ಇತ್ತೀಚಿಗೆ ಮದುವೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತದೆ. ಮದುವೆಯಲ್ಲಿ ವಧು-ವರನ ಡ್ಯಾನ್ಸ್ ವಿಡಿಯೋ ಸೇರಿದಂತೆ ಗಲಾಟೆ ಮಾಡುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮದುವೆ ಮಂಟಪದಲ್ಲೇ ವಧುವಿನ ಸಹೋದರಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ನಾದಿನಿ ವರದನೊಂದಿಗೆ ವರ್ತಿಸಿದ ರೀತಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗುವಂತೆ ಮಾಡಿದೆ. ಇದನ್ನು ನೋಡಿದ ವಧು ಸೈಲೆಂಟ್ ಆಗಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಮದುವೆ ಎಂದ ಕೂಡಲೇ ದೊಡ್ಡ ಸಂಭ್ರಮ ಎಂದೇ ಹೇಳಬಹುದು. ಮದುವೆ ಕಾರ್ಯಕ್ರಮದ ಅಂಗವಾಗಿ ಮೆಹಂದಿ, ಹಳದಿ ಡ್ಯಾನ್ಸ್ ಗಳು, ಆಟಗಳು, ನೃತ್ಯಗಳು ಹೀಗೆ ಮದುವೆಯ ಸಂಭ್ರಮದಲ್ಲಿ ಎರಡೂ ಕುಟುಂಬಗಳು, ಸ್ನೇಹಿತರು ಸಂಭ್ರಮಿಸುತ್ತಾರೆ. ಇತ್ತೀಚಿಗೆ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ವಧುವಿನ ಸಹೋದರಿ ಮಾಡಿದ ನೃತ್ಯ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ಆಕೆ ಡ್ಯಾನ್ಸ್ ಮಾಡುವುದು ಮಾತ್ರವಲ್ಲದೇ ವರನ ಜೊತೆಗೆ ಡ್ಯಾನ್ಸ್ ಮಾಡಿದ್ದಾಳೆ. ಇದು ನೋಡೋಕೆ ಒಂದು ಮಾದರಿಯಲ್ಲಿ ಸರಸವಾಡಿದಂತಿದೆ. ಇದನ್ನು ನೋಡಿದ ವಧು ಏನೂ ಮಾಡದೇ ಬೇಸರಗೊಂಡು ಸುಮ್ಮನಿರುತ್ತಾಳೆ. ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು anmol.hameed ಎಂಬುವವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮದುವೆಯೊಂದು ನಡೆಯುತ್ತಿರುತ್ತದೆ. ಮದುವೆಯ ನಿಮಿತ್ತ ವೇದಿಕೆಯ ಮೇಲಿದ್ದ ಸೋಫಾದಲ್ಲಿ ವರ ಹಾಗೂ ವಧು ಇಬ್ಬರೂ ಕುಳಿತಿರುತ್ತಾರೆ. ಈ ವೇಳೆ ವಧುವಿನ ಸಹೋದರಿ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ. ಬಾಲಿವುಡ್ ನ ಸೂಪರ್ ಹಿಟ್ ಸಾಂಗ್ ವೋ ಜಿಂಕೆ ಆಗೆ ಜಿ ಎಂಬ ಹಾಡಿಗೆ ಸ್ಟೈಲಿಷ್ ಆಗಿ ಹೆಜ್ಜೆಹಾಕಿದ್ದಾರೆ. ಡ್ಯಾನ್ಸ್ ಮಾಡುತ್ತಾ ವರನ ತೊಡೆಯ ಮೇಲೆ ಕುಳಿತುಕೊಳ್ಳುವುದು, ವರನ ಕತ್ತಿಗೆ ಕೈ ಹಾಕಿ ತಬ್ಬಿಕೊಳ್ಳಲು ಹೋಗುವುದು ಮಾಡುತ್ತಾಳೆ. ಅದನ್ನು ನೋಡಿದ ವರ ನಾಚಿಕೊಳ್ಳುತ್ತಾನೆ. ಇದೆನ್ನಲಾ ನೋಡುತ್ತಾ ಪಕ್ಕದಲ್ಲಿದ್ದ ವಧು ಸುಮ್ಮನೇ ಕೋಪ ಹಾಗೂ ಬೇಸರಿದಿಂದ ಸೈಲೆಂಟ್ ಆಗಿರುತ್ತಾಳೆ. ಈ ವಿಡಿಯೋ ವೈರಲ್ ಆಗಿದ್ದು, ಸಾವಿರಗಟ್ಟಲೇ ವೀಕ್ಷಣೆ ಕಂಡಿದೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.