SSLC Student – ದಯವಿಟ್ಟು ನನ್ನನ್ನು ಪಾಸ್ ಮಾಡಿ, ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ: SSLC ಮೌಲ್ಯಮಾಪನದಲ್ಲಿ ವಿದ್ಯಾರ್ಥಿಯ ವಿಚಿತ್ರ ಮನವಿ!

SSLC Student – ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2025ರ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಪ್ರಾರಂಭಿಸಿದೆ. ಸಾಮಾನ್ಯವಾಗಿ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಮನವಿಗಳನ್ನು ಮಾಡುವುದು ಕಂಡುಬರುತ್ತದೆ. ಈ ಬಾರಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಯೊಬ್ಬನ ವಿಚಿತ್ರ ಬೇಡಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವ್ಯಾಪಕವಾಗಿ ಹರಿದಾಡುತ್ತಿದೆ.

SSLC student offers ₹500 in answer sheet to pass exam – viral note from Karnataka

SSLC Student – ವಿದ್ಯಾರ್ಥಿಯ ವಿಚಿತ್ರ ಬೇಡಿಕೆ ಏನು?

ಆ ವಿದ್ಯಾರ್ಥಿಯು ತನ್ನ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ₹500 ರೂಪಾಯಿ ನೋಟನ್ನು ಇಟ್ಟು, “ಸರ್, ದಯವಿಟ್ಟು ನನ್ನನ್ನು ಪಾಸ್ ಮಾಡಿ. ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ (SSLC Exam) ಉತ್ತೀರ್ಣನಾದರೆ ಮಾತ್ರ ನನ್ನ ಗೆಳತಿ ನನ್ನನ್ನು ಪ್ರೀತಿಸುತ್ತಾಳೆಂದು ಹೇಳಿದ್ದಾಳೆ. ಆದ್ದರಿಂದ, ಈ ಹಣವನ್ನು ತೆಗೆದುಕೊಂಡು ನನ್ನನ್ನು ದಯವಿಟ್ಟು ಪಾಸ್ ಮಾಡಿ” ಎಂದು ಬರೆದಿದ್ದಾನೆ. ಈ ಮನವಿಯ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿವೆ. ಇದು ವಿದ್ಯಾರ್ಥಿ ಜೀವನದ (Student Life) ಒತ್ತಡ ಮತ್ತು ಪ್ರೇಮ ಸಮಸ್ಯೆಗಳನ್ನು (Love Problems) ತೋರಿಸುತ್ತದೆ.

SSLC Student –  ಉತ್ತರ ಪತ್ರಿಕೆಯಲ್ಲಿ ಏನು ಬರೆದಿದ್ದಾನೆ ಗೊತ್ತಾ?

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಿದ್ಯಾರ್ಥಿಯೊಬ್ಬ ಬರೆದ ಉತ್ತರ ಪತ್ರಿಕೆಯಲ್ಲಿ ಈ ಅಸಾಮಾನ್ಯ ಬೇಡಿಕೆ ಕಂಡುಬಂದಿದೆ. ಆತನು ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಮೌಲ್ಯಮಾಪಕರಲ್ಲಿ ಸಹಾಯ ಯಾಚಿಸಿದ್ದಾನೆ. “ನನ್ನ ಹುಡುಗಿ ನನ್ನನ್ನು ಪ್ರೀತಿಸಬೇಕಾದರೆ ನೀವು ದಯವಿಟ್ಟು ನನ್ನನ್ನು ಪಾಸ್ ಮಾಡಲೇಬೇಕು ಸರ್. ದಯವಿಟ್ಟು ಪಾಸ್ ಮಾಡಿ” ಎಂದು ₹500 ಮುಖಬೆಲೆಯ ನೋಟಿನೊಂದಿಗೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಈ ವಿದ್ಯಾರ್ಥಿಯ ಮನವಿಯು ಕರ್ನಾಟಕ ಪರೀಕ್ಷೆ (Karnataka Exams) ವ್ಯವಸ್ಥೆಯ ಮೌಲ್ಯಮಾಪನ ಪ್ರಕ್ರಿಯೆಯ ಕುರಿತು ಗಮನ ಸೆಳೆದಿದೆ.

SSLC student offers ₹500 in answer sheet to pass exam – viral note from Karnataka

ಉತ್ತರ ಪತ್ರಿಕೆಯಲ್ಲಿನ ಆ ಮನವಿ ಹೀಗಿದೆ: “ಸರ್ ರೀ, ಮೇಡಂ ರೀ ನಿಮ್ಮ ಕಾಲು ಬೀಳತೇನಿ, ನನ್ನ ಲವ್ ನಿಮ್ಮ ಕೈಯಾಗ ಐತಿ ರೀ. ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ. ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡ್ತಾಳೆ ಅಂತ ನನ್ನ ಪ್ರೇಯಸಿ ಹೇಳಿದ್ದಾಳೆ. ಈ 500 ರೂ. ತಗೊಂಡು ನೀವ ಚಹಾ ಕುಡಿದು ಪಾಸ್ ಮಾಡ್ರಿ. ಎಂದು ಬರೆದಿದ್ದಾನೆ. ಮತ್ತೋರ್ವ ಉತ್ತರ ಪತ್ರಿಕೆಯಲ್ಲಿ, “ಪ್ಲೀಸ್ ಮಿಸ್ ಅಂಡ್ ಸರ್ ನನ್ನನ್ನು ಪಾಸ್ ಮಾಡಿ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ” ಎಂದು ಮತ್ತೋರ್ವ ವಿದ್ಯಾರ್ಥಿಯೊಬ್ಬನು ಬರೆದುಕೊಂಡಿದ್ದಾನೆ. Read this also : SSLC Result 2025: ಮೇ ಮೊದಲ ವಾರದಲ್ಲಿ ಪ್ರಕಟ, ಆನ್‌ಲೈನ್‌ನಲ್ಲಿ ಫಲಿತಾಂಶ ನೋಡುವುದು ಹೇಗೆ?:

SSLC Student – ಇತರೆ ವಿಚಿತ್ರ ಘಟನೆಗಳು

ಇಂತಹ ವಿಚಿತ್ರ ಬೇಡಿಕೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬ ತಾನು ಅನಾರೋಗ್ಯದಿಂದ ಬಳಲುತ್ತಿದ್ದು ಓದಲು ಸಾಧ್ಯವಾಗದ ಕಾರಣ ಪಾಸ್ ಮಾಡುವಂತೆ ಮನವಿ ಮಾಡಿದ್ದನು. ಬರೇಲಿಯಲ್ಲಿ ಓರ್ವ ವಿದ್ಯಾರ್ಥಿನಿಯು ತಾನು ಫೇಲ್ ಆದರೆ ತನ್ನ ತಂದೆ ಮದುವೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಬರೆದುಕೊಂಡಿದ್ದಳು.  ಕೆಲವು ವಿದ್ಯಾರ್ಥಿಗಳು ಪಾಸ್ ಮಾಡುವಂತೆ ಕೋರಿ ತಮ್ಮ ಉತ್ತರ ಪತ್ರಿಕೆಗಳಲ್ಲಿ ₹100 ರಿಂದ ₹500 ರವರೆಗಿನ ಹಣವನ್ನು ಇಟ್ಟಿರುವುದು ಸಹ ಕಂಡುಬಂದಿದೆ. ಪ್ರಯಾಗ್ರಾಜ್ ನಲ್ಲಿ ಶುಕ್ರವಾರ ಮೌಲ್ಯಮಾಪನಕ್ಕೆ ಬಂದ 100 ಕಟ್ಟು ಉತ್ತರ ಪತ್ರಿಕೆಗಳಲ್ಲಿ ಕನಿಷ್ಠ 12 ಪತ್ರಿಕೆಗಳಲ್ಲಿ ಹಣ ಪತ್ತೆಯಾಗಿತ್ತು.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Lucky – Magazine and Blog WordPress Theme Medizin – Medical WooCommerce Theme Eva – Fashion WooCommerce Theme Gesto – Digital Marketing Agency WordPress Theme Snakepit – A Rock and Metal Oriented Music WordPress Theme Oberon – Freelancer Portfolio WordPress Theme Fundro – Charity Nonprofit WordPress Theme Creative Multipurpose WordPress Theme – Avonmore Capie – Minimal Creative WooCommerce WordPress Theme Bikersclub – Motorcycle Club WooCommerce WordPress Theme