Viral Video – ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಭಾನುವಾರ ಗೋದಾವರಿ ನದಿಗೆ ಹಾರಿ ಪ್ರಾಣ ಬಿಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಇಬ್ಬರು ಪತ್ರಕರ್ತರು ಜೀವ ಉಳಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಯುವಕನೋರ್ವ ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಪತ್ರಕರ್ತರಿಬ್ಬರು ಅದನ್ನು ಗಮನಿಸಿ ಸಮಯಪ್ರಜ್ಞೆ ಬಳಸಿ ಯುವಕನ ಪ್ರಾಣ ಉಳಿಸಿದ್ದಾರೆ. ಇನ್ನೂ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು ಏಕೆ ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ (Viral Video) ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.
ಇತ್ತೀಚಿಗೆ ಅನೇಕರು ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯೇ (Viral Video) ಕೊನೆಯ ಪರಿಹಾರ ಎಂಬಂತೆ ಭಾವಿಸಿ ಆತ್ಮಹತ್ಯೆಗೆ ಮುಂದಾಗುತ್ತಿರುತ್ತಾರೆ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ ಎನ್ನಬಹುದಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಮುಂಬೈನ ಅಟಲ್ ಸೇತುವಿನ ಮೇಲೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು, ಕ್ಯಾಬ್ ಡ್ರೈವರ್ ಹಾಗೂ ಪೊಲೀಸ್ ಅಧಿಕಾರಿಗಳು ಆಕೆಯ ಜೀವ ಉಳಿಸಿದ್ದರು. ಇದೀಗ ಅದೇ (Viral Video) ರೀತಿಯ ಘಟನೆಯೊಂದರಲ್ಲಿ ಪತ್ರಕರ್ತರಿಬ್ಬರು ಆತ್ಮಹತ್ಯೆಗೆ ಮುಂದಾಗಿದ್ದ ಯುವಕನನ್ನು ರಕ್ಷಣೆ ಮಾಡಿದ್ದಾರೆ.
ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ (Viral Video) ಪ್ರಯತ್ನಿಸಿದ ಯುವಕನೋಬ್ಬನ್ನನ್ನು ಪತ್ರಕರ್ತರು ಕಾಪಾಡಿದ್ದಾರೆ. ಪತ್ರಕರ್ತರಾದ ಮೊಹಮ್ಮದ್ ಅಬ್ದುಲ್ ಘನಿ ಮತ್ತು ಶೇಖ್ ಜಾಕೀರ್ ಎನ್ನಲಾಗಿದೆ. ಈ ಇಬ್ಬರು ಸೇತುವೆಯ ಮೇಲೆ ಬೈಕ್ನಲ್ಲಿ ಪ್ರಯಾಣಿಸುವಾಗ ಸೇತುವೆಯ ಕಟ್ಟೆಯ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಗಮನಿಸಿದ್ದಾರೆ. ಆತ ಆತ್ಮಹತ್ಯೆಗೆ ಯತ್ನಿಸುತ್ತಿರಬಹುದು ಎನ್ನುವ ಸಂದೇಹ ಉಂಟಾಗಿದೆ. ಇದೇ ಕಾರಣಕ್ಕೆ ತಕ್ಷಣ ಬೈಕ್ ನಿಲ್ಲಿಸಿ ಆತನನ್ನು ಮಾತನಾಡಿಸಿದ್ದಾರೆ. ಬಳಿಕ ಆ ವ್ಯಕ್ತಿ ಕೆಳಗೆ ಹಾರಲು ಪ್ರಯತ್ನಿಸಿದ್ದಾನೆ. ನಂತರ ಇಬ್ಬರೂ (Viral Video) ಹೋಗಿ ಆತನನ್ನು ಗಟ್ಟಿಯಾಗಿ ಹಿಡಿದುಕೊಂಡು ಕೆಳಕ್ಕೆ ಬೀಳದಂತೆ ರಕ್ಷಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ (Viral Video) ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ನದಿಗೆ ಹಾರಲು ಪ್ರಯತ್ನಿಸಿದ್ದು ಹಾಗೂ ರಕ್ಷಣೆ ಮಾಡುವುದನ್ನು ಸರಿಯಾಗಿ ಕಾಣಿಸುವುದಿಲ್ಲ. ಪತ್ರಕರ್ತರು ತಮ್ಮ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವ್ಯಕ್ತಿಯ ರಕ್ಷಣೆ ಮಾಡುವುದರಿಂದ ವಿಡಿಯೋ ಸರಿಯಾಗಿ ರೆಕಾರ್ಡ್ ಆಗಿಲ್ಲ. ಆದರೆ ಪತ್ರಕರ್ತರು ಯುವಕರನ್ನು ರಕ್ಷಣೆ ಮಾಡಿರುವುದು ತಿಳಿಯುತ್ತದೆ. ಇನ್ನೂ ಪತ್ರಕರ್ತರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.