PM Ujjwala Yojana 2.0 – ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಒಂದಾಗಿದೆ. 2016 ರಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಮೊದಲ ಹಂತದಲ್ಲಿ ಬಡತನ ರೇಖೆಗಿಂದ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ ಮತ್ತೊಮ್ಮೆ ಈ (PM Ujjwala Yojana 2.0) ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆಯಲು ಬೇಕಾದ ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಮೂಲಕ ಹಂಚಿಕೊಳ್ಳಲಾಗಿದೆ.
PM Ujjwala Yojana 2.0 – ಗ್ರಾಮೀಣ ಭಾಗಗಳಲ್ಲಿ ಅಡುಗೆ ಮಾಡಲು ಮಹಿಳೆಯರು ಕಟ್ಟಿಗೆ ಒಲೆಯನ್ನು ಬಳಸುತ್ತಿದ್ದರು. ಹೆಚ್ಚಾಗಿ ಕಟ್ಟಿಗೆ ಬಳಕೆ ಮಾಡುವುದರಿಂದ ಅದರ ಹೊಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಮಹಿಳೆಯರು ಈ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದರು. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಿದ್ದು, ಮಹಿಳೆಯರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.
PM Ujjwala Yojana 2.0 – ಉಜ್ವಲ 2.0 ಅಡಿಯಲ್ಲಿ ಹೊಸ ಸಂಪರ್ಕ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು
- ಅರ್ಜಿದಾರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳಾ ಸದಸ್ಯರು ಅರ್ಜಿ ಸಲ್ಲಿಸಬೇಕು.
- ಕುಟುಂಬದಲ್ಲಿ ಈಗಾಗಲೇ ಓ ಎಂ ಸಿ ಅಥವಾ ಎಲ್ ಪಿ ಜಿ ಕನೆಕ್ಷನ್ (LPG connection) ಇದ್ದರೆ ಅಂತಹ ಕುಟುಂಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುವುದಿಲ್ಲ.
- ಎಸ್ ಎಸ್ ಟಿ ಪಂಗಡಕ್ಕೆ ಸೇರಿದವರು, ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳು, ಸಮಾಜದಲ್ಲಿ ಅತ್ಯಂತ ಹಿಂದುಳಿದ ವರ್ಗದವರು, ಅರಣ್ಯ ವಾಸಿಗಳು, SECC ಕುಟುಂಬದವರು, ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವವರು ಹೀಗೆ ಮೊದಲಾದ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
- ಈ ವರ್ಗಗಳ ಮಹಿಳೆಯರು ಅರ್ಹರು: ಪರಿಶಿಷ್ಟ ಜಾತಿ/ಪಂಗಡ, ಆರ್ಥಿಕವಾಗಿ ಹಿಂದುಳಿದ ವರ್ಗ (EBC), ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳು
PM Ujjwala Yojana 2.0 – ಉಜ್ವಲ 2.0 ಅಡಿಯಲ್ಲಿ ಹೊಸ ಸಂಪರ್ಕ ಪಡೆದುಕೊಳ್ಳಲು ಬೇಕಾದ ಅಗತ್ಯ ದಾಖಲೆಗಳು:
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರ (ಕೆ ವೈ ಸಿ ಆಗಿರುವುದು ಕಡ್ಡಾಯ)
- ಮೊಬೈಲ್ ಸಂಖ್ಯೆ
- ಆಧಾರ್ ಕಾರ್ಡ್
PM Ujjwala Yojana 2.0 ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅರ್ಜಿದಾರರು ಎರಡು ವಿಧಾನವನ್ನು ಅನುಸರಿಸಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ ಅಡಿಯಲ್ಲಿ ಉಚಿತ ಗ್ಯಾಸ್ ಮತ್ತು ಸಿಲಿಂಡರ್ ಅನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
PM Ujjwala Yojana 2.0 ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- Step-1: Apply Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
- Step-2: ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ “ಆನ್‌ಲೈನ್ ಪೋರ್ಟಲ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮಗೆ ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇರುತ್ತದೆಯೋ ಅದರ ಮೇಲೆ ಕ್ಲಿಕ್ ಮಾಡಬೇಕು.
- Step-3: ಈ ಪೇಜ್ ನಲ್ಲಿ “ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ದಾಖಲಾತಿಗಳನ್ನು ಮತ್ತು ವಿವರವನ್ನು ಭರ್ತಿ ಮಾಡಿ ಆರ್ಜಿ ಸಲ್ಲಿಸಬಹುದು.
I need a gase
Free gase connction