Marriage : 21 ವಯಸ್ಸಿಗೆ 12 ಮಂದಿಯೊಂದಿಗೆ ಮದುವೆ, ಮದುವೆ ಹೆಸರಲ್ಲಿ 12 ಮಂದಿ ಮಕ್ಮಲ್ ಟೋಪಿ ಹಾಕಿದ ಖತರ್ನಾಕ್ ಲೇಡಿ…!

Marriage – ಒಂದಲ್ಲ, ಎರಡಲ್ಲ! ಕೇವಲ 21 ವರ್ಷದ ಯುವತಿ ಬರೋಬ್ಬರಿ 12 ಮಂದಿಯನ್ನು ಮದುವೆಯಾಗಿದ್ದಾಳೆ! ಈ ಆಘಾತಕಾರಿ ಸುದ್ದಿ ಕೇಳಿ ನೀವು ಬೆಚ್ಚಿಬೀಳಬಹುದು. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡು ಈ ಖತರ್ನಾಕ್ ಲೇಡಿ ಒಂದು ಡಜನ್ ಪುರುಷರನ್ನು ವಂಚಿಸಿದ್ದಾಳೆ. ಆಕೆಯನ್ನು ಈಗ “ಡಾಕು ದುಲ್ಹನ್” (ಡಕಾಯಿತಿಯ ಮದುಮಗಳು) ಎಂದೇ ಕರೆಯಲಾಗುತ್ತಿದೆ.

Marriage – ಬೇರೆ ಬೇರೆ ಹೆಸರು, ಒಂದೇ ಕೃತ್ಯ

ಗುಜರಾತ್‌ನಲ್ಲಿ ಕಾಜಲ್ ಆಗಿದ್ದ ಈಕೆ, ಹರಿಯಾಣದಲ್ಲಿ ಸೀಮಾ, ಬಿಹಾರದಲ್ಲಿ ನೇಹಾ ಹಾಗೂ ಉತ್ತರ ಪ್ರದೇಶದಲ್ಲಿ ಸ್ವೀಟಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಳು. ಈ ಮೂಲಕ 12 ಮಂದಿ ಪುರುಷರನ್ನು ತನ್ನ ಮೋಸದ ಬಲೆಗೆ ಕೆಡವಿದ್ದಳು. ಅಚ್ಚರಿಯ ವಿಷಯವೆಂದರೆ ಇಷ್ಟೊಂದು ಜನರನ್ನು ಈಕೆ ಹೇಗೆ ನಿಭಾಯಿಸುತ್ತಿದ್ದಳು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

Dacoit bride arrested for marrying 12 men and looting gold and cash – marriage scam exposed

Marriage – ಹಿಂದೂ ಹೆಸರಿನ ಹಿಂದೆ ಮುಸ್ಲಿಂ ಮಹಿಳೆ!

ಇಷ್ಟೆಲ್ಲಾ ಹಿಂದೂ ಹೆಸರುಗಳನ್ನು ಇಟ್ಟುಕೊಂಡಿದ್ದ ಈಕೆಯ ನಿಜವಾದ ಹೆಸರು ಗುಲ್ಮಾನ ರಿಯಾಜ್ ಖಾನ್! 12 ಮಂದಿಯನ್ನು ಮದುವೆಯಾಗಿ ಅವರೆಲ್ಲರನ್ನೂ ಮೋಸದ ಜಾಲಕ್ಕೆ ಸಿಲುಕಿಸಿದ್ದ ಈಕೆಯನ್ನು ಅಂತಿಮವಾಗಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆಕೆ ಪೊಲೀಸ್ ಅತಿಥಿಯಾಗಿದ್ದಾಳೆ. ಈಕೆಯ ಕೃತ್ಯಕ್ಕೆ ಆಕೆಯ ಅಸಲಿ ಗಂಡ ಚೌನ್‌ಪುರದ ದರ್ಜಿ ರಿಯಾಜ್ ಖಾನ್ ಹಾಗೂ ಆತನ ಗ್ಯಾಂಗ್ ಕೂಡಾ ಸಾಥ್ ನೀಡುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

Marriage – ಶ್ರೀಮಂತರೇ ಟಾರ್ಗೆಟ್, ಹಣ ಮತ್ತು ಆಭರಣ ಲೂಟಿ

ಈ ವಂಚಕ ಗ್ಯಾಂಗ್ ಶ್ರೀಮಂತ ಪುರುಷರನ್ನೇ ಗುರಿಯಾಗಿಸಿಕೊಂಡು ಮದುವೆಯಾಗುವುದಾಗಿ ನಂಬಿಸುತ್ತಿದ್ದರು. ಮದುವೆಯ ಸಂದರ್ಭದಲ್ಲಿ ಹಣದ ಬೇಡಿಕೆಯಿಡುತ್ತಿದ್ದರು. ಮದುವೆಯಾದರೆ ಸಾಕು ಎಂದುಕೊಂಡಿದ್ದ ಪುರುಷರು ಅವರು ಕೇಳಿದಷ್ಟು ಹಣವನ್ನು ನೀಡುತ್ತಿದ್ದರು. ಮದುವೆಗೆ ಸ್ಥಳವನ್ನು ನಿಗದಿಪಡಿಸಲಾಗುತ್ತಿತ್ತು. ಮದುವೆಯ ದಿನ ಸಹಜವಾಗಿ ವರ ಚಿನ್ನಾಭರಣ ಮತ್ತು ಹಣವನ್ನು ತರುತ್ತಿದ್ದ. ಆದರೆ ಮದುವೆ ಮನೆಯಲ್ಲಿ ಮದುಮಗಳು ದಿಢೀರ್ ಎಂದು ನಾಪತ್ತೆಯಾಗುತ್ತಿದ್ದಳು! ಆ ಸಮಯದಲ್ಲಿ ಗ್ಯಾಂಗ್ ಇದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಪರಾರಿಯಾಗುತ್ತಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಈ ನಾಟಕವಾಡುತ್ತಿದ್ದರಿಂದ ಪೊಲೀಸರಿಗೂ ಅವರನ್ನು ಪತ್ತೆಹಚ್ಚುವುದು ಕಷ್ಟವಾಗಿತ್ತು.

Marriage –  ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಗ್ಯಾಂಗ್

ಎಷ್ಟೇ ನಾಟಕವಾಡಿದರೂ ಕಳ್ಳರು ಒಂದು ದಿನ ಸಿಕ್ಕಿಬೀಳಲೇಬೇಕಲ್ಲವೇ? ಅದೇ ರೀತಿ ಹರಿಯಾಣದ ರೋಕ್ಟಕ್ ನಿವಾಸಿ ಸೋನು ಎಂಬುವರನ್ನು ವಂಚಿಸಿದಾಗ ಈ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಮದುವೆಗೆ 80 ಸಾವಿರ ರೂಪಾಯಿ ವಸೂಲಿ ಮಾಡಿದ್ದ ಈ ಗ್ಯಾಂಗ್, ಮದುವೆಯ ದಿನ ಎಂದಿನಂತೆ ಮದುಮಗಳನ್ನು ಅಪಹರಿಸಿತ್ತು. ತಕ್ಷಣವೇ ಮದುಮಗ ಸೋನು ಪೊಲೀಸರಿಗೆ ದೂರು ನೀಡಿದರು. ತಮ್ಮ ಭಾವಿ ಪತ್ನಿ ಅಪಹರಣವಾಗಿದ್ದು, ಹಣ ಮತ್ತು ಆಭರಣ ಕಳುವಾಗಿದೆ ಎಂದು ದೂರು ದಾಖಲಿಸಿದ ತಕ್ಷಣ ಉತ್ತರ ಪ್ರದೇಶ ಪೊಲೀಸರು ಕಾರ್ಯಪ್ರವೃತ್ತರಾಗಿ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಎಚ್ಚರಿಕೆ ನೀಡಿದರು. ಅನುಮಾನದ ಮೇಲೆ ಒಬ್ಬನನ್ನು ಬಂಧಿಸಿದಾಗ ಆತ ನಿಜಾಂಶವನ್ನು ಬಾಯಿಬಿಟ್ಟ. ನಂತರ ಲೇಡಿ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಲಾಯಿತು. ಬಂಧಿತ ಮಹಿಳೆ ನಕಲಿ ಗುರುತಿನ ದಾಖಲೆಗಳನ್ನು ನೀಡಿ ಬೇರೆ ಬೇರೆ ಹಿಂದೂ ಹೆಸರುಗಳಲ್ಲಿ ವಂಚನೆ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. Read this also : ವಧು ದಕ್ಷಿಣೆ ಕೊಟ್ಟು ಮದುವೆಯಾದ ರೈತ, ಮದುವೆಯಾದ ವಾರದಲ್ಲೇ ಬ್ರೋಕರ್ ಜೊತೆಗೆ ಪರಾರಿಯಾದ ಮದುಮಗಳು….!

Dacoit bride arrested for marrying 12 men and looting gold and cash – marriage scam exposed

Marriage –  ವಶಪಡಿಸಿಕೊಳ್ಳಲಾದ ವಸ್ತುಗಳು

ಸದ್ಯ ಬಂಧಿತ ಆರೋಪಿಗಳಿಂದ ನಗದು, ಮೋಟಾರ್ ಸೈಕಲ್, ಚಿನ್ನಾಭರಣ, 11 ಮೊಬೈಲ್ ಫೋನ್‌ಗಳು ಮತ್ತು ಮೂರು ನಕಲಿ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಎಂಟು ಜನರ ಗ್ಯಾಂಗ್ ಎಂದು ತಿಳಿದುಬಂದಿದೆ. ಬಂಧಿತರಲ್ಲಿ ಹರಿಯಾಣದ ಜಿಂದ್‌ನ ಮೋಹನ್‌ಲಾಲ್ (34), ಚೌನ್‌ಪುರದ ರತನ್ ಕುಮಾರ್ ಸರೋಜ್ (32), ಚೌನ್‌ಪುರದ ರಂಜನ್ ಅಲಿಯಾಸ್ ಆಶು ಗೌತಮ್ (22), ಅಂಬೇಡ್ಕರ್ ನಗರದ ರಾಹುಲ್ ರಾಜ್ (30), ಅಂಬೇಡ್ಕರ್ ನಗರದ ಸನ್ನೋ ಅಲಿಯಾಸ್ ಸುನೀತಾ (36), ಅಂಬೇಡ್ಕರ್ ನಗರದ ಪೂನಮ್ (33), ಚೌನ್‌ಪುರದ ಮಂಜು ಮಾಲಿ (29) ಮತ್ತು ಚೌನ್‌ಪುರದ ರುಖ್ಯರ್ (21) ಸೇರಿದ್ದಾರೆ. ಈ ಘಟನೆ ಮದುವೆಯ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Booking365 – Responsive WordPress Appointment Plugin Portfolio and Gallery Grid Layout with Carousel for WordPress WooCommerce Create A Drawer – Composite Product Builder Plugin Spider Spin2Win WooCommerce Coupon Code Read Aloud Plugin Real-Time Text-to-Speech for WordPress BWL Poll Manager Personalization for WPBakery Page Builder Virtual Tour Creator for WordPress Showcase Addon jQuery TimelineXML Smooth Zoom Pan – jQuery Image Viewer