Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಪಂ ನಲ್ಲಿ ಪ್ರಭಾರಿ ಪಿಡಿಒ ಸುಭಾನ್ ರವರು ವಿವಿಧ ಅಕೌಂಟ್ ಗಳಲ್ಲಿನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎಲ್ಲೋಡು ಗ್ರಾಪಂ ವ್ಯಾಪ್ತಿಯ ಮುಖಂಡರು ಹಾಗೂ ಸಾರ್ವಜನಿಕರು ಗಂಭೀರ ಆರೋಪಗಳನ್ನು ಮಾಡಿ ಕಚೇರಿ ಮುಂಭಾಗ ಆಕ್ರೋಷ ಹೊರಹಾಕಿದ್ದಾರೆ.
Local News – ಎಲ್ಲೋಡು ಪಿಡಿಒ ವಿರುದ್ದ ಆರೋಪಗಳ ಸುರಿಮಳೆ
ಈ ವೇಳೆ ಗ್ರಾ.ಪಂ ವ್ಯಾಪ್ತಿಯ ಮುಖಂಡ ಕೆ.ನರಸಿಂಹಪ್ಪ ಮಾತನಾಡಿ ಎಲ್ಲೋಡು ಗ್ರಾಮ ಪಂಚಾಯತಿ ಯಲ್ಲಿ ಪಿಡಿಒ ಮನಸೋ ಇಚ್ಚೆ ಸಾರ್ವಜನಿಕರ ತೆರಿಗೆ ಹಣವನ್ನು ಲಪಟಾಯಿಸಿದ್ದಾರೆ. ಕೆಲಸಗಳನ್ನು ಮಾಡದೇ ಇರುವಂತೆ ಸಾಕಷ್ಟು ಕಾಮಗಾರಿಗಳಿಗೆ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಹಣ ಪಾವತಿಸಿದ್ದಾರೆ. ಕ್ರಿಯಾಯೋಜನೆ ಮಾಡದೇ ತಮಗೆ ಇಷ್ಟ ಬಂದಂತೆ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲು ಇಡಬೇಕಾದ ಶೇ. 25% ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಹಾಗಾಗಿ ಇವರ ಮೇಲೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು. ಪರಿಶಿಷ್ಟರ ಅನುದಾನ ದುರ್ಬಳಕೆ ಮಾಡಿದ ದೂರನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ. ಅವರ ವಿರುದ್ದ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
Local News – ಕಚೇರಿಗೆ ಬರುವುದೇ ಅಪರೂಪ!
ಇನ್ನೂ ಗ್ರೇಡ್-2 ಅಧಿಕಾರಿ ಅಥವಾ ಕಾರ್ಯದರ್ಶಿಯನ್ನು ಪಿಡಿಒ ಹುದ್ದೆಗೆ ಪ್ರಭಾರ ವಹಿಸಬಾರದು ಎಂದು ಈ ಹಿಂದೆ ಸಿಇಒ ರವರು ಆದೇಶ ಮಾಡಿದ್ದರು. ಈ ಸಂಬಂಧ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಸಹ ಪಡದು ತಾಲೂಕು ಪಂಚಾಯತಿ ಇಒ ರವರಿಗೆ ದೂರು ನೀಡಲಾಗಿತ್ತು. ಆದರೂ ಸಹ ಅವರು ಎಲ್ಲೋಡು ಪಿಡಿಒ ಸುಭಾನ್ ರವರು ಪ್ರಭಾರಿ ಪಿಡಿಒ ಆಗಿಯೇ ಮುಂದುವರೆಯುತ್ತಿದ್ದಾರೆ. ಪ್ರತಿನಿತ್ಯ ಅವರು ಕಚೇರಿ ಬರೋದು 12 ಖಾಸಗಿ ಹೋಟಲ್ ಗಳಲ್ಲಿ ಗಂಟೆಗೆ. ರಿಯಲ್ ಎಸ್ಟೆಟ್ ಉದ್ಯಮಿಗಳ ಜೊತೆ ವ್ಯವಹಾರಗಳನ್ನುಮಾಡಿಕೊಂಡು ಇರುತ್ತಾರೆ. ಗ್ರಾಮ ಸಭೆ ನಡೆಸಿ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ಮಾಡಬೇಕು. ಆದರೆ ಗ್ರಾಮ ಸಭೆಯ ನಿಯಾಮವಳಿಗಳನ್ನೇ ಗಾಳಿಗೆ ತೂರಿ ತಮಗೆ ಇಚ್ಚೆ ಬಂದಂತೆ ಕಾಮಗಾರಿಗಳನ್ನು ಪ್ಲಾನ್ ಮಾಡಿ ಕೆಲಸ ಮಾಡಿಸುತ್ತಾರೆ. ಇದೆಲ್ಲದರ ಜೊತೆಗೆ ಸದಸ್ಯರ ಮೇಲೆ ದೌರ್ಜನ್ಯ ಮಾಡುವುದು, ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುವುದು ಮಾಡುತ್ತಾರೆ ಎಂದು ಆರೋಪಿಸಿದರು.
Local News – ಮಾಜಿ ಅಧ್ಯಕ್ಷೆ ಅರುಣಮ್ಮ ಹೇಳಿದ್ದು
ಬಳಿಕ ಎಲ್ಲೋಡು ಗ್ರಾ.ಪಂ ಮಾಜಿ ಅಧ್ಯಕ್ಷೆ ಅರುಣಮ್ಮ ಮಾತನಾಡಿ, ಪ್ರಭಾರಿ ಪಿಡಿಒ ಸುಭಾನ್ ರವರು ಸದಸ್ಯರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾರೆ. ತಮಗೆ ಇಷ್ಟ ಬಂದವರಿಗೆ ಬಿಲ್ ಗಳನ್ನು ಮಾಡಿಕೊಡುತ್ತಾರೆ. ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಡೆಸದೇ ಬಿಲ್ ಗಳನ್ನು ಮಾಡುತ್ತಾರೆ. ನಮ್ಮ ವಿರುದ್ದ ಹಣ ದುರ್ಬಳಕೆಯ ಆರೋಪ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಹಣ ದುರ್ಬಳಕೆಯಾಗಿದ್ದೇ ಆದರೇ ಕಾನೂನಿನ ಪ್ರಕಾರ ಏನು ಶಿಕ್ಷೆಯಾದರೂ ನಾನು ಸಿದ್ದನಿದ್ದೇನೆ ಎಂದರು.
Read this also : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗುಡಿಬಂಡೆ ಗ್ರಾಮ ಆಡಳಿತಾಧಿಕಾರಿ…!
Local News – ಪಿಡಿಒ ಸುಭಾನ್ ಪ್ರತಿಕ್ರಿಯೆ
ಈ ಕುರಿತು ಪಿಡಿಒ ಸುಭಾನ್ ಪ್ರತಿಕ್ರಿಯೆ ನೀಡಿ, ನನ್ನ ವಿರುದ್ದ ಮಾಡುತ್ತಿರುವ ಎಲ್ಲಾ ಆರೋಪಗಳು ನಿರಾಧಾರವಾಗಿದೆ. ನಾನು ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ಅನುಮೋದನೆ, ಸೂಚನೆ ಇಲ್ಲದೇ ಯಾವುದೇ ಬಿಲ್ ಗಳನ್ನು ಮಾಡುವುದಿಲ್ಲ. ಗ್ರಾಪಂ ಸದಸ್ಯರುಗಳ ಸಮ್ಮುಖದಲ್ಲಿಯೇ ಗ್ರಾಮ ಸಭೆಗಳನ್ನು ನಡೆಸಲಾಗಿದೆ. ನಿಯಾಮವಳಿಗಳಂತೆ ಕಾಮಗಾರಿಗಳು ಸೇರಿದಂತೆ ಇತರೆ ಬಿಲ್ ಗಳನ್ನು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.