹುದ್ದೆಗೆ ಪಿಯುಸಿ ಪೂರ್ಣಗೊಳಿಸಿರಬೇಕು.
  • ವಯಸ್ಸಿನ ಮಿತಿ ಹಾಗೂ ಆಯ್ಕೆ ಪ್ರಕ್ರಿಯೆ:
    • ರಾಷ್ಟ್ರೀಯ ತನಿಖಾ ಸಂಸ್ಥೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ವೇತನ ವಿವರಗಳು
    • ಇನ್ಸ್‌ಪೆಕ್ಟರ್                     : ರೂ. 44,900-1,42,400
    • ಸಬ್ ಇನ್ಸ್‌ಪೆಕ್ಟರ್               : ರೂ. 35,400-1,12,400
    • ಸಹಾಯಕ ಸಬ್ ಇನ್ಸ್‌ಪೆಕ್ಟರ್   : ರೂ. 29,200-92,300
    • ಹೆಡ್ ಕಾನಿಸ್ಟೇಬಲ್             : ರೂ. 25,500-81,700
  • ಅರ್ಜಿ ಸಲ್ಲಿಸುವ ವಿಧಾನ:
    • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ವೆಬ್ಸೈಟ್ ಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಿ. ಈ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ SP (Adm), NIA HQ, CGO ಕಾಂಪ್ಲೆಕ್ಸ್ ಎದುರು, ಲೋಧಿ ರಸ್ತೆ, ನವದೆಹಲಿ-110003 ಈ ವಿಳಾಸಕ್ಕೆ ಸಲ್ಲಿಸಬೇಕು.

One thought on “NIA ನಲ್ಲಿ ಕೆಲಸ ಮಾಡಲು ಆಸೆಯಿದೆಯೇ? ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿದೆ 164 ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!

Leave a Reply

Your email address will not be published. Required fields are marked *

Next Post

Snake: ಪದೇ ಪದೇ ಯುವಕನನ್ನು ಕಚ್ಚಿದ ಹಾವು, ಬೆಂಬಿಡದೇ ಕಚ್ಚುತ್ತಿತ್ತಂತೆ, ಭಾರಿ ಚರ್ಚೆಗೆ ಕಾರಣವಾದ ಘಟನೆ…!

Tue Nov 19 , 2024
Snake – ಹಾವಿನ ದ್ವೇಷ 12 ವರ್ಷ ಎಂದು ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕನಿಗೆ ಹಾವೊಂದು ಪದೇ ಪದೇ ಕಚ್ಚಿದೆ. ಉತ್ತರ ಪ್ರದೇಶದ ಸಹಾರಾನಪೂರ್‍ ವ್ಯಾಪ್ತಿಯ ಬದಗಾವ್ ಎಂಬ ಗ್ರಾಮದಲ್ಲಿ ನಡೆದಿದೆ. (Snake) ಗ್ರಾಮದ ಓರ್ವ ಯುವಕನಿಗೆ ಪದೇ ಪದೇ ಹಾವೊಂದು ಕಚ್ಚಿದೆ. ಈ ಹಾವನ್ನು ಹಿಡಿದ ಸ್ನೇಕ್ ಕ್ಯಾಚ್ಚರ್‍ ಮೇಲೂ ಅದು ಕೋಪಗೊಂಡಿದೆ. ಈ ವಿಚಿತ್ರವಾದ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, […]
Snake mystery in UP 0
error: Content is protected !!