ಪುಕ್ಕಟೆಯಾಗಿ ಸಿಗುವ ಮಾವಿನ ಹಣ್ಣಿಗೆ ಆಸೆಪಟ್ಟು ವ್ಯಕ್ತಿಯೊಬ್ಬ ತಿಂದಿರುವ ಪೆಟ್ಟುಗಳನ್ನು ನೋಡಿದರೆ, ನೀವು ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರಂಟಿ! “ದುರಾಸೆ ದುಃಖಕ್ಕೆ ಮೂಲ” ಎನ್ನುವ ಮಾತಿಗೆ ಅಕ್ಷರಶಃ ಕನ್ನಡಿ ಹಿಡಿದಂತಿರುವ ಈ ಫನ್ನಿ ಘಟನೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ (Train Passenger Mango Video) ಭಾರಿ ಸದ್ದು ಮಾಡುತ್ತಿದೆ. ಒಂದು ಕ್ಷಣದ ಆಸೆ ಎಂತಹ ಮುಜುಗರಕ್ಕೆ ಹಾಗೂ ಸಂಕಷ್ಟಕ್ಕೆ ತಳ್ಳುತ್ತದೆ ಎಂಬುದನ್ನು ತೋರಿಸುವ ಈ ವೈರಲ್ ವಿಡಿಯೋದ (Viral Video) ಹಿಂದಿನ ಅಸಲಿ ಕಥೆ ಏನು ಅಂತೀರಾ? ಮುಂದೆ ಓದಿ.

Train Passenger Mango Video – ರೈಲು ನಿಂತಿದ್ದೇ ತಡ, ಮಾವಿನ ತೋಟಕ್ಕೆ ಎಂಟ್ರಿ!
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ (Viral Video Here) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮಾವಿನ ತೋಟದ ಪಕ್ಕದಲ್ಲಿ ರೈಲೊಂದು ನಿಂತಿರುವುದನ್ನು ಕಾಣಬಹುದು. ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಕಿಟಕಿಯಿಂದ ಪಕ್ಕದ ತೋಟದಲ್ಲಿ ಜೋತಾಡುತ್ತಿದ್ದ ಮಾವಿನ ಹಣ್ಣುಗಳನ್ನು ನೋಡಿದ್ದಾನೆ. ಅಷ್ಟೇ, ಅವನ ಬಾಯಲ್ಲಿ ನೀರೂರಿದೆ. ‘ರೈಲು ಹೇಗೂ ನಿಂತಿದೆ, ಬೇಗ ಹೋಗಿ ಒಂದೆರಡು ಹಣ್ಣು ಕಿತ್ತುಕೊಂಡು ಬರೋಣ’ ಅಂತ ಪ್ಲಾನ್ ಮಾಡಿ, ಚಕ್ಕನೆ ರೈಲಿನಿಂದ ಇಳಿದು ತೋಟದೊಳಗೆ ನುಗ್ಗಿದ್ದಾನೆ. ಅಂದುಕೊಂಡಂತೆಯೇ ಎರಡು ಹಣ್ಣುಗಳನ್ನು ಕಿತ್ತಿದ್ದಾನೆ, ಆದರೆ ಅಸಲಿ ಟ್ವಿಸ್ಟ್ ಶುರುವಾಗಿದ್ದೇ ಅಲ್ಲಿ. Read this also : ಛತ್ತರ್‌ಪುರದಲ್ಲಿ ಹೈವೋಲ್ಟೇಜ್ ಡ್ರಾಮಾ: ನಡುರಸ್ತೆಯಲ್ಲೇ ಗಂಡನಿಗೆ ಕಪಾಳಮೋಕ್ಷ ಮಾಡಿದ ಪತ್ನಿ, ವಿಡಿಯೋ ವೈರಲ್!
ಶುರುವಾಯ್ತು ಅಸಲಿ ಆಟ.. ಬೆನ್ನತ್ತಿದ ಗಾರ್ಡ್!
ಅವನು ಹಣ್ಣು ಕೀಳುತ್ತಿದ್ದಂತೆಯೇ, ಆ ನಿಂತಿದ್ದ ರೈಲು ನಿಧಾನವಾಗಿ ಚಲಿಸಲು ಶುರುವಾಗಿದೆ. ಇದರಿಂದ ಆ ಪ್ರಯಾಣಿಕನ ಗುಂಡಿಗೆ ಝಲ್ ಎಂದಿದೆ. ಕೈಯಲ್ಲಿ ಮಾವಿನ ಹಣ್ಣುಗಳನ್ನು ಹಿಡಿದುಕೊಂಡು (Train Passenger Mango Video) ರೈಲಿನತ್ತ ಓಡಲು ಆರಂಭಿಸಿದ್ದಾನೆ. ಆದರೆ ಅವನ ಕಷ್ಟ ಅಲ್ಲಿಗೇ ಮುಗಿಯಲಿಲ್ಲ. ಆ ತೋಟವನ್ನು ಕಾಯುತ್ತಿದ್ದ ಗಾರ್ಡ್ ಈ ‘ಮಾವಿನ ಹಣ್ಣಿನ ಕಳ್ಳತನ’ವನ್ನು ಗಮನಿಸಿದ್ದಾನೆ. ಅಷ್ಟೇ.. ಕೋಪದಿಂದ ಕೈಯಲ್ಲಿ ದಪ್ಪನೆಯ ದೊಣ್ಣೆ ಹಿಡಿದುಕೊಂಡು ಆ ಪ್ರಯಾಣಿಕನ ಬೆನ್ನತ್ತಿದ್ದಾನೆ.
ಪೆಟ್ಟು ತಿಂದ್ಮೇಲೆ ಕೈಜಾರಿದ ಮಾವಿನ ಹಣ್ಣು!
ಆ ವ್ಯಕ್ತಿಯ ಪರಿಸ್ಥಿತಿ ಆಗ ‘ಮುಂದೆ ಹೋದರೆ ಕಚ್ಚುವ ನಾಯಿ, ಹಿಂದೆ ಬಂದರೆ ಒದೆಯುವ ಕುದುರೆ’ ಎಂಬಂತಾಗಿತ್ತು. ಒಂದೆಡೆ ವೇಗ ಪಡೆದುಕೊಳ್ಳುತ್ತಿರುವ ರೈಲು, ಮತ್ತೊಂದೆಡೆ ಯಮನಂತೆ ಹಿಂದಿನಿಂದ ಬರುತ್ತಿರುವ ಗಾರ್ಡ್! ಹೇಗೋ ಪ್ರಾಣ ಉಳಿಸಿಕೊಂಡರೆ ಸಾಕು ಅಂತ ರೈಲಿನ ಬಾಗಿಲು ಹಿಡಿಯಲು ಮುಂದಾಗಿದ್ದಾನೆ. ಆದರೆ (Train Passenger Mango Video) ಅಷ್ಟರಲ್ಲೇ ಹಿಂದಿನಿಂದ ಬಂದ ಗಾರ್ಡ್, ಯಾವುದೇ ಕನಿಕರ ತೋರದೆ ಆತನ ಹಿಂಭಾಗಕ್ಕೆ ದೊಣ್ಣೆಯಿಂದ ಚೆನ್ನಾಗಿ ಬಾರಿಸಿದ್ದಾನೆ.

ಆ ಪೆಟ್ಟಿನೇಟಿಗೆ ಪ್ರಯಾಣಿಕನ ಕೈಯಲ್ಲಿದ್ದ ಮಾವಿನ ಹಣ್ಣುಗಳು ಕೆಳಗೆ ಬಿದ್ದಿವೆ. ಹೇಗೋ ಕಷ್ಟಪಟ್ಟು ಪೆಟ್ಟು ತಿನ್ನುತ್ತಲೇ ರೈಲಿನ ಬೋಗಿಯೊಳಗೆ ಹತ್ತಿಕೊಂಡಿದ್ದಾನೆ. ಕೊನೆಗೆ ಕೈಗೆ ಮಾವಿನ ಹಣ್ಣೂ ಸಿಗಲಿಲ್ಲ, ಜೊತೆಗೆ ಮೈತುಂಬಾ ಏಟು, ಎಲ್ಲರ ಮುಂದೆ ಭಾರಿ ಅವಮಾನವಷ್ಟೇ ಮಿಕ್ಕಿದ್ದು.
20 ರೂ. ಮಾವಿನ ಹಣ್ಣಿಗೆ 50 ರೂ. ಅಯೋಡೆಕ್ಸ್!
ಜೂನ್ 2ರಂದು ರಿತೇಶ್ ಕುಶ್ವಾಹ ಎಂಬುವವರು ಈ ಫನ್ನಿ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಲಕ್ಷಾಂತರ ವೀಕ್ಷಣೆಗಳನ್ನು (Train Passenger Mango Video) ಪಡೆದುಕೊಂಡಿದೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ, “20 ರೂಪಾಯಿ ಮಾವಿನ ಹಣ್ಣಿನ ಆಸೆಗೆ, 50 ರೂಪಾಯಿ ಅಯೋಡೆಕ್ಸ್ ಖರ್ಚಾಯ್ತು!” ಎಂದು ಕಾಲೆಳೆಯುತ್ತಾ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
