ಪತ್ನಿ ಜೊತೆಗೆ ಓಡಿ ಹೋಗಿದ್ದ ಯುವಕನನ್ನು ಹಿಡಿದ ಪತಿ ಮಾಡಿದ್ದಾದರೂ ಏನು ಗೊತ್ತಾ?

ಇತ್ತೀಚಿಗೆ ಹೆಚ್ಚಾಗಿ ವಿವಾಹೇತರ ಸಂಬಂಧಗಳ ಕಾರಣದಿಂದ ಹಲವು ರೀತಿಯ ಅವಾಂತರಗಳು ನಡೆದಿರುವ ಬಗ್ಗೆ ಕೇಳಿದ್ದೇವೆ. ಅಕ್ರಮ ಸಂಬಂಧಗಳ ಕಾರಣದಿಂದ ಕೆಲವೊಂದು ಕಡೆ ಹಲ್ಲೆಗಳು, ಕೊಲೆಗಳೂ ಸಹ ನಡೆದಿದೆ. ಆದರೆ ಇಲ್ಲಿ ಬೇರೆಯದ್ದೆ ರೀತಿಯ ಘಟನೆ ನಡೆದಿದೆ. ತನ್ನ ಹೆಂಡತಿಯ ಜೋತೆ ಓಡಿ ಹೋದ ಯುವಕನನ್ನು ಹಿಡಿದ ಪತಿ ಮಾಡಿದ್ದಾದರೂ ಏನು ಎಂಬ ವಿಚಾರ ತಿಳಿಯಲು ಈ ಸುದ್ದಿ ಓದಿ….

inhuman treatment in uttarpradesh 1

ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಬದ್ನೌನ್ ಎಂಬಲ್ಲಿ ನಡೆದಿದೆ. ಓರ್ವ ವ್ಯಕ್ತಿಯ ಹೆಂಡತಿಯೊಂದಿಗೆ ಯುವಕನ ನೋರ್ವ ಓಡಿಹೋಗಿದ್ದಾನೆ. ಬದ್ನೌನ್ ನ ಫೈಜ್ ಗಂಜ್ ಬೆಹ್ತಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಕೆಲವರು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ಹೆಂಡತಿ ಜೊತೆ ಓಡಿಹೋದ ಯುವಕನ ಕುತ್ತಿಗೆಗೆ ಚಪ್ಪಲಿ ಹಾಗೂ ಶೂಗಳ ಹಾರ ಹಾಕಿ ಮೆರವಣಿಗೆಯನ್ನೂ ಮಾಡಲಾಗಿದೆ. ಆ ಯುವಕನಿಗೆ ಶಿಕ್ಷೆ ನೀಡುವ ಹೆಸರಿನಲ್ಲಿ ಮಾನವನ ಮೂತರ ಹಾಗೂ ಮಲವನ್ನು ತಿನ್ನುವಂತೆ ಒತ್ತಾಯ ಸಹ ಮಾಡಿದ್ದಾರೆ. ಇಲ್ಲೋಂದು ಆಘಾತಕಾರಿಯಾದ ವಿಚಾರವೆಂದರೇ ಎಲ್ಲದನ್ನೂ ವಿಡಿಯೋ ಮಾಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾರೂ ಸಹ ಆ ಯುವಕನ ಸಹಾಯಕ್ಕೆ ಬಂದಿಲ್ಲ. ಈ ವೇಳೆ ಸ್ಥಳಿಯ ಜನರು ಹಾಗೂ ಮಕ್ಕಳು ಸಹ ಸುತ್ತಲೂ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಇನ್ನೂ ಸ್ಥಳೀಯ ವರದಿಯಂತೆ, ಈ ವ್ಯಕ್ತಿ ಈಗಾಗಲೇ ಮದುವೆಯಾಗಿದ್ದ ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ. ಇಬ್ಬರೂ ಯಾರಿಗೂ ಸಿಗಬಾರದೆಂದು ಹಿಮಾಚಲ ಪ್ರದೇಶಕ್ಕೆ ಓಡಿ ಹೋಗಿದ್ದರಂತೆ. ಆದರೆ ಈ ವಿಚಾರವನ್ನು ತಿಳಿದ ಪತಿ ಹಿಮಾಚಲ ಪ್ರದೇಶದಲ್ಲಿರುವ ಇಬ್ಬರನ್ನು ತನ್ನೂರಿಗೆ ಕರೆದುಕೊಂಡು ಬಂದಿದ್ದಾನೆ. ಮಹಿಳೆಯನ್ನು ಕೂಡಿಹಾಕಿದ್ದಾರಂತೆ. ಆತನ ಪತ್ನಿಯೊಂದಿಗೆ ಓಡಿ ಹೋದಂತಹ ವ್ಯಕ್ತಿಯನ್ನು ಕ್ರೂರವಾಗಿ ಅವಮಾನಿಸಿದ್ದಾರೆ.  ಇನ್ನೂ ಈ ಘಟನೆಯ ಬಗ್ಗೆ ಆ ಯುವಕ ಪೊಲೀಸರಿಗೆ ದೂರು ನೀಡಿದ್ದಾನಂತೆ. ಆದರೆ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Scroll to Top