ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ಬಹುತೇಕರು ಅದಕ್ಕೆ ಅಡಿಕ್ಟ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾ ಅನೇಕರಿಗೆ ಬದುಕು ಕಟ್ಟಿಕೊಟ್ಟಿದೆ ಎಂದು ಹೇಳಬಹುದು. ಅನೇಕ ಪ್ರತಿಭೆಗಳನ್ನು ಹೊರಹಾಕಿದೆ ಎಂದೂ ಹೇಳಬಹುದು. ಜೊತೆಗೆ ಇದೇ ಸೋಷಿಯಲ್ ಮಿಡಿಯಾದಿಂದ ಅನೇಕ ಜೀವನಗಳು ಹಾಳಾಗಿದೆ ಎಂಬ ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ರೀಲ್ಸ್ ಪ್ರೇಮಿ ಶಿಕ್ಷಕಿಯೊಬ್ಬಳು, ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಕರೆಕ್ಷನ್ ಮಾಡುತ್ತಾ ರೀಲ್ಸ್ ಮಾಡಿದ್ದು, ಆಕೆಯ ಈ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಪ್ರತಿಭೆಯ ಪ್ರದರ್ಶನಕ್ಕೆ ಸೋಷಿಯಲ್ ಮಿಡಿಯಾ ಉತ್ತಮ ವೇದಿಕೆ ಎನ್ನಬಹುದು. ಈ ಪ್ಲಾಟ್ ಫಾರ್ಮ್ ಮೂಲಕ ತುಂಬಾ ಮಂದಿ ನೃತ್ಯ, ನಟನೆ, ಹಾಡುವುದು ಹೀಗೆ ನಾನಾ ಪ್ರತಿಭೆಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಬಹುದು. ಕೆಲವರಂತೂ ನಮ್ಮ ಸುತ್ತಮುತ್ತಲಿನಲ್ಲಿ ಮಾಡುವ ಕೆಲಸವನ್ನು ಬಿಟ್ಟು ರೀಲ್ಸ್ ನಲ್ಲೇ ಮುಳುಗಿರವವರು ಸಹ ಇದ್ದಾರೆ. ಇದೀಗ ಶಿಕ್ಷಕಿಯೊಬ್ಬರು ಉತ್ತರ ಪತ್ರಿಕೆ ಕರೆಕ್ಷನ್ ಮಾಡುವಾಗ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡಿದರೇ ನಿಮಗೂ ತಿಳಿಯುತ್ತದೆ ಆಕೆಗೆ ಎಷ್ಟು ರೀಲ್ಸ್ ಹುಚ್ಚಿದೆ ಎಂದು. ಈ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ ಎನ್ನಲಾಗಿದೆ.
ವಿಡಿಯೋ ನೋಡಲು ಈ ಲಿಂಕ್ ಓಪೆನ್ ಮಾಡಿ: https://x.com/ChapraZila/status/1794681966358663652
ಬಿಹಾರದ ಪಾಟ್ನಾ ಕಾಲೇಜಿನ ಶಿಕ್ಷಕಿಯೊಬ್ಬರು ಉತ್ತರ ಪತ್ರಿಕೆಗಳನ್ನು ಕರೆಕ್ಷನ್ ಮಾಡುವಾಗ ರೀಲ್ಸ್ ಮಾಡಿದ್ದಾರೆ. ಚಪ್ರಾ ಝಿಲ್ಲಾ ಎಂಬುವವರ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿ ಶಾಲೆಯ ಬೇಂಚ್ ಮೇಲೆ ಹಲವು ಉತ್ತರ ಪತ್ರಿಕೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಕರೆಕ್ಷನ್ ಮಾಡುವುದರಲ್ಲಿ ಇರಬೇಕಾದ ಆಕೆಯ ಗಮನ ಮೊಬೈಲ್ ಕ್ಯಾಮೆರಾದ ಮೇಲಿದೆ. ಉಳಿದ ಶಿಕ್ಷಕರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಮಾತ್ರ ಕೆಲಸ ಮಾಡೋದನ್ನು ಬಿಟ್ಟು ರೀಲ್ಸ್ ನಲ್ಲಿ ಮುಳುಗಿದ್ದಾನೆ. ಇದೀಗ ಈ ಶಿಕ್ಷಕಿಯ ವಿರುದ್ದ ದೂರು ಸಹ ದಾಖಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಈ ವಿಡಿಯೋಗೆ ಭಾರಿ ವಿರೋಧ ಸಹ ವ್ಯಕ್ತವಾಗುತ್ತಿದೆ. ಕೆಲವರಂತೂ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ.