TV Serials – ಮನೆಗಳಲ್ಲಿ ಸೀರಿಯಲ್ ಗಳ ಹುಚ್ಚು ಎಷ್ಟಿದೆ ಅಂದ್ರೆ, ಸೀರಿಯಲ್ ನೋಡುವಾಗ ಕಳ್ಳರು ಬಂದು ಮನೆ ಲೂಟಿ ಮಾಡಿದರೂ, ಪಕ್ಕ ಹಾವು ಬಂದರೂ ಸಹ ಟಿ.ವಿ. ಸೀರಿಯಲ್ ನೋಡುತ್ತಾ ಮಗ್ನರಾಗಿರುತ್ತಾರೆ. ಜೊತೆಗೆ ಈ ಸೀರಿಯಲ್ ಅಥವಾ ಸಿನೆಮಾಗಳಲ್ಲಿನ ಕೆಲವೊಂದು ದೃಶ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸೀರಿಯಲ್ ಗಳ ಪ್ರಭಾವಕ್ಕೆ ಒಳಗಾದ ಯುವಕನೋರ್ವ ಕಿಡ್ನಾಪ್ ನಾಟಕ ಮಾಡಿದ್ದಾನೆ. ಈ […]

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಮಾ.8 ರಂದು ರಾಷ್ಟ್ರೀಯ ಲೋಕ ಅದಾಲತ್  ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜೆ.ಎಂ.ಎಫ್.ಸಿ ನ್ಯಾಯಾಧಶೀ ಎಂ.ಹರೀಶ್ ತಿಳಿಸಿದರು. ಈ ಸಂಬಂಧ ಗುಡಿಬಂಡೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಏರ್ಫಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾ. 8 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಿದ್ದು, ನ್ಯಾಯಾಲಯದಲ್ಲಿ […]

Tamilnadu – ಶಿಕ್ಷಕರನ್ನು ದೇವರಂತೆ ಕಾಣಲಾಗುತ್ತದೆ, ಅದರಿಂದಲೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಎಂದು ಹೇಳಲಾಗುತ್ತದೆ. ಆದರೆ ಅದೇ ಶಿಕ್ಷಕ ಇಲ್ಲಿ ಕೀಚಕನಾಗಿದ್ದಾನೆ. ತಮಿಳುನಾಡಿನ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿನಿಯ ಮೇಲೆ ಮೂರು ಮಂದಿ ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೀನಕೃತ್ಯ ನಡೆದಿದೆ. ಈ ಸಂಬಂಧ ಮೂರು ಮಂದಿ ಕಾಮುಕ ಶಿಕ್ಷಕರನ್ನು ಬಂಧಿಸಲಾಗಿದ್ದು, ಮೂವರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಕೃಷ್ಣಗಿರಿಯ ಪ್ರೌಢಶಾಲೆಯೊಂದರಲ್ಲಿ […]

School Day – ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ಸೋಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಮಂಗಳ ಅಶ್ವತ್ಥಪ್ಪ ಅಭಿಪ್ರಾಯ ಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಶ್ರೀ ಸತ್ಯ ಸಾಯಿ ಬಾಲ ಮಂದಿರ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ […]

Urdu  – ಉರ್ದು ಭಾಷೆ ಬೆಳೆಸಿ ಅಭಿವೃದ್ಧಿಪಡಿಸುವುದಕ್ಕಾಗಿ ಉರ್ದು ಅಕಾಡೆಮಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉರ್ದು ಶಾಲೆಗಳ ದಾಖಲಾತಿ ಹೆಚ್ಚಳವಾಗಬೇಕು, ಗುಡಿಬಂಡೆಯಲ್ಲಿ ಉರ್ದು ಅಂಗನವಾಡಿಗಳ ಸ್ಥಾಪನೆ ಮಾಡಬೇಕೆಂದು  ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮಹಮದ್ ಅಲಿಖಾಜಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದ ಶಾದಿ ಮಹಲ್ ನಲ್ಲಿ ಕರ್ನಾಟಕ ಉರ್ದು ಅಕಾಡಮಿ, ಉರ್ದು ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಉರ್ದು ಉತ್ಸವ ಹಾಗೂ ಕವಿ […]

Local News ಇತ್ತಿಚಿಗಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮುದ್ದು ಗೌರಮ್ಮ ರವರನ್ನು ಗುಡಿಬಂಡೆ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ಗಂಗಾಧರ್‍ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮುಂದೆ ಬರುವುದೇ ಕಷ್ಟ ಅಂತಹುದರಲ್ಲಿ ವಾಲ್ಮೀಕಿ ಸಮುದಾಯದ ಓರ್ವ ಮಹಿಳೆ ಧೈರ್ಯದಿಂದ ಚುನಾವಣೆಗೆ […]

Viral Video – ತನ್ನ ಬಾಯ್ ಫ್ರೆಂಡ್ ಮಾತಿಗೆ ಕಟ್ಟುಬಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮನೆಯ ಲಾಕರ್‍ ಕದ್ದಿದ್ದಾಳೆ. ಬಳಿಕ ಆಕೆ ಸಿಕ್ಕಿಬಿದಿದ್ದಾಳೆ. ಈ ಘಟನೆ ಗುಜರಾತಿನ ಅಹಮದಾಬಾದಿನ ಶೆಲಾದಲ್ಲಿ ನಡೆದಿದೆ ಎನ್ನಲಾಗಿದೆ. ಸದ್ಯ ಅಪ್ರಾಪ್ತ ಬಾಲಕಿ ಪೊಲೀಸರ ಅತಿಥಿಯಾಗಿದ್ದಾಳೆ. ಅಪ್ರಾಪ್ತ ಬಾಲಕಿ ಮನೆಯಲ್ಲಿದ್ದ ಲಾಕರ್‍ ಕದ್ದು ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಎಸ್ಕೇಪ್ ಆಗುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಗುಜರಾತಿನ ಅಹಮದಾಬಾದಿನ ಶೆಲಾದಲ್ಲಿ […]

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 19 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ ಸಿದ್ದಯ್ಯರವರನ್ನು ಶಾಲಾ ಸಿಬ್ಬಂದಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ವೇಳೆ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕಿ ಗಂಗರತ್ನಮ್ಮ ನಿವೃತ್ತರಾದ ಶಿಕ್ಷಕ ಸಿದ್ದಯ್ಯ ರವರು ತುಂಬಾ ಸರಳ ಜೀವಿ. ತಮ್ಮ ಸುಮಾರು ವರ್ಷಗಳ ಕಾಲ […]

Viral News- ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಸಾವು ಅನ್ನೋದು ಖಚಿತವಾಗಿರುತ್ತದೆ. ಹುಟ್ಟು ಖಚಿತ ಸಾವು ನಿಶ್ಚಿತ ಎಂದೇ ಹೇಳಲಾಗುತ್ತದೆ. ಇಲ್ಲೊಬ್ಬ ಯುವತಿ ಸಾವಿನ ನಂತರ ಏನಾಗುತ್ತದೆ ಎಂಬುದನ್ನು ಇಂಟರ್‍ ನೆಟ್ ನಲ್ಲಿ ಹುಡುಕಿದ್ದಾಳೆ. ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುರೋಪಿಯನ್ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿದ ಈಕೆ ಸಾವಿನ ಕುರಿತು ಸಂಶೋಧನೆ ನಡೆಸುತ್ತಿದ್ದಳಂತೆ. ಈ ಕಾರಣದಿಂದ ಸುಮಾರು ದಿನಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಸಹ […]

Local News – ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಹಿಳಾ ಮೀಸಲಿನಿಂದ ಅಧ್ಯಕ್ಷರಾಗಿ ಮುನಿಲಕ್ಷ್ಮಮ್ಮ ಹಾಗೂ ಪರಿಶಿಷ್ಟ ಪಂಗಡ ಮಹಿಳಾ ಮೀಸಲಿನಿಂದ ಉಪಾಧ್ಯಕ್ಷರಾಗಿ ಮುದ್ದು ಗಂಗಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾ.ಪಂ ನ ಉಳಿಕೆ ಅವಧಿಗೆ ಚುನಾವಣೆಯನ್ನು ನಿಗಧಿಪಡಿಸಿದ್ದು, ಅದರಂತೆ ಅಧಿಸೂಚನೆಯಂತೆ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಒಂದೇ ನಾಮಪತ್ರ […]

error: Content is protected !!