Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ನುಲಿಗುಂಬ ಗ್ರಾಮಸ್ಥರ ಮನವಿಯಂತೆ ನುಲಿಗುಂಬ ಕೆರೆಗೆ ಸರಾಗವಾಗಿ ನೀರು ಬರಲು 20 ಲಕ್ಷ ವೆಚ್ಚದಲ್ಲಿ ಕಾಲುವೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿ, ಸ್ಥಳೀಯ ಗ್ರಾಮಸ್ಥರು ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
Local News – ಕಾಲುವೆ ಅಭಿವೃದ್ದಿಗೆ 20 ಲಕ್ಷ ಅನುದಾನ
ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ನುಲಿಗುಂಬ ಕೆರೆಗೆ ನೀರು ಸರಾಗವಾಗಿ ಹರಿದು ಬರಲು ಸಮಸ್ಯೆಯಾಗಿತ್ತು. ಕಾಲುವೆಯಲ್ಲಿ ಗಿಡಗಂಟೆಗಳು, ಹೂಳು ತುಂಬಿತ್ತು. ಇದರಿಂದ ಗ್ರಾಮಸ್ಥರು ಕಾಲುವೆಯನ್ನು ಅಭಿವೃದ್ದಿ ಮಾಡುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಯಂತೆ ಇದೀಗ 20 ಲಕ್ಷ ಅನುದಾನವನ್ನು ಕಾಲುವೆ ಅಭಿವೃದ್ದಿ ಕಾಮಗಾರಿಗೆ ಒದಗಿಸಲಾಗಿದೆ. ಗ್ರಾಮಸ್ಥರೂ ಸಹ ಸರ್ಕಾರದ ಕೆಲಸ ಅವರು ನೋಡಿಕೊಳ್ಳುತ್ತಾರೆ ಎಂದು ಸುಮ್ಮನಿರದೇ, ಕಳಪೆ ಕಾಮಗಾರಿಯಾದಲ್ಲಿ ನನ್ನ ಗಮನಕ್ಕೆ ತನ್ನಿ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸುವ ತನಕ ನಾನು ಬಿಲ್ ಮಾಡಲು ಬಿಡುವುದಿಲ್ಲ. ಇನ್ನೂ ಗ್ರಾಮಸ್ಥರು ಅಲ್ಲಲ್ಲಿ ಮೋರಿ ಕಾಮಗಾರಿಗಳು ಬಾಕಿಯಿದೆ ಎಂದು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಅವುಗಳನ್ನು ಸಹ ಪೂರ್ಣಗೊಳಿಸುವ ಕೆಲಸ ಮಾಡುತ್ತೇನೆ. ಜೊತೆಗೆ ಎಲ್ಲೋಡು ಭಾಗದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳನ್ನು ಸಹ ಪರಿಶೀಲನೆ ಮಾಡಿದ್ದೇನೆ ಎಂದರು.
Local News – ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ದಿ ನನ್ನ ಕರ್ತವ್ಯ
ಇನ್ನೂ ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ದಿಗೆ ಅನುದಾನಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ನಡೆದ ಸಚಿವ ಸಂಪುಟದಲ್ಲಿ ಚರ್ಚೆಯಾಗದ ಕುರಿತು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಗುಡಿಬಂಡೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯ ಅದನ್ನು ಮಾಡೇ ಮಾಡುತ್ತೇನೆ. ಪ್ರವಾಸೋದ್ಯಮ ವಿಚಾರದ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ಪಡೆಯುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ದಿಗೆ ಬೇಕಾದ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿದ ಬಳಿಕ ನಮ್ಮ ಪ್ರಸ್ತಾವನೆಗೆ ಅನುಮೋದನೆ ಸಿಗುತ್ತದೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಮುಗಿಸಿ ಅನುದಾನವನ್ನು ತರುತ್ತೇನೆ ಎಂದು ಭರವಸೆ ನೀಡಿದರು.
Local News – ಗ್ರಾ.ಪಂ ಅವ್ಯವಹಾರಗಳ ಕುರಿತು ತನಿಖೆಗೆ ಸೂಚನೆ
ಇದೇ ಸಮಯದಲ್ಲಿ ಎಲ್ಲೋಡು ಗ್ರಾ.ಪಂ ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು, ಕೇವಲ ಎಲ್ಲೋಡು ಗ್ರಾಮ ಪಂಚಾಯತಿ ಮಾತ್ರವಲ್ಲ, ಕೆಲವೊಂದು ಪಂಚಾಯತಿಗಳಲ್ಲಿ ಅವ್ಯವಹಾರಗಳು ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಎಲ್ಲಾ ಗ್ರಾಮ ಪಂಚಾಯತಿಗಳನ್ನು ತನಿಖೆ ಮಾಡುವಂತೆ ಜಿಪಂ ಸಿಇಒ ರವರಿಗೆ ತಿಳಿಸಿದ್ದೇನೆ. ಶೀಘ್ರದಲ್ಲೇ ಈ ಸಂಬಂಧ ತನಿಖೆ ನಡೆಸಿ ವರದಿ ನೀಡುತ್ತಾರೆ. ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ದ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇನೆ ಎಂದರು.
Read this also : ಎಲ್ಲೋಡು ಗ್ರಾ.ಪಂ ನಲ್ಲಿ ಹಣ ದುರ್ಬಳಕೆ ಆರೋಪ, ಪಂಚಾಯತಿ ಮುಂದೆ ಸ್ಥಳೀಯರ ಆಕ್ರೋಷ
ಈ ವೇಳೆ ಕಾಂಗ್ರೇಸ್ ಪಕ್ಷದ ಮುಖಂಡರಾದ ಲಕ್ಷ್ಮೀನಾರಾಯಣ, ನರಸಿಂಹಮೂರ್ತಿ, ಪ್ರಕಾಶ್, ರಾಜಾರೆಡ್ಡಿ, ಮಂಜುನಾಥ್, ಅಕ್ಕಲರೆಡ್ಡಿ, ಹನುಮಂತರೆಡಡಿ, ವೆಂಕಟೇಶ್, ಗಂಗಿರೆಡ್ಡಿ ಸೇರಿದಂತೆ ಎಲ್ಲೋಡು ಭಾಗದ ಮುಖಂಡರು ಹಾಜರಿದ್ದರು.