Aadhaar Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡುವರರಿಗೆ ಗುಡ್ ನ್ಯೂಸ್, ಆಧಾರ್ ಅಪ್ಡೇಟ್ ದಿನಾಂಕ ವಿಸ್ತರಣೆ ಮಾಡಿದ UIDAI…!

Aadhaar Update – ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್‍ ಕಾರ್ಡ್ ಹೊಂದಿರುವಂತವರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಆಧಾರ್‍ ಕಾರ್ಡ್ ಆನ್ ಲೈನ್ ಮೂಲಕ ಅಪ್ಡೇಟ್ ಮಾಡಲು ಉಚಿತವಾಗಿ ಅಪ್ಡೇಟ್ ಮಾಡಲು ಡಿ.14 ಕೊನೆಯ ಗಡುವು ನೀಡಲಾಗಿತ್ತು. ಇದೀಗ ಜೂ.14, 2025 ರವರೆಗೂ ಅವಧಿಯನ್ನು ವಿಸ್ತರಿಸಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಆಧಾರ್‍ ಕಾರ್ಡ್ ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

aadhaar updates date extended 1

ದೇಶದಲ್ಲಿ ಕೋಟ್ಯಂತರ ಮಂದಿ ಆಧಾರ್‍ ಕಾರ್ಡ್ ಹೊಂದಿದ್ದಾರೆ. ತಮ್ಮ ಆಧಾರ್‍ ನಲ್ಲಿರುವ ಕೆಲವೊಂದನ್ನು ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ಹಿಂದೆ ಡಿ.14 ರೊಳಗೆ ಉಚಿತ ಅಪ್ಡೇಟ್ ಬಳಿಕ ಹಣ ಪಾವತಿಸಬೇಕಿತ್ತು. ಆದರೆ ಆಧಾರ್‍ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತೊಮ್ಮೆ ಈ ಗಡುವನ್ನು ವಿಸ್ತರಣೆ ಮಾಡಿದೆ. 15ನೇ ಜೂನ್ 2025 ರವರೆಗೂ ಉಚಿತವಾಗಿ ಆನ್ ಲೈನ್ ಮೂಲಕ ತಮ್ಮ ಆಧಾರ್‍ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಜನರು ತಮ್ಮ ಸಮೀಪದ ಆಧಾರ್‍ ನೊಂದಣಿ ಕೇಂದ್ರಕ್ಕೆ ತೆರಳಿ ಹೆಸರು, ವಿಳಾಸ ಸೇರಿದಂತೆ ಕೆಲವೊಂದನ್ನು ಅಪ್ಡೇಟ್ ಮಾಡಿಕೊಳ್ಳಬಹುದು.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ಪೋಸ್ಟ್ : Click Here

ಆನ್ ಲೈನ್ ಮೂಲಕ ಈ ರೀತಿಯಾಗಿ ನಿಮ್ಮ ಆಧಾರ್‍ ಅಪ್ಡೇಟ್ ಮಾಡಿ:

ಹಂತ 1: UIDAI ವೆಬ್‌ಸೈಟ್‌ ಗೆ ಭೇಟಿ ನೀಡಿ:

ಹಂತ 2: ಅಪ್ಡೇಟ್ ಪೋರ್ಟಲ್‌ ಗೆ ಪ್ರವೇಶಿಸಿ:

  • ಮೇನು ಬಾರಿನಲ್ಲಿ “My Aadhaar” ಆಪ್ಷನ್ ಕ್ಲಿಕ್ ಮಾಡಿ.
  • “Update Your Aadhaar” ವಿಭಾಗದಲ್ಲಿ, “Update Demographics Data & Check Status” ಆಯ್ಕೆಮಾಡಿ.

ಹಂತ 3: ನಿಮ್ಮ ಖಾತೆಗೆ ಲಾಗಿನ್ ಮಾಡಿ:

  • ಆಧಾರ್ ಸ್ವಯಂ-ಸೇವಾ ಅಪ್ಡೇಟ್ ಪೋರ್ಟಲ್‌ ತೆರೆದುಕೊಳ್ಳುತ್ತದೆ.
  • “Login” ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು CAPTCHA ಕೋಡ್ ನಮೂದಿಸಿ, ನಂತರ “Send OTP” ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. OTP ನಮೂದಿಸಿ ಲಾಗಿನ್ ಮಾಡಿ.

ಹಂತ 4: ಅಪ್ಡೇಟ್ ಆಯ್ಕೆಯನ್ನು ಆಯ್ಕೆಮಾಡಿ:

  • ಲಾಗಿನ್ ಆದ ನಂತರ, ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಲು ಹಲವಾರು ಆಯ್ಕೆಗಳು ಕಾಣಸಿಕೊಳ್ಳುತ್ತದೆ. ನೀವು ಯಾವ ವಿವರಗಳನ್ನು ಅಪ್ಡೇಟ್ ಮಾಡಬೇಕೆಂದು ಬಯಸುತ್ತೀರೋ (ಮನೆ ವಿಳಾಸ, ಹೆಸರು, ಜನ್ಮದಿನಾಂಕ ಮುಂತಾದವು) ಅದನ್ನು ಆಯ್ಕೆಮಾಡಿ. ಬಳಿಕ ನಿಮ್ಮ ವಿವರಗಳನ್ನು ನಮೂದಿಸಿ

ಹಂತ 5: ‌ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ:

  • ದೃಢೀಕರಣಕ್ಕಾಗಿ ಅಗತ್ಯ ದಾಖಲೆಗಳನ್ನು (ಹೆಸರು, ವಿಳಾಸ ದೃಢೀಕರಣ) ಅಪ್‌ಲೋಡ್ ಮಾಡಲು ಮಾಡಬೇಕು.
  • ನೀವು ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ.
  • ಎಲ್ಲಾ ಮಾಹಿತಿ ಸರಿಯಾಗಿ ನಮೂದಿಸಿದರೆ, “Submit” ಮೇಲೆ ಕ್ಲಿಕ್ ಮಾಡಿ.
  • ಬಳಿಕ ಒಂದು ದೃಢೀಕರಣ ಸ್ಲಿಪ್ ರಚನೆಯಾಗುತ್ತದೆ. ಈ ಸ್ಲಿಪ್ ಅನ್ನು ಭವಿಷ್ಯ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಿ. ಇದರಲ್ಲಿ ಅಪ್ಡೇಟ್ ರಿಕ್ವೆಸ್ಟ್ ನಂಬರ್ (URN) ಇರುತ್ತದೆ, ಇದನ್ನು ನೀವು ನಿಮ್ಮ ಅಪ್ಡೇಟ್ ಸ್ಥಿತಿಯನ್ನು ತಿಳಿದುಕೊಳ್ಳಲು ಬಳಸಬಹುದು.

Leave a Comment

Your email address will not be published. Required fields are marked *

Scroll to Top