ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮಹಿಳೆಯರ ಸುರಕ್ಷತೆಯನ್ನೇ ಪ್ರಶ್ನಿಸುವಂತಹ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವತಿಯನ್ನು (Palghar Woman Attack) ಆಕೆಯ ಸಹೋದ್ಯೋಗಿಯೇ ರಸ್ತೆಯಲ್ಲೇ ಹಿಂಬಾಲಿಸಿ, ಕುಡುಗೋಲಿನಿಂದ ಕುತ್ತಿಗೆಗೆ ಇರಿದು ಕೊಲೆಗೆ ಯತ್ನಿಸಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಇಡೀ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Palghar Woman Attack – ರಸ್ತೆಯಲ್ಲೇ ಬೆನ್ನಟ್ಟಿ ಕುತ್ತಿಗೆಗೆ ಇರಿದ ನರಾಧಮ!
ಈ ಭೀಕರ ಘಟನೆ ನಡೆದಿರುವುದು ಜೂನ್ 12ರ ಶುಕ್ರವಾರ ಸಂಜೆ ಸುಮಾರು 6:15 ರ ಸುಮಾರಿಗೆ. ಪಾಲ್ಘರ್ ಜಿಲ್ಲಾ ಕಲೆಕ್ಟರ್ ಕಚೇರಿಯ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಲ್ ಸಾವಂತ್ ಎಂಬ ಯುವತಿ ಎಂದಿನಂತೆ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಓಡಿಬಂದ ಅಮೋಲ್ ಮುಲೆ ಎಂಬಾತ ಆಕೆಯ ಮೇಲೆ ಕುಡುಗೋಲಿನಿಂದ ಮುಗಿಬಿದ್ದಿದ್ದಾನೆ. ಕುತ್ತಿಗೆ, ಬೆನ್ನು, ಭುಜ ಹಾಗೂ ಸೊಂಟದ ಭಾಗಕ್ಕೆ ಒಂದಲ್ಲ ಎರಡಲ್ಲ.. ಬರೋಬ್ಬರಿ ಎಂಟು ಬಾರಿ ಮನಬಂದಂತೆ ಇರಿದು ರಕ್ತದ ಮಡುವಿನಲ್ಲಿ ತಳ್ಳಿದ್ದಾನೆ. ಆರೋಪಿ ಅಮೋಲ್ ಮುಲೆ ನ್ಯಾಯಾಲಯದ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಲೈವ್ ದೃಶ್ಯ
ಈ ಇಡೀ ಕ್ರೂರ ಕೃತ್ಯದ ದೃಶ್ಯ ಹತ್ತಿರದಲ್ಲೇ ಇದ್ದ ಸಿಸಿಟಿವಿ (CCTV Video Here) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವತಿ ಪ್ರಾಣಭಯದಿಂದ ತರಗೆಲೆಯಂತೆ ಕುಸಿದುಬಿದ್ದರೂ ಆ ಪಾಪಿ ಮಾತ್ರ ದಯೆ ತೋರದೆ ಆಕೆಗೆ ಹೊಡೆಯುತ್ತಲೇ ಇದ್ದದ್ದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಬಳಿಕ ಸ್ಥಳೀಯರು ಜಮಾಯಿಸುತ್ತಿದ್ದಂತೆ ತನ್ನ ಬ್ಯಾಗ್ ಹಾಗೂ ಹಲ್ಲೆಗೆ ಬಳಸಿದ ಆಯುಧವನ್ನು ಅಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ (Palghar Woman Attack) ಬಿದ್ದಿದ್ದ ಮಹಿಳೆಯನ್ನು ಕಂಡ ದಾರಿಹೋಕರೊಬ್ಬರು ತಕ್ಷಣ ವಾಹನ ನಿಲ್ಲಿಸಿ, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಯುವತಿಯ ಸ್ಥಿತಿ ಅತ್ಯಂತ ಗಂಭೀರ
ಹಲ್ಲೆಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಸ್ನೇಹಲ್ ಸಾವಂತ್ ಅವರನ್ನು ಮೊದಲು ಪಾಲ್ಘರ್‌ನ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಕೆಯ ದೇಹದ ಪ್ರಮುಖ ಭಾಗಗಳಿಗೆ ಬಲವಾದ (Palghar Woman Attack) ಗಾಯಗಳಾಗಿದ್ದರಿಂದ ಮತ್ತು ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಬೇರೆ ಸುಸಜ್ಜಿತ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಯುವತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. Read this also : ಅಮಾನವೀಯ ಕೃತ್ಯ: ಜಗಳದ ಭರದಲ್ಲಿ ಪತ್ನಿಯ ಮೂಗು, ಕೆನ್ನೆ ಕಚ್ಚಿ ಮಾಂಸ ಕಿತ್ತ ರಾಕ್ಷಸ ಪತಿ!
ದಾಳಿಗೆ ಅಸಲಿ ಕಾರಣವೇನು? ತನಿಖೆ ತೀವ್ರಗೊಳಿಸಿದ ಪೊಲೀಸರು
ಈ ಭೀಕರ ದಾಳಿಗೆ ನಿಖರವಾದ ಕಾರಣವೇನೆಂದು ಇನ್ನು ಸ್ಪಷ್ಟವಾಗಿಲ್ಲ. ಪ್ರೀತಿ-ಪ್ರೇಮದ ನಿರಾಕರಣೆಯೋ ಅಥವಾ ಕಚೇರಿಯ ವೈಯಕ್ತಿಕ ದ್ವೇಷವೋ ಎಂಬ ಕೋನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ఘಟನಾ ಸ್ಥಳಕ್ಕೆ ಪಾಲ್ಘರ್ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶಮುಖ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ (Forensic) ತಂಡ ಕೂಡ ಸ್ಥಳದಿಂದ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಪೊಲೀಸರ ಪ್ರಕಟಣೆ: “ಸದ್ಯ ಆರೋಪಿ ಅಮೋಲ್ ಮುಲೆ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಲಾಗಿದೆ. ಶೀಘ್ರದಲ್ಲೇ (Palghar Woman Attack) ಆತನನ್ನು ಹೆಡೆಮುರಿ ಕಟ್ಟಿ ಕಾನೂನಿನ ಮುಂದೆ ನಿಲ್ಲಿಸಲಾಗುವುದು.”
ಹಗಲು ಹೊತ್ತಿನಲ್ಲೇ, ಸಾರ್ವಜನಿಕ ರಸ್ತೆಯಲ್ಲೇ ಮಹಿಳೆಯರ ಮೇಲೆ ನಡೆಯುತ್ತಿರುವ ಇಂತಹ ಸರಣಿ ದಾಳಿಗಳು ನಿಜಕ್ಕೂ ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಘಟನೆಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

