Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ಪುತ್ಥಳಿಯ ಬಳಿ ಕೈವಾರ ತಾತಯ್ಯ ಹಾಗೂ ಹಾವಳಿ ಬೈರೇಗೌಡ ರವರ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಈ ವಿವಾದಿತ ಜಾಗವನ್ನು ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಮದೋಬಸ್ತ್ ನೊಂದಿಗೆ ಮರು ಸರ್ವೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
Local News – ಗುಡಿಬಂಡೆ ಪುತ್ಥಳಿ ವಿವಾದ ಏನು?
ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂಭಾಗದ ಖಾಲಿ ಜಾಗದಲ್ಲಿ ಒಂದು ತಿಂಗಳ ಹಿಂದೆಯಷ್ಟೆ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯನವರ ಪುತ್ಥಳಿ ನಿರ್ಮಾಣ ಮಾಡಲು ಕಾರ್ಯಕ್ರಮ ನಿಗಧಿ ಮಾಡಲಾಗಿತ್ತು. ಆದರೆ ಅದೇ ಜಾಗದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣ ಮಾಡಬೇಕೆಂಬ ಒತ್ತಾಯ ಹಾಗೂ ಮನವಿ ಸಹ ಬಂದಿದ್ದು, ಜೋರಾದ ಗಲಾಟೆ ನಡೆದಿತ್ತು. ಈ ಕಾರಣದಿಂದ ಆ ಜಾಗವನ್ನು ವಿವಾದಿತ ಜಾಗವೆಂದು ಯಾರು ಜಾಗದಲ್ಲಿ ಏನು ಮಾಡಬಾರದೆಂದು ನಿಷೇಧ ಹೇರಲಾಗಿತ್ತು.
Read this also : Gudibande : ಒಂದೇ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಎರಡು ಸಮುದಾಯಗಳ ನಡುವೆ ವಾಗ್ವಾದ
Local News – ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆ: ಸಂಧಾನಕ್ಕೆ ಯತ್ನ
ಬಳಿಕ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎರಡೂ ಸಮುದಾಯಗಳ ಮುಖಂಡರಗಳ ಸಭೆ ನಡೆಸಲಾಗಿತ್ತು. ನಂತರ ವಿವಾದಿತ ಜಾಗದ ಮರು ಸರ್ವೆ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ಬುಧವಾರ ತಹಸೀಲ್ದಾರ್ ಸಿಗ್ಬತ್ತುಲ್ಲಾ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನೊಂದಿಗೆ ಸರ್ವೆ ಮಾಡಲಾಯಿತು. ಸರ್ವೆ ಮುಗಿದ ಬಳಿಕ ಸ್ಥಳದಲ್ಲೇ ವರದಿಯನ್ನು ಸಿದ್ದಪಡಿಸಿ ಎರಡೂ ಸಮುದಾಯದವರಿಂದ ಸಹಿ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
Local News – ಮರು-ಸರ್ವೆ ಕಾರ್ಯ
ಇನ್ನೂ ಈ ಕುರಿತು ತಹಸೀಲ್ದಾರ್ ಸಿಗ್ಬತ್ತುಲ್ಲಾ ಪ್ರತಿಕ್ರಿಯಿಸಿದ್ದು, ಕಳೆದ ಒಂದು ತಿಂಗಳ ಹಿಂದೆ ಒಂದೇ ಜಾಗದಲ್ಲಿ ಎರಡು ಸಮುದಾಯದವರು ಪುತ್ಥಳಿ ನಿರ್ಮಾಣ ಮಾಡಲು ಮನವಿ ಮಾಡಿದ್ದರು. ನಂತರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ವಿಚಾರವನ್ನು ಜಿಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ವಿವಾದ ಬಗೆಹರಿಸಲು ಕಮಿಟಿಯೊಂದನ್ನು ರಚಿಸಿ ವಿವಾದಿತ ಜಾಗವನ್ನು ಮರು ಸರ್ವೆ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಆದೇಶದಂತೆ ಇದೀಗ ಸರ್ವೆ ಮಾಡಿಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.