HomeStateನವಜಾತ ಶಿಶುವನ್ನು ಚರಂಡಿಗೆ ಎಸೆದು ಎಸ್ಕೇಪ್ ಆದ ಪಾಪಿ ತಾಯಿ…..!

ನವಜಾತ ಶಿಶುವನ್ನು ಚರಂಡಿಗೆ ಎಸೆದು ಎಸ್ಕೇಪ್ ಆದ ಪಾಪಿ ತಾಯಿ…..!

ಇಂದಿನ ಕಾಲದಲ್ಲಿ ಮಕ್ಕಳಿಲ್ಲವೆಂದು ಅನೇಕರು ಪರಿತಪಿಸುತ್ತಿರುತ್ತಾರೆ. ಅದರಲ್ಲಿ ಕೆಲವರು ಮಕ್ಕಳಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಸಹ ನಡೆದಿದೆ. ಆದರೆ ಇಲ್ಲೋಬ್ಬಳು ಪಾಪಿ ತಾಯಿ ಮೃತ ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾಳೆ. ಈ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಉ ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತಿಯೊಬ್ಬ ಮಹಿಳೆಗೂ ತಾಯಿಯಾಗುವುದು ಒಂದು ದೊಡ್ಡ ಅದೃಷ್ಟ ಹಾಗೂ ಸಾರ್ಥಕತೆ ಎಂದೇ ಕರೆಯಲಾಗುತ್ತದೆ. ಆದರೆ ಅನೇಕ ಮಹಿಳೆಯರು ವಿವಿಧ ಕಾರಣಗಳಿಂದ ಮಕ್ಕಳನ್ನು ಪಡೆಯಲು ವಂಚಿತರಾಗಿರುತ್ತಾರೆ. ಅದಕ್ಕಾಗಿ ಕೆಲವರು ಲಕ್ಷಾಂತರ ರೂಪಾಯಿಗಳನ್ನು ಸಹ ವ್ಯಯಿಸುತ್ತಾರೆ. ಕೆಲವರು ಪೂಜೆ, ಪುನಸ್ಕಾರಗಳೆಂದು ದೇವರ ಮೊರೆ ಸಹ ಹೋಗುತ್ತಾರೆ. ಆದರೂ ಸಹ ಕೆಲವರಿಗೆ ಮಕ್ಕಳಾಗುವುದಿಲ್ಲ. ಇದೀಗ ಪಾಪಿ ತಾಯಿಯೊಬ್ಬಳು ನವಜಾತ ಮೃತ ಗಂಡು ಮಗುವನ್ನು ಚರಂಡಿ ಎಸೆದ ಹೃದಯವಿದ್ರಾವಕ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇನ್ನೂ ಪಾಪಿ ತಾಯಿ ಮೃತಪಟ್ಟ ಗಂಡು ನವಜಾತ ಶಿಶುವನ್ನು ಪ್ಲಾಸ್ಟೀಕ್  ಪೇಪರ್‍ ನಲ್ಲಿ ಸುತ್ತಿ ಚರಂಡಿಗೆ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಈ ವೇಳೆ ಅಲ್ಲಿದ್ದ ಸ್ಥಳಿಯರು ಓಡಿ ಹೋಗಿ ಚರಂಡಿಯಿಂದ ಮಗುವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಾರಿಯಾದ ತಾಯಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt