Dinga Dinga Disease – ಇತ್ತಿಚಿಗೆ ಚಿತ್ರ – ವಿಚಿತ್ರ ಕಾಯಿಲೆಗಳು ಕೇಳಿಬರುತ್ತಿವೆ. ಇತ್ತೀಚಿಗಷ್ಟೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದಂತಹ ಕೋವಿಡ್ ಮಹಾಮಾರಿ ಎಷ್ಟರ ಮಟ್ಟಿಗೆ ನಷ್ಟವನ್ನುಂಟು ಮಾಡಿತು ಎಂಬುದು ಎಲ್ಲರಿಗೂ ಗೊತ್ತಿದೆ. ಸದ್ಯ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿದೆಯಂತೆ. ಆ ಕಾಯಿಲೆಗೆ ಡಿಂಗ ಡಿಂಗ (Dinga Dinga Disease) ಎಂದು ಹೆಸರಿಡಲಾಗಿದೆಯಂತೆ. ಈ ಕಾಯಿಲೆಯ ಹೆಸರು ವಿಚಿತ್ರವಾದರೂ ಕೋವಿಡ್ ರೀತಿಯಲ್ಲೇ ಡೇಂಜರಸ್ ಖಾಯಿಲೆ ಇದೆ. ಸದ್ಯ ಉಗಾಂಡದಲ್ಲಿ ಈ ಖಾಯಿಲೆ ಹರಡುತ್ತಿದೆ. ಪ್ರಮುಖವಾಗಿ ಇದು ಮಹಿಳೆಯರು, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.
ಡಿಂಗ ಡಿಂಗ ಕಾಯಿಲೆ (Dinga Dinga Disease) ಎಂಬ ಹೆಸರು ವಿಚಿತ್ರವಾದರೂ, ಕಾಯಿಲೆ ಮಾತ್ರ ತುಂಬಾ ಡೇಂಜರ್ ಅಂತೆ. ಈ ಕಾಯಿಲೆಗೆ ತುತ್ತಾದವರ ದೇಹ ಡ್ಯಾನ್ಸ್ ಮಾಡುವ ರೀತಿ ನಡುಗುತ್ತದೆ. ನಡೆದಾಡಲು ಸಾಧ್ಯವಾಗುವುದಿಲ್ಲ. ಕೈಗಾಲುಗಳು ಅತೀವವಾಗಿ ನಡುಗಲು ಆರಂಭಿಸುತ್ತದೆ. ಹೀಗಾಗಿ ಈ ಖಾಯಿಲೆಗೆ ಡಿಂಗಾ ಡಿಂಗಾ ಅನ್ನೋ ಹೆಸರು ಬಂದಿದೆ. ಸಂಪೂರ್ಣ ದೇಹವೇ ನಡುಗಲು ಆರಂಭಿಸುತ್ತದೆ. (Dinga Dinga Disease) ಆಫ್ರಿಕನ್ ದೇಶಗಳಲ್ಲಿ ಈ ಖಾಯಿಲೆ ಕಾಣಿಸಿಕೊಂಡಿದೆ. ಈ ಪೈಕಿ (Dinga Dinga Disease) ಉಗಾಂಡದಲ್ಲಿ ವೇಗವಾಗಿ ಹರಡುತ್ತಿದೆ. ಜೊತೆಗೆ ಆತಂಕ ಹೆಚ್ಚಿಸುತ್ತಿದ್ದು, ಈ ಕಾಯಿಲೆ ಉಗಾಂಡವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ಹೇಳಲಾಗುತ್ತಿದೆ.
ಉಗಾಂಡದ ಬುಂಡಿಬುಗಿಯೋ ಜಿಲ್ಲೆಯಲ್ಲಿ ಹೆಚ್ಚಾಗಿ ಈ (Dinga Dinga Disease) ಖಾಯಿಲೆ ಕಾಣಿಸಿಕೊಂಡಿದೆ. ಈ ಕಾಯಿಲೆಯ ಲಕ್ಷಗಳೇನು ಎಂಬ ವಿಚಾರಕ್ಕೆ ಬಂದರೇ, ಸೋಂಕು ಕಾಣಿಸಿಕೊಂಡವರಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಹೆಚ್ಚಾಗಿ ಕೈಕಾಲು, ದೇಹ ನಡುಗಲು ಆರಂಭವಾಗುತ್ತದೆ. ಇಂದು ಒಂದು ಮಾದರಿಯಲ್ಲಿ ಡ್ಯಾನ್ಸ್ ಆಡುವ ರೀತಿಯಲ್ಲಿರುತ್ತದೆಯಂತೆ. ಇಲ್ಲಿಯವರೆಗೂ ಉಗಾಂಡದ (Dinga Dinga Disease) ಒಂದೇ ಜಿಲ್ಲೆಯಲ್ಲಿ 300 ಕ್ಕೂ ಅಧಿಕ ಕೇಸ್ ಗಳು ಪತ್ತೆಯಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ 2023 ರಲ್ಲೇ ಈ ಕಾಯಿಲೆ ಕಾಣಿಸಿಕೊಂಡಿತ್ತಂತೆ. ಅಂದಿನಿಂದಲೂ ಉಗಾಂಡ ದೇಶದ ವಿಜ್ಞಾನಿಗಳು ಈ ಕಾಯಿಲೆಯ ಮೂಲ ಪತ್ತೆ ಹಚ್ಚುತ್ತಿದ್ದಾರೆ ಎನ್ನಲಾಗಿದೆ. (Dinga Dinga Disease) ಆದರೂ ಸಹ ಇನ್ನೂ ಈ ಕಾಯಿಲೆಯ ಮೂಲಕ ತಿಳಿದುಬಂದಿಲ್ಲ. ಸದ್ಯ ಈ ಕಾಯಿಲೆಗೆ ಔಷಧಿಯಿಲ್ಲದ ಕಾರಣ, ಲಕ್ಷಣಗಳಿಗೆ ತಕ್ಕಂತೆ ಔಷಧವನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.