HomeInternationalKing Cobra in Toilet : ಫಿಲಿಪೈನ್ಸ್ ರೆಸಾರ್ಟ್ ಶೌಚಾಲಯದಲ್ಲಿ ಪ್ರತ್ಯಕ್ಷವಾಯ್ತು ಕಿಂಗ್ ಕೋಬ್ರಾ! ಪ್ರವಾಸಿಗರ...

King Cobra in Toilet : ಫಿಲಿಪೈನ್ಸ್ ರೆಸಾರ್ಟ್ ಶೌಚಾಲಯದಲ್ಲಿ ಪ್ರತ್ಯಕ್ಷವಾಯ್ತು ಕಿಂಗ್ ಕೋಬ್ರಾ! ಪ್ರವಾಸಿಗರ ರಿಯಾಕ್ಷನ್ ನೋಡಿದ್ರೆ ನಗಬೇಕೋ ಅಳಬೇಕೋ ತಿಳಿಯಲ್ಲ!

ಒಂದೊಳ್ಳೆ ಸುಂದರವಾದ ಜಾಗಕ್ಕೆ ವೆಕೇಶನ್ ಎಂಜಾಯ್ ಮಾಡಲು ಹೋಗಿರುತ್ತೀರಿ. ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾ, ಹಾಯಾಗಿ ರೆಸಾರ್ಟ್ ರೂಂನಲ್ಲಿ ರಿಲ್ಯಾಕ್ಸ್ ಆಗುತ್ತಿರುವಾಗ… ಹಠಾತ್ ಆಗಿ ನಿಮ್ಮೆದುರು ಯಮಸ್ವರೂಪಿಯಾದ ವಿಷಸರ್ಪ ಪ್ರತ್ಯಕ್ಷವಾದರೆ ಹೇಗಿರುತ್ತೆ ಯೋಚಿಸಿ? ಹೌದು, ಫಿಲಿಪೈನ್ಸ್‌ಗೆ ಹೋದ ಪ್ರವಾಸಿಗರ ಗುಂಪೊಂದಕ್ಕೆ ಇಂತದ್ದೇ ಒಂದು ಆಘಾತಕಾರಿ, ಜೀವವೇ ಬಾಯಿಗೆ ಬರುವಂತಹ ಅನುಭವವಾಗಿದೆ. ರೆಸಾರ್ಟ್‌ನ ಕಮೋಡ್ ಒಳಗಿಂದ ಬರೋಬ್ಬರಿ ಕಾಳಿಂಗ ಸರ್ಪ (King Cobra in toilet) ತಲೆ ಎತ್ತಿ ನಿಂತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

King Cobra in Toilet Shocks Tourists at Philippines Resort

King Cobra in toilet – ನೆಮ್ಮದಿಯ ಪ್ರವಾಸದಲ್ಲಿ ಘೋರ ಆಶ್ಚರ್ಯ!

ಈ ಇಂಟರೆಸ್ಟಿಂಗ್ ಘಟನೆ ನಡೆದಿರುವುದು ಫಿಲಿಪೈನ್ಸ್‌ನ ‘ಸಲ್ವಡಾರ್ ಬೆನೆಡಿಕ್ಟೋ’ ಎಂಬಲ್ಲಿರುವ ಪ್ರಸಿದ್ಧ ರೆಸಾರ್ಟ್ ಒಂದರಲ್ಲಿ. ಐದು ಜನ ಸ್ನೇಹಿತರ ಗುಂಪೊಂದು ಉತ್ತರ ನೆಗ್ರೋಸ್ ನ್ಯಾಚುರಲ್ ಪಾರ್ಕ್ ಹತ್ತಿರವಿರುವ ಸುಂದರ ರೆಸಾರ್ಟ್‌ಗೆ ರಜಾದಿನಗಳನ್ನು ಕಳೆಯಲು ಬಂದಿದ್ದರು. ಸುತ್ತಲೂ ದಟ್ಟವಾದ ಕಾಡು, ಜಲಪಾತಗಳಿರುವ ಈ ಜಾಗ ಪರಿಸರ ಪ್ರೇಮಿಗಳ ನೆಚ್ಚಿನ ತಾಣ.

ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ, ಪ್ರವಾಸಿಗರೊಬ್ಬರು ವಾಶ್‌ರೂಂಗೆ ಹೋದಾಗ ಅಲ್ಲಿನ ಕಮೋಡ್ (Toilet Bowl) ಒಳಗೆ ಏನೋ ವಿಚಿತ್ರವಾಗಿರುವುದು ಕಣ್ಣಿಗೆ ಬಿದ್ದಿದೆ. ಯಾರೋ ಸರಿಯಾಗಿ ಫ್ಲಶ್ ಮಾಡಿಲ್ಲ ಅಂದುಕೊಂಡು ಅವರು ಮತ್ತೊಮ್ಮೆ ಫ್ಲಶ್ ಪ್ರೆಸ್ ಮಾಡಿದ್ದಾರೆ. ಆದರೆ ಮುಂದಿನ ಕ್ಷಣವೇ ಅಲ್ಲಿ ನಡೆದಿದ್ದು ಮಾತ್ರ ಅವರ ರಕ್ತ ಹೆಪ್ಪುಗಟ್ಟುವಂತೆ ಮಾಡಿತ್ತು!

ಕಮೋಡ್‌ನಿಂದ ಬಂದಿತು ಕಾಳಿಂಗ!

ಫ್ಲಶ್ ಮಾಡುತ್ತಿದ್ದಂತೆ ಪೈಪ್‌ಲೈನ್ ಒಳಗಿಂದ ಬೃಹತ್ ಹಾವೊಂದು ಮೆಲ್ಲನೆ ಮೇಲೆ ಬಂದಿದೆ. ಇದನ್ನು ನೋಡಿ ಗಾಬರಿಯಾದ ಪ್ರವಾಸಿಗ ತಕ್ಷಣವೇ ಓಡಿ ಬಂದು ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾನೆ. ಮೊದಲಿಗೆ ಸ್ನೇಹಿತರೆಲ್ಲಾ ಇದು ಕೇವಲ ಜೋಕ್ ಇರಬಹುದು ಎಂದು ತಳ್ಳಿಹಾಕಿದ್ದಾರೆ. ಆದರೆ ಸ್ವತಃ ತಾವೇ ಹೋಗಿ ವಾಶ್‌ರೂಂ (King Cobra in toilet)  ನೋಡಿದಾಗ ಅವರ ಕಣ್ಣುಗಳು ತಲೆಯಟ್ಟಕ್ಕೇರಿವೆ! ಅಲ್ಲಿ ಸಾಕ್ಷಾತ್ ನಾಗರಹಾವಿನಂತಹ ದೃಶ್ಯ ಕಣ್ಣೆದುರಿಗಿತ್ತು. Read this also : ಹಾವಿನ ಜೊತೆ ಸರಸ, ಯಮನ ಪಾದ ಸೇರಿದ ಉರಗ ತಜ್ಞ! ಎದೆಯ ನಡುಕ ಹುಟ್ಟಿಸುವ ನೋಡಿ..!

ತಕ್ಷಣವೇ ರೆಸಾರ್ಟ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದು ಹಾವನ್ನು ಸುರಕ್ಷಿತವಾಗಿ ಅಲ್ಲಿಂದ ಹಿಡಿದು ಸಾಗಿಸಿದ್ದಾರೆ. ಈ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕಾಡಿನ ಮಧ್ಯದ ರೆಸಾರ್ಟ್: ತಜ್ಞರು ಹೇಳುವುದೇನು?

ಮೊದಲಿಗೆ ಅದು ಕೇವಲ ನೀರಿನಲ್ಲಿರುವ ವಿಷವಿಲ್ಲದ ಹಾವು ಇರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ವಿಡಿಯೋ ನೋಡಿದ ನೆಟ್ಟಿಗರು ಮತ್ತು ಸ್ಥಳೀಯರು, ಅದು ವಿಶ್ವದ ಅತ್ಯಂತ ವಿಷಕಾರಿ (King Cobra in toilet)  ಹಾವುಗಳಲ್ಲಿ ಒಂದಾದ ಕಿಂಗ್ ಕೋಬ್ರಾ (ಕಾಳಿಂಗ ಸರ್ಪ) ಎಂದು ಗುರುತಿಸಿದ್ದಾರೆ.

King Cobra in Toilet Shocks Tourists at Philippines Resort

ಸ್ಥಳೀಯ ಅಧಿಕಾರಿಗಳ ಪ್ರಕಾರ, ಈ ಬೆಟ್ಟದ ಪ್ರದೇಶವು ದಟ್ಟವಾದ ಕಾಡಿಗೆ ಹತ್ತಿರ ಇರುವುದರಿಂದ ಇಂತಹ ಘಟನೆಗಳು ಹೊಸದೇನಲ್ಲ. ಮಳೆಗಾಲದಲ್ಲಿ ಅಥವಾ ತಂಪಾದ ವಾತಾವರಣ ಹುಡುಕುತ್ತಾ ಹಾವುಗಳು ಡ್ರೈನೇಜ್ ಪೈಪ್‌ಗಳ ಮೂಲಕ ಶೌಚಾಲಯದ ಕಮೋಡ್‌ಗಳನ್ನು ಪ್ರವೇಶಿಸುತ್ತವೆ. ಈ ಬಗ್ಗೆ ತನಿಖೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ರೆಸಾರ್ಟ್‌ಗೆ ಸೂಚಿಸಲಾಗಿದೆ.

ಇಂಟರ್ನೆಟ್‌ನಲ್ಲಿ ಕಾಮೆಂಟ್‌ಗಳ ಮಹಾಪೂರ

ಈ ವಿಡಿಯೋ ವೈರಲ್ (Viral Video Here) ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಭಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾಲೆಳೆದಿದ್ದಾರೆ.

  • ಒಬ್ಬ ಯೂಸರ್ ಕಾಮೆಂಟ್ ಮಾಡಿ, ನಾನಂತೂ ಇನ್ಮುಂದೆ ವೆಕೇಶನ್‌ಗೆ ಹೋದ್ರೆ ಟಾಯ್ಲೆಟ್ ಬಳಸೋದನ್ನೇ ಬಿಟ್ಟುಬಿಡ್ತೀನಿ ಅನ್ಸುತ್ತೆ!” ಎಂದಿದ್ದಾರೆ.
  • ಇನ್ನೊಬ್ಬರು, ನನ್ನ ಟ್ರಾವೆಲ್ ಬಕೆಟ್ ಲಿಸ್ಟ್‌ನಿಂದ (King Cobra in toilet) ಜಾಗವನ್ನು ಈಗಲೇ ಡಿಲೀಟ್ ಮಾಡ್ತಿದ್ದೀನಿ” ಎಂದು ಬರೆದುಕೊಂಡಿದ್ದಾರೆ.
  • ಇನ್ನು ಕೆಲವು ತಮಾಷೆಯ ಕಾಮೆಂಟ್‌ಗಳೂ ಬಂದಿದ್ದು, ಇದರರ್ಥ ರೆಸಾರ್ಟ್‌ಟಾಯ್ಲೆಟ್‌ಗಳು ತುಂಬಾ ಕ್ಲೀನ್ ಆಗಿವೆ ಅಂತ. ಗಲೀಜು ಡ್ರೈನೇಜ್‌ನಲ್ಲಂತೂ ಹಾವು ಖಂಡಿತ ಇರಲ್ಲ!” ಎಂದು ಕಾಲೆಳೆದಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular