ಲೋನ್ (Loan) ಪಡೆಯುವವರಿಗೆ ಆರ್‌ಬಿಐ ಶಾಕ್! ಜಾರಿಗೆ ಬರಲಿದೆ ಕಠಿಣ ನಿಯಮ.. ಸಿಬಿಲ್ ಸ್ಕೋನ್ ಕಮ್ಮಿ ಇದ್ದರೆ ಕಷ್ಟ ಗ್ಯಾರಂಟಿ!

ನೀವೇನಾದರೂ ಬ್ಯಾಂಕ್‌ನಿಂದ ಪರ್ಸನಲ್ ಲೋನ್, ಹೋಮ್ ಲೋನ್ ಅಥವಾ ಕಾರ್ ಲೋನ್ (Loan) ಪಡೆಯುವ ಯೋಚನೆಯಲ್ಲಿದ್ದೀರಾ? ಹಾಗಾದರೆ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಎಷ್ಟಿದೆ ಎಂಬುದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಏಕೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಾಲಗಾರರಿಗೆ ಒಂದು ಬಿಗ್ ಶಾಕ್ ನೀಡಲು ಸಜ್ಜಾಗಿದ್ದು, ಹೊಸ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.

RBI's proposed ECL framework could make loan approvals tougher for borrowers with CIBIL scores below 730.

ಏನಿದು ಹೊಸ ನಿಯಮ?

ಮುಂದಿನ ವರ್ಷದ ಏಪ್ರಿಲ್‌ನಿಂದ ‘ಎಕ್ಸ್‌ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL) ಎಂಬ ಹೊಸ ಫ್ರೇಮ್‌ವರ್ಕ್ ಅನ್ನು ಜಾರಿಗೆ ತರಲು RBI ನಿರ್ಧರಿಸಿದೆ. ಈ ಹೊಸ ನಿಯಮಗಳ ಅನ್ವಯ, ನಿಮ್ಮ ಸಿಬಿಲ್ ಸ್ಕೋರ್ 730 ಕ್ಕಿಂತ ಕಡಿಮೆಯಿದ್ದರೆ, ಭವಿಷ್ಯದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯುವುದು ಬಹುತೇಕ ಅಸಾಧ್ಯವಾಗಬಹುದು. ಕ್ರೆಡಿಟ್ ಹಿಸ್ಟರಿ ಸರಿಯಿಲ್ಲದವರ ಅಥವಾ ಕಡಿಮೆ ಸ್ಕೋರ್ ಇರುವವರ ಸಾಲದ ಅರ್ಜಿಗಳನ್ನು ಬ್ಯಾಂಕುಗಳು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುವ ಸಾಧ್ಯತೆಗಳೇ ಹೆಚ್ಚು. ಬ್ಯಾಂಕುಗಳಿಗೆ ಸಾಲ ನೀಡುವ ವಿಚಾರದಲ್ಲಿ RBI ಮತ್ತಷ್ಟು ಕಠಿಣ ನಿಯಮಗಳನ್ನು ವಿಧಿಸಿದೆ. Read this also : ತಂದೆಯ ಮರಣದ ನಂತರ ಅವರ ಸಾಲವನ್ನು ಮಕ್ಕಳು ತೀರಿಸಬೇಕೇ? ಕಾನೂನು ಮತ್ತು RBI ನಿಯಮಗಳು ಏನು ಹೇಳುತ್ತವೆ?

ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಎದುರಾಗುವ ಸಮಸ್ಯೆಗಳೇನು?

ಬ್ಯಾಂಕಿಂಗ್ ವಲಯದಲ್ಲಿ ECL (Expected Credit Loss) 2026ರ ಫ್ರೇಮ್‌ವರ್ಕ್ ಒಂದು ಮಹತ್ವದ ಸುಧಾರಣೆಯಾಗಲಿದೆ. ಸಿಬಿಲ್ ಸ್ಕೋರ್ 730 ಕ್ಕಿಂತ ಕಡಿಮೆ ಇರುವ ಗ್ರಾಹಕರು ಇನ್ಮುಂದೆ ಕಠಿಣ ಪರಿಶೀಲನೆಗೆ ಒಳಪಡುತ್ತಾರೆ. ಇವರಿಗೆ ಸಾಲ ಮಂಜೂರಾದರೂ ಈ ಕೆಳಗಿನ ಸಮಸ್ಯೆಗಳು ಎದುರಾಗಬಹುದು:

  • ಹೆಚ್ಚಿನ ಬಡ್ಡಿ ದರ: ಸಾಮಾನ್ಯ ಗ್ರಾಹಕರಿಗಿಂತ ದುಬಾರಿ ಬಡ್ಡಿದರ ಪಾವತಿಸಬೇಕಾಗುತ್ತದೆ.
  • ಹೆಚ್ಚುವರಿ ಭದ್ರತೆ (Collateral): ಸಾಲ ಪಡೆಯಲು ಹೆಚ್ಚುವರಿ ಆಸ್ತಿ ಅಥವಾ ಗ್ಯಾರಂಟಿಯನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ.

ಗಮನಿಸಿ: ಅಂಕಿ-ಅಂಶಗಳ ಪ್ರಕಾರ, ದೇಶದ ಒಟ್ಟು ಸಾಲದ ಅರ್ಜಿದಾರರಲ್ಲಿ ಶೇಕಡಾ 62 ರಷ್ಟು ಜನರು ಇದೇ ‘ಕಡಿಮೆ ಸಿಬಿಲ್ ಸ್ಕೋರ್’ ವರ್ಗಕ್ಕೆ ಸೇರುತ್ತಾರೆ!

ಪ್ರಸ್ತುತ ವ್ಯವಸ್ಥೆಯಲ್ಲಿ, ಗ್ರಾಹಕರು ಸಾಲ ಮರುಪಾವತಿ ಮಾಡದಿದ್ದಾಗ (Default) ಮಾತ್ರ ಬ್ಯಾಂಕುಗಳು ಎಚ್ಚೆತ್ತುಕೊಳ್ಳುತ್ತವೆ. ಆದರೆ ಹೊಸ ನಿಯಮದ ಪ್ರಕಾರ, ಬ್ಯಾಂಕುಗಳು ಭವಿಷ್ಯದ ಡೇಟಾವನ್ನು ಬಳಸಿಕೊಂಡು ಗ್ರಾಹಕರ ‘ರಿಸ್ಕ್’ ಅನ್ನು ನಿರಂತರವಾಗಿ ಅಂದಾಜು ಮಾಡುತ್ತವೆ. ನೀವು EMI ಕಟ್ಟಲು ತಡ ಮಾಡುವುದು, ನಿಮ್ಮ ಅಸ್ಥಿರ ಆದಾಯ, ಅಥವಾ ಇದ್ದಕ್ಕಿದ್ದಂತೆ ಹೆಚ್ಚು ಕ್ರೆಡಿಟ್ ಬಳಸುತ್ತಿರುವುದು ಕಂಡುಬಂದರೆ ನಿಮ್ಮ ಸಾಲದ ಅರ್ಜಿಗಳನ್ನು ಸಂಪೂರ್ಣವಾಗಿ ರಿಜೆಕ್ಟ್ ಮಾಡಲಾಗುತ್ತದೆ.

RBI's proposed ECL framework could make loan approvals tougher for borrowers with CIBIL scores below 730.

ಮುಂದಿನ ದಿನಗಳಲ್ಲಿ ‘ಹಳೇ ಪರಿಚಯ’ ಕೆಲಸಕ್ಕೆ ಬರಲ್ಲ!

ಹೊಸ ರೂಲ್ಸ್ ಜಾರಿಯಾದ ಮೇಲೆ, 730 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಹೊಂದಿರುವ ಸುಮಾರು 7 ಕೋಟಿ ‘ಪ್ರೀಮಿಯಂ ಗ್ರಾಹಕರಿಗೆ’ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನೀಡಲಿವೆ. ಇವರಿಗೆ ಕಡಿಮೆ ಬಡ್ಡಿದರದಲ್ಲಿ, ಆಕರ್ಷಕ ಆಫರ್‌ಗಳೊಂದಿಗೆ ಅತ್ಯುತ್ತಮ ಆರ್ಥಿಕ ಸೇವೆಗಳು ಸುಲಭವಾಗಿ ಸಿಗಲಿವೆ.  ಆದರೆ, ಉಳಿದವರಿಗೆ ಸಾಲ ಪಡೆಯುವುದು ನಿಜಕ್ಕೂ ಸವಾಲಾಗಲಿದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇರುವವರು ಕೇವಲ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್‌ಗಳು, ಸ್ಟೆಪ್-ಅಪ್ ಲೋನ್‌ಗಳು ಅಥವಾ ಸಣ್ಣಪುಟ್ಟ ಮೈಕ್ರೋ-ಲೋನ್‌ಗಳ ಮೇಲೆ ಮಾತ್ರ ಅವಲಂಬಿತರಾಗಬೇಕಾಗುತ್ತದೆ.

ಪ್ರಸ್ತುತ, ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೂ, ‘ಇವರು ನಮ್ಮ ನಂಬಿಕಸ್ಥ ಹಾಗೂ ಹಳೆಯ ಗ್ರಾಹಕರು’ ಎಂಬ ಆಧಾರದ ಮೇಲೆ ಬ್ಯಾಂಕುಗಳು ಸಾಲ ನೀಡುತ್ತಿವೆ. ಆದರೆ ಭವಿಷ್ಯದಲ್ಲಿ, RBI ನ ಈ ಕಠಿಣ ನಿಯಮಗಳು ಇಂತಹ ವಿನಾಯಿತಿಗಳಿಗೆ ಅವಕಾಶ ನೀಡುವುದಿಲ್ಲ. ಆದ್ದರಿಂದ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಇಂದೇ ಉತ್ತಮಪಡಿಸಿಕೊಳ್ಳುವತ್ತ ಗಮನಹರಿಸುವುದು ಜಾಣತನ.

Leave a Comment

Your email address will not be published. Required fields are marked *

Scroll to Top