Jobs Alert: ನ್ಯೂ ಇಂಡಿಯಾ ಅಶ್ಯೂರೆನ್ಸ್ ನಲ್ಲಿವೆ 170 ಹುದ್ದೆಗಳು, ಶೀಘ್ರವಾಗಿ ಅರ್ಜಿ ಸಲ್ಲಿಸಿ…!

2

ಇನ್ಸೂರೆನ್ಸ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವಂತವರಿಗೆ ಇಲ್ಲೊಂದು ಸುರ್ವಣ ಅವಕಾಶವಿದೆ. ವಿಮಾ ವಲಯದಲ್ಲಿ ಸರ್ಕಾರಿ ಉದ್ಯೋಗವಾಕಾಶವಿದೆ. ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು (Jobs Alert) ಹೊರಡಿಸಲಾಗಿದೆ. ಸೆ.10 ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಸೆ.29 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆ ಸೇರಿದಂತೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಯಲು ಮುಂದೆ ಓದಿ.

NIACL Recruitment 170 Post -2024
NIACL Recruitment 170 Post -2024

ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆಯಲ್ಲಿ ಸೆ.6 ರಂದು ನೋಟಿಫಿಕೇಷನ್ ಹೊರಡಿಸಿದೆ. ಒಟ್ಟು 170 ಹುದ್ದೆಗಳು ಖಾಲಿಯಿದ್ದು, ಆಡಳಿತ ಅಧಿಕಾರಿ ಸ್ಕೇಲ್-1, ಅಕೌಂಟ್ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು, ಪ್ರಮುಖ ದಿನಾಂಕಗಳು, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿದೆ.

ಖಾಲಿಯಿರುವ ಒಟ್ಟು ಹುದ್ದೆಗಳು 170, ಸಂಬಳ 80 ಸಾವಿರ ನಿಗಧಿ ಪಡಿಸಲಾಗಿದೆ. ವಯೋಮಿತಿ 21 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಸಾಮಾನ್ಯ ಅಭ್ಯರ್ಥಿಗಳು ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ಪ.ಜಾತಿ ಹಾಗೂ ಪಂಗಡ, ವಿಶೇಷ ಚೇತನರು ಶೇ.55 ರಷ್ಟು ಅಂಕಗಳನ್ನು ಪಡೆದಿರಬೇಕು. ಅಕೌಂಟ್ ಹುದ್ದೆಗೆ ಐಸಿಐಎ, ಎಂಬಿಎ ಫೈನಾನ್ಸ್/ ಪಿಜಿಡಿಎಂ ಫೈನಾನ್ಸ್/ಎಂ ಕಾಮ್ ಓದಿರಬೇಕು. ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೇ, ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂಪಾಯಿ, ಪ.ಜಾತಿ ಹಾಗೂ ಪಂಗಡ, ವಿಶೇಷ ಚೇತನರು 100 ರೂಪಾಯಿ ಶುಲ್ಕ ಪಾವತಿಸಬೇಕಿದೆ.

NIACL Recruitment 170 Post -2024
NIACL Recruitment 170 Post -2024

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಬಳಿಕ ಸಂದರ್ಶನ ನಡೆಸಿ ಬಳಿಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಸೆ.10 ರಿಂ ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನಾಂಕ ಸೆ.29 ಆಗಿದೆ. ಅ.1 ಅಡ್ಮಿಟ್ ಕಾರ್ಡ್, ಮೊದಲ ಹಂತದ ಆನ್ ಲೈನ್ ಪರೀಕ್ಷೆ ಅ.13, 2ನೇ ಆನ್ ಲೈನ್ ಪರೀಕ್ಷೆ ನ.17 ರಂದು ನಡೆಯಲಿದೆ.  ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ newindia.co.in ಗೆ ಭೇಟಿ ನೀಡಬಹುದು.

2 thoughts on “Jobs Alert: ನ್ಯೂ ಇಂಡಿಯಾ ಅಶ್ಯೂರೆನ್ಸ್ ನಲ್ಲಿವೆ 170 ಹುದ್ದೆಗಳು, ಶೀಘ್ರವಾಗಿ ಅರ್ಜಿ ಸಲ್ಲಿಸಿ…!

Leave a Reply

Your email address will not be published. Required fields are marked *

Next Post

Black Raisins: ಕಪ್ಪು ಒಣ ದ್ರಾಕ್ಷಿಯಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಗೊತ್ತಾ? ಈ ಎಲ್ಲಾ ರೋಗಗಳಿಗೂ ಚೆಕ್ ಇಡಬಹುದು..!

Tue Sep 10 , 2024
ಒಣ ದ್ರಾಕ್ಷಿಯನ್ನು ನಾವು ಸಿಹಿ ತಯಾರಿಸಲು ಹೆಚ್ಚಾಗಿ ಬಳಸುತ್ತೇವೆ. ಪಾಯಸಕ್ಕೆ ಒಣ ದ್ರಾಕ್ಷಿಯಿದ್ದರೇ ಅದರ ಟೇಸ್ಟ್ ಹೆಚ್ಚುತ್ತದೆ ಎಂದು ಹೇಳಬಹುದಾಗಿದೆ. ಈ ಒಣ ದ್ರಾಕ್ಷಿ ಕೇವಲ ಸಿಹಿ ತಯಾರಿಸೋಕೆ ಮಾತ್ರವಲ್ಲ, ಇದರಲ್ಲಿ ಹೇರಳವಾದ ಔಷಧೀಯ ಗುಣಗಳಿವೆ ಎಂದು ಹೇಳಬಹುದು. ಅದರಲ್ಲೂ ಕಪ್ಪು ಒಣ ದ್ರಾಕ್ಷಿಯಲ್ಲಿ (Black Raisins) ತುಂಬಾನೆ ಔಷಧೀಯ ಗುಣಗಳಿವೆ ಎಂದು ಹೇಳಬಹುದು. ಈ ಒಣ ದ್ರಾಕ್ಷಿಯಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. […]
black raisins benefits
error: Content is protected !!