HomeNationalInstagram Lover Trap : "ಇನ್‌ಸ್ಟಾಗ್ರಾಮ್ ಪ್ರೇಯಸಿಯನ್ನು ನೋಡಲು ಹೋದ ಗಂಡನಿಗೆ ಕಾದಿತ್ತು ಘೋರ ಆಘಾತ;...

Instagram Lover Trap : “ಇನ್‌ಸ್ಟಾಗ್ರಾಮ್ ಪ್ರೇಯಸಿಯನ್ನು ನೋಡಲು ಹೋದ ಗಂಡನಿಗೆ ಕಾದಿತ್ತು ಘೋರ ಆಘಾತ; ಮಂದಿರದಲ್ಲಿದ್ದ ಯುವತಿಯನ್ನು ನೋಡಿ ಶಾಕ್…!

ಸಿನಿಮಾ ಕಥೆಗಳಿಗೂ ಸೈ ಎನ್ನುವಂತಹ ರೋಚಕ ಘಟನೆಯೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಪರ ಸ್ತ್ರೀಯರ ವ್ಯಾಮೋಹದಲ್ಲಿದ್ದ ಪತಿಯನ್ನು ರೆಡ್ ಹ್ಯಾಂಡ್ (Instagram Lover Trap) ಆಗಿ ಹಿಡಿಯಲು ಪತ್ನಿಯೇ ಹಾಕಿದ ‘ಡಿಜಿಟಲ್ ಜಾಲ’ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪತ್ನಿಯನ್ನೇ ಅಪರಿಚಿತ ಸುಂದರಿ ಎಂದು ಭಾವಿಸಿ ಡೇಟಿಂಗ್‌ಗೆ ಬಂದ ಆಸಾಮಿ ಈಗ ಪೊಲೀಸರ ಅತಿಥಿಯಾಗಿ ಜೈಲು ಕಂಬಿ ಎಣಿಸುತ್ತಿದ್ದಾನೆ!

Instagram lover trap case where wife catches husband through fake Instagram account in Prayagraj

Instagram Lover Trap – ಮದುವೆಯಾದ ಕೆಲವೇ ದಿನಕ್ಕೆ ಸಂಸಾರದಲ್ಲಿ ಬಿರುಕು

ಈ ಕಥೆಯ ನಾಯಕ ಪ್ರಭುದತ್ ತ್ರಿಪಾಠಿ ಅಲಿಯಾಸ್ ರಾಜಾ ಮತ್ತು ನಾಯಕಿ ಸೋನಿ ತ್ರಿಪಾಠಿ. ಇವರಿಬ್ಬರಿಗೂ 9 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪ್ರಭುದತ್ ತನ್ನ ಅಸಲಿ ವರಸೆ ತೋರಿಸಲು ಆರಂಭಿಸಿದ್ದ. ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದ. ಕಳೆದ 5 ವರ್ಷಗಳಿಂದ ಸೋನಿ ತನ್ನ ಪುಟ್ಟ ಮಗಳೊಂದಿಗೆ ತವರು ಮನೆಯಲ್ಲೇ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಪತಿ ಒಮ್ಮೆಯೂ ಹೆಂಡತಿ-ಮಗುವಿನ ಯೋಗಕ್ಷೇಮ ವಿಚಾರಿಸುವ ಕನಿಷ್ಠ ಸೌಜನ್ಯವನ್ನೂ ತೋರಿಸಿರಲಿಲ್ಲ.

ಪತ್ನಿಯ ‘ಮಾಸ್ಟರ್ ಪ್ಲಾನ್’: ಶುರುವಾಯ್ತು ಇನ್‌ಸ್ಟಾ ಚಾಟಿಂಗ್!

ತನ್ನನ್ನು ನಿರ್ಲಕ್ಷಿಸಿ ಬೇರೆ ಹುಡುಗಿಯರ ಹಿಂದೆ ಅಲೆಯುತ್ತಿದ್ದ ಪತಿಗೆ ಸರಿಯಾದ ಪಾಠ ಕಲಿಸಲು ಸೋನಿ ನಿರ್ಧರಿಸಿದರು. ಇದಕ್ಕಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹೊಸ ‘ಫೇಕ್ ಐಡಿ’ ಸೃಷ್ಟಿಸಿದರು. ತನ್ನ ಪತ್ನಿಯ ಗುರುತೇ ಸಿಗದಂತೆ ಮರೆಮಾಚಿ ಪ್ರಭುದತ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರು. ಕಾಮ ಕುರುಡಾಗಿದ್ದ ಪ್ರಭುದತ್, ಆಕೆ ತನ್ನ ಪತ್ನಿ (Instagram Lover Trap) ಎಂಬ ಸುಳಿವೇ ಇಲ್ಲದೆ, ಯಾರೋ ಸುಂದರ ಹುಡುಗಿ ಎಂದು ಭಾವಿಸಿ ದಿನವಿಡೀ ಚಾಟಿಂಗ್ ಮಾಡತೊಡಗಿದ. ಇಬ್ಬರ ನಡುವೆ ಪ್ರೇಮ ಸಲ್ಲಾಪಗಳು ನಡೆಯಿತು. ಕೊನೆಗೆ ಆ ಅಪರಿಚಿತ ಹುಡುಗಿಯನ್ನು (ಪತ್ನಿಯನ್ನು) ಹೇಗಾದರೂ ಮಾಡಿ ಭೇಟಿಯಾಗಲೇಬೇಕೆಂದು ಆತ ಹಠ ಹಿಡಿದಿದ್ದ.

ಮಂದಿರದಲ್ಲಿ ಕಾದಿತ್ತು ಬಿಗ್ ಸರ್ಪ್ರೈಸ್!

ಪತಿಯ ಆಸೆಯಂತೆಯೇ ಮೇ 2 ರಂದು ದಾರಾಗಂಜ್‌ನ ನಾಗವಾಸುಕಿ ಮಂದಿರದಲ್ಲಿ ಭೇಟಿಯಾಗಲು ಸಮಯ ನಿಗದಿಪಡಿಸಲಾಯಿತು. ಹೊಸ ಪ್ರೇಯಸಿಯನ್ನು ಭೇಟಿಯಾಗುವ ಸಂಭ್ರಮದಲ್ಲಿ ಪ್ರಭುದತ್ (Instagram Lover Trap) ಮಂದಿರಕ್ಕೆ ಬಂದಿದ್ದ. ಆದರೆ ಅಲ್ಲಿ ಎದುರಿಗೆ ನಿಂತಿದ್ದ ಪತ್ನಿ ಸೋನಿಯನ್ನು ಕಂಡ ಕೂಡಲೇ ಆತನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು! ತಾನು ಪತ್ನಿಯ ಕೈಗೆ ಸಿಕ್ಕಿಬಿದ್ದಿರುವುದು ಮತ್ತು ತನ್ನ ಬಣ್ಣ ಬಯಲಾಗಿರುವುದು ತಿಳಿದಾಗ ಆತ ಅಲ್ಲಿಯೇ ರಂಪಾಟ ಶುರುಮಾಡಿದ. ವಿವೇಚನೆ ಕಳೆದುಕೊಂಡು ಸೋನಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಹೇಳಲಾಗಿದೆ. Read this also : ಇನ್ ​ಸ್ಟಾಗ್ರಾಂ ಲವ್ (Instagram Love), ಮದುವೆಗೆ ಬಿತ್ತು ಬ್ರೇಕ್! 350 ಕಿ.ಮೀ ಪ್ರಯಾಣಿಸಿ ಮಂಟಪಕ್ಕೆ ಬಂದ ವರನಿಗೆ ಕಾದಿತ್ತು ಬಿಗ್ ಶಾಕ್

Instagram lover trap case where wife catches husband through fake Instagram account in Prayagraj

ಕಳ್ಳಾಟವಾಡಿದ ಗಂಡ ಈಗ ಜೈಲು ಪಾಲು!

ಮಂದಿರದ ಆವರಣದಲ್ಲಿ ಗಲಾಟೆ (Instagram Lover Trap) ಹೆಚ್ಚಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಹಲ್ಲೆ ನಡೆಸುತ್ತಿದ್ದ ಪ್ರಭುದತ್‌ನನ್ನು ವಶಕ್ಕೆ ಪಡೆದರು. ಸೋನಿ ನೀಡಿದ ದೂರಿನ ಆಧಾರದ ಮೇಲೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಪ್ರಭುದತ್ ಜೈಲು ಸೇರಿದ್ದಾನೆ. ಪತಿಗೆ ಬುದ್ಧಿ ಕಲಿಸಲು ಪತ್ನಿ ನಡೆಸಿದ ಈ ಆಪರೇಷನ್ ಇನ್‌ಸ್ಟಾಗ್ರಾಮ್’ ಈಗ ಉತ್ತರ ಪ್ರದೇಶದಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಡಿಜಿಟಲ್ ಯುಗದಲ್ಲಿ ಪತಿಯ ಕಳ್ಳಾಟವನ್ನು ಬಯಲಿಗೆಳೆದ ಪತ್ನಿಯ ಚಾಣಾಕ್ಷತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular