Viral News – ಸಾಮಾನ್ಯವಾಗಿ ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೇ ಬೆಂಚ್ ಮೇಲೆ ನಿಲ್ಲಿಸುವ ಶಿಕ್ಷೆ ನೀಡುವುದು ನೋಡಿರುತ್ತೇವೆ. ಆದರೆ ಇಲ್ಲೋಂದು ಘಟನೆಯಲ್ಲಿ ತಪ್ಪು ಮಾಡಿದ ಸರ್ಕಾರಿ ನೌಕರರಿಗೆ ಹಿರಿಯ ಅಧಿಕಾರಿ ಶಿಕ್ಷೆ ಕೊಟ್ಟಿದ್ದಾರೆ. CEO ಕೊಟ್ಟ ಶಿಕ್ಷೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗೆ ಹೋದ ಹಿರಿಯ ವ್ಯಕ್ತಿಯನ್ನು ಗಂಟೆ ಗಟ್ಟಲೇ ಕಾಯಿಸಿದ ಸರ್ಕಾರಿ ಸಿಬ್ಬಂದಿಗೆ 20 ನಿಮಿಷಗಳ (Viral News) ಕಾಲ ಸಿಬ್ಬಂದಿ ನಿಲ್ಲುವಂತೆ ಮಾಡಿದ್ದಾರೆ. ನೋಯ್ಡಾ ಸಿಇಒ ಡಾ ಲೋಕೇಶ್ ಎಂಬುವವರು ಈ ರೀತಿಯ ಶಿಕ್ಷೆ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸರ್ಕಾರಿ ಕಛೇರಿಯ ನೌಕರರು ಹಿರಿಯ ವ್ಯಕ್ತಿಯೊಬ್ಬರಿಗೆ ಸರಿಯಾದ ಸೇವೆ ನೀಡದೆ ಅವರನ್ನು ಗಂಟೆಗಟ್ಟಲೆ (Viral News) ಕಾಯುವಂತೆ ಮಾಡಿದ್ದಾರೆ. ನೌಕರರ ಈ ವರ್ತನೆಯಿಂದ ಕೋಪಕೊಂಡ ಸಿಇಒ (CEO)ನೀವು ಕೂಡಾ ಹೀಗೇ ನಿಂತ್ಕೊಂಡೇ ಕೆಲಸ ಮಾಡಿ ಎಂದು ಶಿಕ್ಷೆಯನ್ನು ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. (Viral News) ನೋಯ್ಡಾದ ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಕೆಲಸದ ನಿಮಿತ್ತ ಹೋದ ಹಿರಿಯ ವ್ಯಕ್ತಿಯೊಬ್ಬರನ್ನು 50 ನಿಮಿಷಗಳ ಕಾಲ ಕಾಯುವಂತೆ ಮಾಡಿದ್ದಾರೆ. ಇದನ್ನು ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಸಿಟಿವಿ ಮೂಲಕ ನೋಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇದರಿಂದ ಆಕ್ರೋಷಗೊಂಡ ಸಿಇಒ (CEO) ಹಿರಿಯ ವ್ಯಕ್ತಿಯನ್ನು ಕಾಯಿಸಿದ ರೀತಿ ನೀವು ಮೂವತ್ತು ನಿಮಿಷಗಳ ಕಾಲ ನಿಂತುಕೊಂಡೆ ಕೆಲಸ ಮಾಡಿ ಎಂದು ಕಚೇರಿಯಲ್ಲಿದ್ದ 16 ಮಂದಿ ನೌಕರರಿಗೆ ನಿಂತುಕೊಳ್ಳುವ ಶಿಕ್ಷೆ ನೀಡಿದ್ದಾರೆ. ಕಛೇರಿಗೆ ಭೇಟಿ ನೀಡುವ ಹಿರಿಯ ನಾಗರಿಕರನ್ನು ಕಾಯಿಸದೆ ಅವರ ಕೆಲಸವನ್ನು (Viral News) ಬೇಗ ಮಾಡಿ ಕೊಡಿ ಎಂದು ಡಾ. ಲೋಕೇಶ್ ಆದೇಶ ಮಾಡಿದ್ದರಂತೆ. ಆದರೂ ಸಹ ಕಚೇರಿಯ ಅಧಿಕಾರಿಗಳು ಕ್ಯಾರೇ ಅನ್ನದೆ ಹಿರಿಯ ವ್ಯಕ್ತಿಯನ್ನು ಕಾಯಿಸಿದ ಎಲ್ಲಾ ನೌಕಕರಿಗೆ ಛೀಮಾರಿ ಹಾಕಿದ್ದಾರೆ. ಜೊತೆಗೆ ಶಿಕ್ಷೆಯ ರೂಪದಲ್ಲಿ 30 ನಿಮಿಷಗಳ ಕಾಲ (Viral News) ನಿಂತುಕೊಂಡು ಕೆಲಸ ಮಾಡುವಂತೆ ಆದೇಶಿಸಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿಇಒ (CEO) ರವರ ಈ ಕಾರ್ಯಕ್ಕೆ ನೆಟ್ಟಿಗರು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.