HomeStateMumbai Family Death Case : ಮುಂಬೈ ಬೆಚ್ಚಿಬೀಳಿಸಿದ ಕಲ್ಲಂಗಡಿ ರಹಸ್ಯ: ಒಂದೇ ಕುಟುಂಬದ ನಾಲ್ವರ...

Mumbai Family Death Case : ಮುಂಬೈ ಬೆಚ್ಚಿಬೀಳಿಸಿದ ಕಲ್ಲಂಗಡಿ ರಹಸ್ಯ: ಒಂದೇ ಕುಟುಂಬದ ನಾಲ್ವರ ಸಾವಿಗೆ ಹಣ್ಣಿನಲ್ಲಿದ್ದ ‘ಇಲಿ ಪಾಷಾಣ’ ಕಾರಣವೇ?

ಮುಂಬೈನ ಪೈಧೋನಿಯಲ್ಲಿ ನಡೆದ ಅಬ್ದುಲ್ಲಾ ಡೊಕಾಡಿಯಾ ಕುಟುಂಬದ ನಿಗೂಢ ಸಾವಿನ ಪ್ರಕರಣ (Mumbai Family Death Case) ದಿನಕ್ಕೊಂದು ತಿರುವು ಪಡೆಯುತ್ತಿದೆ. ಕೇವಲ ಒಂದು ಹಣ್ಣು ಇಡೀ ಸಂಸಾರವನ್ನೇ ಬಲಿಪಡೆಯಬಹುದು ಎಂಬುದು ಈಗ ಇಡೀ ದೇಶವನ್ನೇ ಆತಂಕಕ್ಕೆ ತಳ್ಳಿದೆ. ಮೊದಲು ಸಾಧಾರಣ ಫುಡ್ ಪಾಯ್ಸನಿಂಗ್ ಎಂದು ಶಂಕಿಸಲಾಗಿದ್ದ ಈ ಪ್ರಕರಣದಲ್ಲಿ, ಈಗ ‘ಜಿಂಕ್ ಫಾಸ್ಫೈಡ್’ ಎಂಬ ಭಯಾನಕ ಇಲಿ ಪಾಷಾಣದ ಅಂಶ ಪತ್ತೆಯಾಗಿರುವುದು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.

Mumbai Family Death Case involving suspected zinc phosphide poisoning through contaminated watermelon

Mumbai Family Death Case – ಅಂದು ರಾತ್ರಿ ನಡೆದಿದ್ದೇನು?

44 ವರ್ಷದ ಅಬ್ದುಲ್ಲಾ ಡೊಕಾಡಿಯಾ, ಪತ್ನಿ ನಸ್ರೀನ್ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ರಾತ್ರಿ ಬಿರಿಯಾನಿ ಊಟ ಮುಗಿಸಿ, ಆನಂತರ ಕಲ್ಲಂಗಡಿ ಹಣ್ಣನ್ನು ಸವಿದು ಮಲಗಿದ್ದರು. ಆದರೆ ಮರುದಿನ ಇಡೀ ಕುಟುಂಬ ವಾಂತಿ ಮತ್ತು ಭೇದಿಯಿಂದ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಕೊನೆಯುಸಿರೆಳೆದಿದ್ದರು. ಈ ಸಾವಿನ ಹಿಂದೆ ಬಿರಿಯಾನಿ ಇರಬಹುದು ಎಂದು ಪೊಲೀಸರು ಆರಂಭದಲ್ಲಿ ಭಾವಿಸಿದ್ದರು.

ತನಿಖೆಯಲ್ಲಿ ಬಯಲಾದ ಸ್ಫೋಟಕ ಸತ್ಯ

ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಪೊಲೀಸರಿಗೆ ಅಸಲಿ ವಿಚಾರ ಗೊತ್ತಾಗಿದೆ. ಮೃತರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಮಾದರಿಗಳಲ್ಲಿ ಮತ್ತು ಅವರ ದೇಹದ ಅಂಗಾಂಶಗಳಲ್ಲಿ ಇಲಿ ವಿಷದ (Mumbai Family Death Case)  ಅಂಶಗಳು ಪತ್ತೆಯಾಗಿವೆ. ತನಿಖೆ ವೇಳೆ ಡೊಕಾಡಿಯಾ ಅವರ ಮನೆಯಲ್ಲಿ ಎರಡು ಪ್ಯಾಕೆಟ್ ಇಲಿ ವಿಷ ಮತ್ತು ಒಂದು ಇಲಿ ವಿಷದ ಸ್ಪ್ರೇ ಪತ್ತೆಯಾಗಿದ್ದು, ಅದರಲ್ಲಿ ಸ್ಪ್ರೇ ಅನ್ನು ಈಗಾಗಲೇ ಬಳಸಲಾಗಿತ್ತು ಎಂಬುದು ತಿಳಿದುಬಂದಿದೆ. Read this also : ಮಗನ ಶವವನ್ನು ತಳ್ಳುಗಾಡಿಯಲ್ಲೇ ಸಾಗಿಸಿದ ಅಸಹಾಯಕ ಪೋಷಕರು ಕರೀಂನಗರದಲ್ಲಿ ಅಮಾನವೀಯ ಘಟನೆ..!

ಅಚಾತುರ್ಯವೋ ಅಥವಾ ಆತ್ಮಹತ್ಯೆಯೋ?

ಈ ಪ್ರಕರಣ ಈಗ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅವರು ವಾಸವಿದ್ದ ಕಟ್ಟಡದಲ್ಲಿ ಇಲಿಗಳ ಕಾಟ ವಿಪರೀತವಾಗಿತ್ತು ಎನ್ನಲಾಗಿದೆ. ಹೀಗಾಗಿ ಇಲಿಗಳನ್ನು ಓಡಿಸಲು ತಂದಿದ್ದ ವಿಷದ ಸ್ಪ್ರೇ ಅಥವಾ ಪುಡಿ ಅಚಾತುರ್ಯದಿಂದ ಹಣ್ಣಿಗೆ ತಗುಲಿತ್ತೇ ಅಥವಾ ಹಣ್ಣು ಕತ್ತರಿಸುವಾಗ ಅಜಾಗರೂಕತೆಯಿಂದ ವಿಷ ಬೆರೆತಿತ್ತೇ ಎಂಬುದು (Mumbai Family Death Case)  ಒಂದು ಪ್ರಶ್ನೆಯಾದರೆ, ಇದು ಸಾಮೂಹಿಕ ಆತ್ಮಹತ್ಯೆ ಇರಬಹುದೇ ಎಂಬುದು ಪೊಲೀಸರ ಇನ್ನೊಂದು ಶಂಕೆಯಾಗಿದೆ.

Mumbai Family Death Case involving suspected zinc phosphide poisoning through contaminated watermelon

ಪೊಲೀಸರ ಮುಂದಿರುವ ಹೊಸ ಸವಾಲು

ಘಟನೆ ನಡೆದು 11 ದಿನಗಳ ನಂತರ ಕಲ್ಲಂಗಡಿ ಹಣ್ಣಿನಲ್ಲಿ (Mumbai Family Death Case)  ವಿಷವಿರುವುದು ದೃಢಪಟ್ಟಿದೆ. ಇದರಿಂದಾಗಿ ಪೊಲೀಸರ ತನಿಖೆಗೆ ಈಗ ಹೊಸ ಆಯಾಮ ಸಿಕ್ಕಿದೆ. ಯಾರಾದರೂ ಸಂಚು ರೂಪಿಸಿ ಹಣ್ಣಿನಲ್ಲಿ ವಿಷ ಹಾಕಿದ್ದಾರೆಯೇ ಎನ್ನುವ ದೃಷ್ಟಿಯಿಂದಲೂ ತನಿಖೆ ನಡೆಯುತ್ತಿದೆ. ಮನೆಯಲ್ಲಿ ಕೀಟನಾಶಕ ಅಥವಾ ಇಲಿ ವಿಷ ಬಳಸುವಾಗ ಆಹಾರ ಪದಾರ್ಥಗಳಿಂದ ಅವುಗಳನ್ನು ಅತ್ಯಂತ ದೂರವಿಡುವುದು ಎಷ್ಟು ಅವಶ್ಯಕ ಎಂಬುದಕ್ಕೆ ಈ ಕರುಣಾಜನಕ ಘಟನೆಯೇ ಸಾಕ್ಷಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular