ಸುಧಾಕರ್ ಗೆ ಒಂದು ಮತ ಜಾಸ್ತಿ ಬಂದರೇ, ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ ಎಂದ ಪ್ರದೀಪ್ ಈಶ್ವರ್…..!

1

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಹೈ ವೋಲ್ಟೇಜ್ ಕದನವಾಗಿ ಬದಲಾಗಿತ್ತು. ಈ ಚುನಾವಣೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‍ ರವರನ್ನು ಪ್ರದೀಪ್ ಈಶ್ವರ್‍ ಸೋಲಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಅವರಿಬ್ಬರ ನಡುವೆ ಜೋರಾಗಿಯೇ ವಾಕ್ಸಮರ ನಡೆಯುತ್ತಿರುತ್ತದೆ. ಇದೀಗ ಸುಧಾಕರ್‍ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕಿಂತ ಒಂದು ವೋಟ್ ಜಾಸ್ತಿ ಪಡೆದರೇ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

Pradeep Eshwar press meet 1

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೇಸ್ ಗೆಲ್ಲುತ್ತದೆ. ಬಿಜೆಪಿ ಒಂದು ಮತ ಜಾಸ್ತಿ ಪಡೆಯಲಿ ನಾನು ನನ್ನ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ. ನಾನು ನನ್ನ ಮಾತಿಗೆ ಬದ್ದನಾಗಿರುತ್ತೇನೆ ಎಂದು ಸವಾಲು ಹಾಕಿದ್ದಾರೆ. ಬಳಿಕ SSLC ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಈ ಭಾರಿ ಪರೀಕ್ಷೆಯಲ್ಲಿ ತುಂಬಾ ಸ್ಟ್ರಿಕ್ಟ್ ಮಾಡಿಸಲಾಗಿತ್ತು. ಸಿಸಿ ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಲಾಗಿತ್ತು. ಮಾಸ್ ಕಾಪಿ ಮಾಡೋದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಈ ಹಿಂದೆ ಮಾಸ್ ಕಾಪಿ ನಡೆಯುತ್ತಿತ್ತು. ಈ ಬಾರಿ ಅದು ನಡೆದಿಲ್ಲ. ಇನ್ನೂ ಫಲಿತಾಂಶ ಕಡಿಮೆಯಾಗಿದೆ ಎಂದು ಹೇಳಬೇಡಿ. ಕಳೆದ ಬಾರಿ ಚಿಕ್ಕಬಳ್ಳಾಪುರ 5 ನೇ ಸ್ಥಾನದಲ್ಲಿತ್ತು. ಈ ಬಾರಿ ನಾನು ಎರಡನೇ ಸ್ಥಾನಕ್ಕೆ ತಂದಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ 6 ತಾಲೂಕುಗಳಿದ್ದು, ಬೇರೆ ಕಡೆ ಕಡಿಮೆಯಾದರೇ ಅದಕ್ಕೆ ನಾನು ಕಾರಣವೇ ಎಂದು ಪ್ರಶ್ನೆ ಮಾಡಿದರು.

ಇನ್ನೂ ಇದೇ ಸಮಯದಲ್ಲಿ ಮಧು ಬಂಗಾರಪ್ಪ ಹೇರ್‍ ಕಟ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ವಿಜಯೇಂದ್ರ ತಲೆಯಲ್ಲಿ ಕಂಟೆಂಟ್ ಇಲ್ಲ. ವಿಚಾರಗಳ ಮೇಲೆ ಮಾತನಾಡೋಕೆ ಆಗಲ್ಲ, ಅವರ ತಲೆಯಲ್ಲಿ ಇರೋದೆಲ್ಲಾ ಬ್ಲಾಂಕ್, ಅದಕ್ಕೆ ಅವರ ವೈಯುಕ್ತಿಕ ವಿಷಯ ಮಾತನಾಡುತ್ತಿದ್ದಾರೆ. ಮಧು ಬಂಗಾರಪ್ಪ ಹೇರ್‍ ಸ್ಟೈಲ್ ಬಗ್ಗೆ ಮಾತನಾಡುತ್ತಾರೆ. ಹೇರ್‍ ಸ್ಟೈಲ್ ಬಗ್ಗೆ ಮಾತನಾಡುತ್ತೀರಾ ಅಲ್ಲವೇ, ನಿಮಗೆ ಜ್ಞಾನದ ಕೊರತೆ ಇರಬಹುದು, ಅಥವಾ ನಿಮಗೆ ಸಲಗೆ ಕೊಡುವುದು ತಪ್ಪಿರಬಹುದು. ಶಿವಮೊಗ್ಗ ಅಂದರೇ ಬಂಗಾರಪ್ಪ, ಯಡಿಯೂರಪ್ಪ ರವರುಗಳ ಹೆಸರು ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ತುಂಬಾನೆ ಬದಲಾವಣೆ ತಂದಿದ್ದಾರೆ. ಅಗತ್ಯವಿರುವ ವಿಷಯಗಳನ್ನು ಬಿಟ್ಟು ಹೇರ್‍ ಸ್ಟೈಲ್ ಬಗ್ಗೆ ಮಾತನಾಡುತ್ತೀರಾ ಅಲ್ವಾ ಎಂದು ಕಿಡಿಕಾರಿದರು.

One thought on “ಸುಧಾಕರ್ ಗೆ ಒಂದು ಮತ ಜಾಸ್ತಿ ಬಂದರೇ, ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ ಎಂದ ಪ್ರದೀಪ್ ಈಶ್ವರ್…..!

Leave a Reply

Your email address will not be published. Required fields are marked *

Next Post

ನಟಿ ಹೇಮಾ ಗೆ ಮತ್ತೊಮ್ಮೆ ನೊಟೀಸ್ ನೀಡಿದ ಪೊಲೀಸರು, ಈ ಬಾರಿ ಬರದೇ ಇದ್ದರೇ ಕಠಿಣ ಕ್ರಮದ ಎಚ್ಚರಿಕೆ….!

Wed May 29 , 2024
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾದವರಿಗೆ ಈಗಾಗಲೇ ಬೆಂಗಳೂರು ಪೊಲೀಸರು ನೊಟೀಸ್ ನೀಡಿದ್ದರು. ಈ ನೊಟೀಸ್ ಪಡೆದು ಹಾಜರಾಗದವರಿಗೆ ಮತ್ತೊಮ್ಮೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಜೂನ್ 1 ರಂದು ವಿಚಾರಣೆಗೆ ಹಾಜರಾಗಲೇ ಬೇಕು ಎಂದು ನಟಿ ಹೇಮಾ ಸೇರಿದಂತೆ 8 ಮಂದಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಾರಿ ನೊಟೀಸ್ ಗೆ ಉತ್ತರಿಸಲು ಬರದೇ ಇದ್ದರೇ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ನೊಟೀಸ್ […]
Rave party hema got 2nd notice
error: Content is protected !!