Viral Video – ಇತ್ತೀಚಿಗೆ ಹಿರಿಯರು ಮಾತ್ರವಲ್ಲದೇ ಅಪ್ರಾಪ್ತರೂ ಸಹ ಪ್ರೇಮಪಾಶಕ್ಕೆ ಸಿಲುಕಿ ದಾರಿತಪ್ಪುತ್ತಿದ್ದಾರೆ. ಕೆಲವರಂತೂ ಸಾರ್ವಜನಿಕ ಪ್ರದೇಶಗಳಲ್ಲಿಯೇ ಅಸಭ್ಯವಾಗಿ ವರ್ತನೆ ಮಾಡಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಅದೇ ರೀತಿ ಇಲ್ಲಿಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇದನ್ನು ಕಂಡ ಪಕ್ಕದ ಮನೆಯ ವ್ಯಕ್ತಿಯ ಜೋಡಿಯ ಮೇಲೆ ನೀರೆರಚಿದ್ದಾರೆ, ಏಯ್ ಇಲ್ಲೇನು ಮಾಡ್ತಾ ಇದ್ದೀರಾ ಎಂದು ಗದರಿಸುವುದರ ಜೊತೆಗೆ ಅವರ ಮೇಲೆ ಚಪ್ಪಲಿ ಎಸೆದು ಅಲ್ಲಿಂದ ಓಡಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಭಾರಿ ಆಕ್ರೋಷಕ್ಕೆ ಕಾರಣವಾಗಿದೆ. ಹೈಸ್ಕೂಲ್ ವಿದ್ಯಾರ್ಥಿಗಳು ಮೂರು ಮಂದಿ ಓಣಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರನ್ನು ತಬ್ಬಿಕೊಂದ ವಿದ್ಯಾರ್ಥಿ ಬಳಿಕ ತನ್ನ ಪ್ರೇಯಸಿಯನ್ನು ಎತ್ತಿಕೊಂಡು ರೊಮ್ಯಾನ್ಸ್ ಮಾಡುತ್ತಾ ನಿಂತಿರುತ್ತಾನೆ. ಅದನ್ನು ಕಂಡ ಅಲ್ಲಿಯ ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರು ಎರಚಿದ್ದಾನೆ. ಏಯ್ ಏನ್ ಮಾಡ್ತಾ ಇದ್ದೀರಾ ಎಂದು ಗದರಿಸಿ, ಅವರ ಮೇಲೆ ಚಪ್ಪಲಿ ಎಸೆದು ಓಡಿಸಿದ್ದಾರೆ. ಇನ್ನೂ ಈ ಘಟನೆ ಎಲ್ಲಿ ನಡೆದಿರೋದು, ನಿಜವಾದ ಘಟನೆಯೋ ಅಥವಾ ರೀಲ್ಸ್ ಗಾಗಿ ಮಾಡಿದ್ದೋ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ ಎಂದು ತಿಳಿದುಬಂದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಇನ್ನೂ ಈ ಸಂಬಂಧ ವಿಡಿಯೋವನ್ನು @viralvibes466 ಹೆಸರಿನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶಾಲಾ ಹುಡುಗಿಯೊಬ್ಬಳು ತನ್ನ ಗೆಳತಿಯೊಂದಿಗೆ ತನ್ನ ಪ್ರೇಮಿಯನ್ನು ಭೇಟಿಯಾಗಲು ಓಣಿ ರಸ್ತೆಗೆ ಬಂದಿರುತ್ತಾಳೆ. ಅಲ್ಲಿ ಆಕೆಯನ್ನು ಪ್ರೇಮಿ ಮುತ್ತಿಟ್ಟು, ಎತ್ತಿಕೊಂಡು ರೊಮ್ಯಾನ್ಸ್ ಮಾಡುತ್ತಾನೆ. ಇದನ್ನು ಕಂಡ ಅಲ್ಲಿದ್ದ ಮನೆಯ ವ್ಯಕ್ತಿಯೋರ್ವ ಅವರ ಮೇಲೆ ನೀರೆರಚಿ, ಏಯ್ ಇಲ್ಲೇನು ಮಾಡ್ತಾ ಇದ್ದೀರಾ ಎಂದು ಗದರಿಸಿದ್ದಾನೆ. ಕೋಪದಿಂದ ಅವರ ಮೇಲೆ ಚಪ್ಪಲಿ ಎಸೆದು ಓಡಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆಯಷ್ಟೆ ಈ ವಿಡಿಯೋ ವನ್ನು ಹಂಚಿಕೊಂಡಿದ್ದು, ಲಕ್ಷಾಂತರ ವೀವ್ಸ್ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಅನೇಕರು ನಾಚಿಕೆಯಿಲ್ಲದ ಅವರಿಗೆ ಸರಿಯಾದ ರೀತಿ ಮಾಡಿದ್ದೀರಾ ಎಂತಲೂ, ಚಪ್ಪಲಿ ಎಸೆದ ದೃಶ್ಯ ಸೂಪರ್ ಎಂತಲೂ, ಅವರ ಮೇಲೆ ಇನ್ನೊಂದು ಚಪ್ಪಲಿಯನ್ನು ಎಸೆಯಬೇಕಿತ್ತು ಎಂತಲೂ ಕಾಮೆಂಟ್ ಗಳನ್ನು ಹರಿಬಿಡುತ್ತಾ ತಮ್ಮ ಆಕ್ರೋಷವನ್ನು ಹೊರಹಾಕಿದ್ದಾರೆ.