ಫಸ್ಟ್ ನೈಟ್ ನಲ್ಲಿ ವಧು ಮುಖ ನೋಡಿ ಶಾಕ್ ಆದ ವರ, ಡಿವೋರ್ಸ್ ಗಾಗಿ ಹಠ ಹಿಡಿದ ವರ…..!

ಅನೇಕ ಮದುವೆಗಳು ವರದಕ್ಷಿಣೆ ಕಾರಣದಿಂದ ಅಥವಾ ಚಿಕ್ಕ ಚಿಕ್ಕ ಕಾರಣಗಳಿಂದ ಮುರಿದು ಬೀಳುತ್ತಿರುತ್ತದೆ. ಮದುವೆಯಾದ ಒಂದು ತಿಂಗಳು, ಅಥವಾ ವರ್ಷಕ್ಕೆ ದಂಪತಿ ವಿಚ್ಚೇದನಕ್ಕೆ ಮುಂದಾಗುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು  ಘಟನೆ ನಡೆದಿದ್ದು, ಮದುವೆಯಾದ ಒಂದೇ ದಿನಕ್ಕೆ ಮುರಿದು ಬಿದಿದ್ದೆ. ಮದುವೆಯಾಗಿ ಬಳಿಕ ಫಸ್ಟ್ ನೈಟ್ ನಲ್ಲಿ ವಧು ಮುಖ ನೋಡಿ ಶಾಕ್ ಆಗಿದ್ದಾನೆ, ಬೆಳಿಗ್ಗೆ ಎದ್ದ ಕೂಡಲೇ ನನಗೆ ವಿಚಚೇದನ ಬೇಕು ಎಂದು ಪಟ್ಟು ಹಿಡಿದು ವಿಚ್ಚೇದನಕ್ಕೆ ಮುಂದಾಗಿದ್ದಾನೆ.

Husband wants divorce for looking wife eyes 1

ಹುಡುಗನೊಬ್ಬ ತಮ್ಮ ಯುವತಿಯೊಬ್ಬಳನ್ನು ನೋಡಿ ಮೆಚ್ಚಿದ್ದಾನೆ ಬಳಿಕ ಕುಟುಂಬ ಸಮೇತ ನಿಶ್ಚಿತಾರ್ಥ ಸಹ ಮಾಡಿಕೊಂಡು, ಅದ್ದೂರಿಯಾಗಿ ಮದುವೆಯಾಗಿದ್ದಾನೆ. ಮದುವೆಯ ಸಮಯದಲ್ಲಿ ತುಂಬಾನೆ ಖುಷಿ ಖುಷಿಯಾಗಿದ್ದ ವರ ಫಸ್ಟ್ ನೈಟ್ ನಲ್ಲಿ ತಕರಾರು ಶುರು ಮಾಡಿದ್ದಾನೆ. ಹೆಂಡಿತಿಯ ಮುಖ ನೋಡಿದ್ದೇ ತಡ ಎಗರಾಡಿದ್ದಾನೆ. ಅದಕ್ಕೆ ಕಾರಣವಾಗಿದ್ದು ಯುವತಿಯ ಕಣ್ಣು. ಯುವತಿಯ ಕಣ್ಣು ಹಸಿರು ಬಣ್ಣದಲ್ಲಿದ್ದು, ಮೊದಲು ನೋಡಿದಾಗ ಆಕೆಯ ಕಣ್ಣು ಕಪ್ಪಾಗಿತ್ತಂತೆ. ಆದರೆ ಮೊದಲ ರಾತ್ರಿಯಲ್ಲಿ ನೋಡಿದಾಗ ಮಾತ್ರ ಹಸಿರು ಬಣ್ಣ ಇರುವುದನ್ನು ನೋಡಿದ್ದಾನೆ. ಕೂಡಲೇ ಹೌಹಾರಿದ್ದಾನೆ.

ಇನ್ನೂ ಯುವತಿಗೆ ದೃಷ್ಟಿ ಸಮಸ್ಯೆಯಿದ್ದ ಕಾರಣ ಆಕೆ ಕಾಂಟ್ಯಾಕ್ಸ್ ಲೆನ್ಸ್ ಬಳಸಿದ್ದಳಂತೆ. ಅದರಲ್ಲಿ ಆಕೆಯ ಕಣ್ಣು ಕಪ್ಪು ಬಣ್ಣ ಕಂಡಿದೆ. ಆದರೆ ಆಕೆಯ ಕಣ್ಣಿನ ಬಣ್ಣ ಹಸಿರು. ಈ ಸತ್ಯ ಮಾತ್ರ ವರನಿಗೆ ಮೊದಲ ರಾತ್ರಿ ಗೊತ್ತಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಕುವೈತ್ ನಲ್ಲಿ. ಇಂಜನೀಯರ್‍ ಆಗಿರುವ ವರ ಇದೀಗ ಹೆಂಡತಿಯ ಕಣ್ಣು ನೋಡಿ ಡಿವೋರ್ಸ್ ನೀಡಲು ಮುಂದಾಗಿದ್ದಾನೆ. ತನ್ನನ್ನು ದಾರಿ ತಪ್ಪಿಸಲಾಗಿದೆ. ವಧುವಿನ ಕಣ್ಣುಗಳ ಬಣ್ಣವು ಭವಿಷ್ಯದಲ್ಲಿ ಅವರಗೆ ಹುಟ್ಟುವ ಮಕ್ಕಳ ಮೇಲೆ ಪ್ರತಿಕೂಲಕರ ಪರಿಣಾಮ ಬೀರಬಹುದು ಎಂದು ಆತ ಆರೋಪಿಸಿ ವಿಚ್ಚೇದನಕ್ಕೆ ಮುಂದಾಗಿದ್ದಾನೆ. ಆದರೆ ವಧುವಿನ ಕಡೆಯವರು ವರನೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Next Post

ಉತ್ತರ ಪತ್ರಿಕೆ ಕರೆಕ್ಷನ್ ಮಾಡುತ್ತಾ ರೀಲ್ಸ್ ಮಾಡಿದ ರೀಲ್ಸ್ ಪ್ರೇಮಿ ಶಿಕ್ಷಕಿ, ವೈರಲ್ ಆದ ವಿಡಿಯೋ….!

Wed May 29 , 2024
ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ಬಹುತೇಕರು ಅದಕ್ಕೆ ಅಡಿಕ್ಟ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾ ಅನೇಕರಿಗೆ ಬದುಕು ಕಟ್ಟಿಕೊಟ್ಟಿದೆ ಎಂದು ಹೇಳಬಹುದು. ಅನೇಕ ಪ್ರತಿಭೆಗಳನ್ನು ಹೊರಹಾಕಿದೆ ಎಂದೂ ಹೇಳಬಹುದು. ಜೊತೆಗೆ ಇದೇ ಸೋಷಿಯಲ್ ಮಿಡಿಯಾದಿಂದ ಅನೇಕ ಜೀವನಗಳು ಹಾಳಾಗಿದೆ ಎಂಬ ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ರೀಲ್ಸ್ ಪ್ರೇಮಿ ಶಿಕ್ಷಕಿಯೊಬ್ಬಳು, ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಕರೆಕ್ಷನ್ ಮಾಡುತ್ತಾ ರೀಲ್ಸ್ ಮಾಡಿದ್ದು, ಆಕೆಯ ಈ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭೆಯ […]
Teacher reels while exam papers correction
error: Content is protected !!