HomeStateLocal News - ಗುಡಿಬಂಡೆ - ರಸ್ತೆ ಒತ್ತುವರಿ ತೆರುವುಗೊಳಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು...!

Local News – ಗುಡಿಬಂಡೆ – ರಸ್ತೆ ಒತ್ತುವರಿ ತೆರುವುಗೊಳಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು…!

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ವ್ಯಾಪ್ತಿಯ ಹಲವು ರೈತರ ಸಮಸ್ಯೆಯಾಗಿದ್ದ ಸೋಮೇನಹಳ್ಳಿ ಗ್ರಾಮದಿಂದ ಜಂಟಿಬೋಯನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಒತ್ತುವರಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.

Local News - Revenue officials clear encroachment on rural pathway in Gudibande Taluk, helping farmers regain access between Somenahalli and Jantiboyanahalli villages.

Local News – ರೈತರಿಗೆ ರಸ್ತೆಯ ಸಮಸ್ಯೆ

ಈ ವೇಳೆ ಮಾತನಾಡಿದ ಸ್ಥಳೀಯ ರೈತ ಹಾಗೂ ಬೋವಿ ಸಂಘದ ತಾಲೂಕು ಅಧ್ಯಕ್ಷ ಆನಂದ್, ಸೋಮೇನಹಳ್ಳಿ ಗ್ರಾಮದಿಂದ ಜಂಟಿಬೋಯನಹಳ್ಳಿ ಗ್ರಾಮಕ್ಕೆ ಹೋಗುವ ಕಾಲುದಾರಿ ಒತ್ತುವರಿಯಾಗಿತ್ತು. ಇದರಿಂದಾಗಿ ಈ ಭಾಗದ ರೈತರಿಗೆ ತುಂಬಾನೆ ಸಮಸ್ಯೆಯಾಗಿತ್ತು. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ತೊಂದರೆಯಾಗುತ್ತಿತ್ತು. ಆದ್ದರಿಂದ ನಾವು ಸುಮಾರು ತಿಂಗಳುಗಳಿಂದ ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡು ಬರುತ್ತಿದ್ದೆವು. ರಸ್ತೆ ಒತ್ತುವರಿ ತೆರವಿಗೆ ಈಗಾಗಲೇ ಐದು ಬಾರಿ ನೊಟೀಸ್ ಸಹ ನೀಡಲಾಗಿತ್ತು. ಆದರೂ ಒತ್ತುವರಿ ತೆರವು ನಡೆದಿರಲಿಲ್ಲ. ಇದೀಗ ತಹಸೀಲ್ದಾರರ ನೇತೃತ್ವದಲ್ಲಿ ಒತ್ತುವರಿಯಾದ ಕಾಲು ದಾರಿಯನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ರೈತರಿಗೆ ಸಾಕಷ್ಟು ಅನುಕೂಲಕರವಾಗಲಿದೆ ಎಂದರು. Read this also : ಚರಂಡಿ, ರಸ್ತೆ, ಮೂಲಭೂತ ಸೌಕರ್ಯಕ್ಕಾಗಿ ಶಾಸಕರಿಗೆ ಸ್ಥಳೀಯರ ಮನವಿ…!

Local News – ಅಧಿಕಾರಿಗಳಿಗೆ ಧನ್ಯವಾದ

ಇದೇ ಸಮಯದಲ್ಲಿ ಸ್ಥಳೀಯರು ಸುಮಾರು ವರ್ಷಗಳಿಂದ ಈ ಭಾಗದಲ್ಲಿ ಕಾಲುದಾರಿ ಒತ್ತುವರಿಯಾದ ಕಾರಣದಿಂದ ನಮಗೆ ತುಂಬಾನೆ ಸಮಸ್ಯೆಯಾಗಿತ್ತು. ಇದೀಗ ಈ ಕಾಲು ದಾರಿ ಒತ್ತುವರಿ ತೆರವುಗೊಂಡಿದ್ದರಿಂದ ನಮಗೆ ತುಂಬಾ ಅನುಕೂಲವಾಗಿದೆ. ಜಂಟಿಬೋಯನಹಳ್ಳಿ ಗ್ರಾಮದಿಂದ ಬೇಗ ಸೋಮೇನಹಳ್ಳಿಗೆ ತೆರಳಬಹುದಾಗಿದೆ. ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.

Local News - Revenue officials clear encroachment on rural pathway in Gudibande Taluk, helping farmers regain access between Somenahalli and Jantiboyanahalli villages.

ಈ ಸಂಬಂಧ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ಪ್ರತಿಕ್ರಿಯೆ ನೀಡಿದ್ದು, ಸೋಮೇನಹಳ್ಳಿ ಗ್ರಾಮದಿಂದ ಜಂಟಿಬೋಯನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಒತ್ತುವರಿಯಾಗಿದ್ದು, ಈ ಸಂಬಂಧ ಒತ್ತುವರಿಯ ಕುರಿತು ನೊಟೀಸ್ ನೀಡಲಾಗಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದರು. ಈ ವೇಳೆ ಕಂದಾಯ ಇಲಾಖೆಯ ಸುರೇಶ್ ನಾಯಕ್, ಮಹೇಶ್, ಸ್ಥಳೀಯರಾದ ಆದಿನಾರಾಯಣರೆಡ್ಡಿ ಸೇರಿದಂತೆ ಹಲವು ರೈತರು ಹಾಜರಿದ್ದರು.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt