Snake – ಹಾವಿನ ದ್ವೇಷ 12 ವರ್ಷ ಎಂದು ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕನಿಗೆ ಹಾವೊಂದು ಪದೇ ಪದೇ ಕಚ್ಚಿದೆ. ಉತ್ತರ ಪ್ರದೇಶದ ಸಹಾರಾನಪೂರ್ ವ್ಯಾಪ್ತಿಯ ಬದಗಾವ್ ಎಂಬ ಗ್ರಾಮದಲ್ಲಿ ನಡೆದಿದೆ. (Snake) ಗ್ರಾಮದ ಓರ್ವ ಯುವಕನಿಗೆ ಪದೇ ಪದೇ ಹಾವೊಂದು ಕಚ್ಚಿದೆ. ಈ ಹಾವನ್ನು ಹಿಡಿದ ಸ್ನೇಕ್ ಕ್ಯಾಚ್ಚರ್ ಮೇಲೂ ಅದು ಕೋಪಗೊಂಡಿದೆ. ಈ ವಿಚಿತ್ರವಾದ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, (Snake) ಈ ಹಾವಿನ ಬಗ್ಗೆ ಸ್ಥಳೀಯವಾಗಿ ಚರ್ಚೆ ಸಹ ಜೋರಾಗಿ ನಡೆಯುತ್ತಿದೆ.
ಈ ಕುರಿತು ಕುಟುಂಬಸ್ಥರು ಹೇಳುವ (Snake) ಪ್ರಕಾರ ಚಿರಾವು ಗ್ರಾಮದ ಚರಣ್ ಸಿಂಗ್ ಎಂಬಾತನ ಪುತ್ರ ಗೌರವ್ ಎಂಬ ಹುಡುಗನಿಗೆ ಕೆಲವು ದಿನಗಳಿಂದ ಹಾವು ಬೆನ್ನು ಬಿದ್ದಿದೆ. ಈ (Snake) ಹಾವು ಮೊದಲು ಗೌರವ್ ಮನೆಯ ಸಮೀಪ ಕಾಣಿಸಿಕೊಂಡಿತ್ತಂತೆ. ಬಳಿಕ ಆತ ಜಮೀನು ಕಡೆಗೆ ಹೋದಾಗ ಮೂರು ಬಾರಿ ಕಚ್ಚಿದೆಯಂತೆ. ಕಚ್ಚಿದಾಗಲೆಲ್ಲಾ ಗೌರವ್ ಗೆ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸುತ್ತಿದ್ದರಂತೆ. ಆದರೆ ಆ ಹಾವು ಅದೇ ಕೆಲಸ ಎಂಬಂತೆ (Snake) ಪದೇ ಪದೇ ಗೌರವ್ ಹಿಂದೆ ಬಿದಿದ್ದರಿಂದ ಆತನ ಕುಟುಂಬಸ್ಥರು ಭಯಭೀತರಾಗಿದ್ದರಂತೆ. ಈ ಕಾರಣದಿಂದ ಕುಟುಂಬಸ್ಥರು ಸ್ನೇಕ್ ಕ್ಯಾಚರ್ ಗೆ ಕರೆ ಮಾಡಿದ್ದಾರೆ.
ಬಳಿಕ ಸ್ನೇಕ್ ಕ್ಯಾಚರ್ (Snake) ಹಾವನ್ನು ಹಿಡಿದಿದ್ದಾನೆ. ಅದು ಹೆಣ್ಣು ಹಾವು, ವಯಸ್ಸಿನಲ್ಲಿದೆ ಎಂದು ಗುರ್ತಿಸಿದ್ದಾನೆ. ಅದನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡಲು ಹೋಗುತ್ತಿದ್ದಾಗ ಹಾವು ತಪ್ಪಿಸಿಕೊಳ್ಳಲು ಮುಂದಾಗಿದೆ. ಆಗಲೂ ಅದೇ ಯುವಕನಿಗೆ ಹಾವು ಕಚ್ಚಿದೆ. ಬಳಿಕ ಅದಕ್ಕೆ ಗೌರವ್ ಸ್ವಯಂ ಚಿಕಿತ್ಸೆ ಮಾಡಿಕೊಂಡಿದ್ದಾನೆ. (Snake) ಹಾವನ್ನು ದೂರದ ಪ್ರದೇಶಕ್ಕೆ ಬಿಟ್ಟು ಬಂದು ಆ ಹಾವು ಇನ್ನು ಬರೊಲ್ಲ ಎಂದು ಭಾವಿಸಿದ್ದರೇ, ಮತ್ತೆ ಗೌರವ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆತನನ್ನು ಕಚ್ಚಿದೆ. (Snake) ಬಳಿಕ ಗೌರವ್ ಕುಟುಂಬಸ್ಥರು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಜೊತೆಗೆ ಸ್ತಳೀಯ ಭೂತ ವೈದ್ಯನನ್ನು ಸಹ ಸಂಪರ್ಕ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಪದೇ ಪದೇ ಹಾವು (Snake) ಗೌರವ್ ನನ್ನು ಕಚ್ಚುತ್ತಿರುವ ಕಾರಣದಿಂದ ಗ್ರಾಮಸ್ಥರು ಸಹ ಚಿಂತೆಗೆ ಗುರಿಯಾಗಿದ್ದಾರೆ. ಇದೀಗ ಈ ವಿಚಿತ್ರ ಘಟನೆ ಗ್ರಾಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆ ಹಾವು ಏತಕ್ಕಾಗಿ (Snake) ಗೌರವ್ ನನ್ನೆ ಟಾರ್ಗೆಟ್ ಮಾಡಿ ಕಚ್ಚುತ್ತಿದೆ ಎಂದು ಪತ್ತೆ ಹಚ್ಚಲು ಕುಟುಂಬಸ್ಥರು ಮಾತ್ರವಲ್ಲದೇ (Snake) ಗ್ರಾಮಸ್ಥರು ಹಲವು ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ.