ಸೊಳ್ಳೆ ಬ್ಯಾಟ್ ನಲ್ಲಿ ಮಹಿಳೆ ಮಾಡಿದ್ದಾದರೂ ಏನು ಗೊತ್ತಾ? ಸೊಳ್ಳೆ ಬ್ಯಾಟ್ ಹೀಗೂ ಯೂಸ್ ಮಾಡಬಹುದಾ?

ಸೋಷಿಯಲ್ ಮಿಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಫೇಮಸ್ ಆಗಲು ನಾನಾ ರೀತಿಯಲ್ಲಿ ಟ್ರೈ ಮಾಡುತ್ತಿರುತ್ತಾರೆ. ರಸ್ತೆಯಲ್ಲಿಯೇ ಕೆಲವರು ವಿಚಿತ್ರವಾದ ರೀಲ್ಸ್ ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ವಿಚಿತ್ರವಾದ ರೀಲ್ಸ್ ಮಾಡುತ್ತಿರುವ ವೈರಲ್ ಆಗೋಕೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇಲ್ಲೋರ್ವ ಮಹಿಳೆ ಸೊಳ್ಳೆ ಸಾಯಿಸುವ ಬ್ಯಾಟ್ ಬಳಸಿಕೊಂಡು ರೀಲ್ಸ್ ಮಾಡಿದ್ದು, ಆಕೆಯ ರೀಲ್ಸ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ಮೂಲಕ ಆಕೆ ಸೊಳ್ಳೆ ಬ್ಯಾಟ್ ಹೀಗೂ ಬಳಸಬಹುದಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ.

ಚಿತ್ರ ವಿಚಿತ್ರ ರೀಲ್ಸ್ ಮಾಡುವುದರಲ್ಲಿ ನಮ್ಮವರು ಕೊಂಚ ಮುಂದೆಯೇ ಇರುತ್ತಾರೆ ಎಂದು ಹೇಳಬಹುದಾಗಿದೆ. ಕೆಲವೊಂದು ಟ್ರಿಕ್ಸ್ ಬಳಸಿ ರೀಲ್ಸ್ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಐರನ್ ಬಾಕ್ಸ್ ಮೇಲೆ ಆಮ್ಲೇಟ್ ಹಾಕುವುದು, ಬೋಳು ತಲೆಯ ಮೇಲೆ ಆಮ್ಲೇಟ್ ಹಾಕುವುದು. ಬಿಸಿ ಬಿಸಿ ಬಂಡೆಯ ಮೇಲೆ ದೋಸೆ ಹಾಕುವುದು ಹೀಗೆ ವಿಚಿತ್ರ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ವಿಡೀಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಮಹಿಳೆ ಸೊಳ್ಳೆ ಬ್ಯಾಟ್ ಬಳಸಿ ಬ್ರೆಡ್ ಟೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

bread toast making by mosquito killer bat 1

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆ ಸೊಳ್ಳೆ ಬ್ಯಾಟ್ ಹಿಡಿದು ಕುಳಿತುಕೊಂಡಿದ್ದಾರೆ. ಬಳಿಕ ಆಕೆ ಬ್ಯಾಟ್ ಮೇಲೆ ಬ್ರೆಡ್ ಪೀಸ್ ಗಳನ್ನು ಸುಟ್ಟಿದ್ದಾರೆ. ಕೊನೆಯಲ್ಲಿ ಆಮೆ ಆ ಟೋಸ್ಟ್ ರುಚಿ ನೋಡಿದ್ದಾರೆ. ಈ ವಿಡಿಯೋ ಶೇರ್‍ ಮಾಡಿ ನೀವು ಬ್ರೆಡ್ ಟೋಸ್ಟ್ ಮಾಡಬೇಕಾದರೇ ಇದೊಂದು ಹೊಸ ಟೆಕ್ನಿಕ್ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಓರ್ವ ನೆಟ್ಟಿಗ ಈ ವಿಡಿಯೋ ಗೆ ಬ್ರೆಡ್ ವಿತ್ ಮಸ್ಕಿಟೋ ಸ್ಯಾಂಡ್ ವಿಚ್ ಎಂದು, ಮತ್ತೋರ್ವ ವ್ಯಕ್ತಿ ಮಚ್ಚರ್‍ ಟೋಸ್ಟ್ ಎಂತಲೂ, ಮಹಿಳೆ ಗ್ಯಾಸ್ ಉಳಿತಾಯ ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂತಲೂ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

ಈ ವಿಡಿಯೋ ನೋಡಲು ಲಿಂಕ್ ಓಪೆನ್ ಮಾಡಿ:  https://www.instagram.com/p/C6S4QSargwx/

Leave a Comment

Your email address will not be published. Required fields are marked *

Scroll to Top