ನೀವು ಪ್ಯಾನ್ ಕಾರ್ಡ್ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ! ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಕೇವಲ (PAN Card New Rules) ಒಂದು ಗುರುತಿನ ಚೀಟಿಯಾಗಿ ಉಳಿದಿಲ್ಲ, ಅದು ನಮ್ಮ ಆರ್ಥಿಕ ಜೀವನದ ಅತ್ಯಗತ್ಯ ಭಾಗವಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ದೊಡ್ಡ ಮಟ್ಟದ ಹಣಕಾಸಿನ ವಹಿವಾಟು ನಡೆಸುವವರೆಗೆ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಕೆಲಸವೇ ನಡೆಯುವುದಿಲ್ಲ.

ಹೀಗಿರುವಾಗ, ಆದಾಯ ತೆರಿಗೆ ಇಲಾಖೆಯು (Income Tax Department) ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಕೆಲವು ನಿರ್ದಿಷ್ಟ ವಹಿವಾಟುಗಳಿಗೆ ಇದನ್ನು ಸಂಪೂರ್ಣವಾಗಿ ಕಡ್ಡಾಯಗೊಳಿಸಿದೆ. ಒಂದು ವೇಳೆ ನೀವು ಈ ಹೊಸ ನಿಯಮಗಳನ್ನು ತಿಳಿದುಕೊಳ್ಳದಿದ್ದರೆ ದೊಡ್ಡ ಸಂಕಷ್ಟಕ್ಕೆ ಸಿಲುಕಬಹುದು! ಹಾಗಾದರೆ ಆ ಹೊಸ ನಿಯಮಗಳೇನು? ಯಾವೆಲ್ಲಾ ಜಾಗದಲ್ಲಿ ಪ್ಯಾನ್ ಕಾರ್ಡ್ ಅತಿ ಮುಖ್ಯ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
PAN Card New Rules – ಪ್ಯಾನ್ ಕಾರ್ಡ್ ಏಕೆ ಅಷ್ಟು ಮುಖ್ಯ?
ನಿಮಗೆ ಹೊಸ ಕೆಲಸ ಸಿಕ್ಕಾಗ, ಬ್ಯಾಂಕ್ನಲ್ಲಿ ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಡಲು ಅಥವಾ ಡ್ರಾ ಮಾಡಲು, ಮ್ಯೂಚುವಲ್ ಫಂಡ್ ಅಥವಾ ಶೇರ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲು ಪ್ಯಾನ್ ಕಾರ್ಡ್ ಅತ್ಯಗತ್ಯ. ಅಷ್ಟೇ ಅಲ್ಲದೆ, ದೊಡ್ಡ ಮೊತ್ತದ ಆಸ್ತಿ ಖರೀದಿಸುವಾಗಲೂ ಇದು ಬೇಕೇ ಬೇಕು. ನಿಮ್ಮ ಪ್ಯಾನ್ ಕಾರ್ಡ್ ಆಧಾರದ ಮೇಲೆಯೇ ಆದಾಯ ತೆರಿಗೆ ಇಲಾಖೆಯು ನಿಮ್ಮ ಆರ್ಥಿಕ ವಹಿವಾಟುಗಳ ಮೇಲೆ ಕಣ್ಣಿಟ್ಟಿರುತ್ತದೆ.
ಬದಲಾದ ಹೊಸ ನಿಯಮಗಳು: ಯಾವೆಲ್ಲಾ ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ?
ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಪ್ಯಾನ್ ನಿಯಮಗಳನ್ನು ಕಟ್ಟುನಿಟ್ಟಾಗಿಸಿದ್ದು, ಕೆಲವು ನಿರ್ದಿಷ್ಟ ಮಿತಿಯ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ನೀಡುವುದನ್ನು ಕಡ್ಡಾಯಗೊಳಿಸಿದೆ:
- ಆಸ್ತಿ ಖರೀದಿ ಮತ್ತು ಮಾರಾಟ: ರೂ. 20 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರ ಆಸ್ತಿಯನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.
- ದುಬಾರಿ ವಸ್ತುಗಳು ಮತ್ತು ಸೇವೆಗಳು: ರೂ. 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ವಸ್ತುಗಳು ಅಥವಾ ಸೇವೆಗಳನ್ನು ಖರೀದಿಸಲು ಪ್ಯಾನ್ ವಿವರಗಳನ್ನು ಒದಗಿಸಬೇಕು.
- ಷೇರು ಮಾರುಕಟ್ಟೆ ಹೂಡಿಕೆ: ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ.
- ವಾಹನ ಖರೀದಿ: ರೂ. 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಕಾರು ಅಥವಾ ಬೈಕ್ ಖರೀದಿಸುವಾಗ ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.
- ಡಿಮ್ಯಾಟ್ ಖಾತೆ: ಶೇರ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ (Demat Account) ತೆರೆಯಲು ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಸಾಧ್ಯವೇ ಇಲ್ಲ.
ಪ್ಯಾನ್ ಕಾರ್ಡ್ ನೀಡದಿದ್ದರೆ ಅಥವಾ ತಪ್ಪು ಮಾಹಿತಿ ನೀಡಿದರೆ ಏನಾಗುತ್ತೆ?
ಒಂದು ವೇಳೆ ನೀವು ಕಡ್ಡಾಯವಿರುವ ಜಾಗದಲ್ಲಿ ಪ್ಯಾನ್ ಕಾರ್ಡ್ ನೀಡದಿದ್ದರೆ, ನಿಮ್ಮ ಆರ್ಥಿಕ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು (Process) ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ, ಇನ್ನು ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು:
ಗಮನಿಸಿ: ನೀವು ಪ್ಯಾನ್ ಕಾರ್ಡ್ ಬಳಸಿ ಮಾಡುವ ಪ್ರತಿಯೊಂದು ವ್ಯವಹಾರವೂ TDS, TCS, SFT (Statement of Financial Transactions) ಮತ್ತು AIS (Annual Information Statement) ನಂತಹ ಐಟಿ ಇಲಾಖೆಯ ಪ್ಲಾಟ್ಫಾರ್ಮ್ಗಳಲ್ಲಿ ದಾಖಲಾಗುತ್ತದೆ. Read this also : ಲೋನ್ (Loan) ಪಡೆಯುವವರಿಗೆ ಆರ್ಬಿಐ ಶಾಕ್! ಜಾರಿಗೆ ಬರಲಿದೆ ಕಠಿಣ ನಿಯಮ.. ಸಿಬಿಲ್ ಸ್ಕೋನ್ ಕಮ್ಮಿ ಇದ್ದರೆ ಕಷ್ಟ ಗ್ಯಾರಂಟಿ!

- ಐಟಿ ಇಲಾಖೆಯಿಂದ ನೋಟಿಸ್: ವ್ಯಕ್ತಿ ಘೋಷಿಸಿಕೊಂಡ ಆದಾಯಕ್ಕೂ ಮತ್ತು ಅವರು ಮಾಡುವ ದೊಡ್ಡ ಮೊತ್ತದ ಆರ್ಥಿಕ ವಹಿವಾಟುಗಳಿಗೂ ವ್ಯತ್ಯಾಸ ಕಂಡುಬಂದರೆ, ಆದಾಯ ತೆರಿಗೆ ಇಲಾಖೆಯು ನೇರವಾಗಿ ನೋಟಿಸ್ ಕಳುಹಿಸಿ ವಿವರಣೆ ಕೇಳಬಹುದು.
- ರೂ. 10,000 ದಂಡ: ಒಂದು ವೇಳೆ ನೀವು ನಕಲಿ ಪ್ಯಾನ್ ಕಾರ್ಡ್ ಅಥವಾ ತಪ್ಪು ಪ್ಯಾನ್ ವಿವರಗಳನ್ನು ನೀಡಿದರೆ ರೂ. 10,000 ವರೆಗೆ ದಂಡ ವಿಧಿಸಲಾಗುತ್ತದೆ.
- ಟ್ಯಾಕ್ಸ್ ಕ್ರೆಡಿಟ್ ಸಮಸ್ಯೆ: ತಪ್ಪು ವಿವರಗಳಿಂದಾಗಿ ಟ್ಯಾಕ್ಸ್ ಕ್ರೆಡಿಟ್ ಪಡೆಯುವಲ್ಲಿ ತೊಂದರೆಗಳು ಮತ್ತು ದಾಖಲೆಗಳಲ್ಲಿ ವ್ಯತ್ಯಾಸಗಳು ಉಂಟಾಗಬಹುದು, ಇದರಿಂದಾಗಿ ಐಟಿ ಇಲಾಖೆಯಿಂದ ಹೆಚ್ಚಿನ ಪರಿಶೀಲನೆ ಎದುರಿಸಬೇಕಾಗಬಹುದು.
ಈಗಿನ ಡಿಜಿಟಲ್ ಜಮಾನದಲ್ಲಿ ಐಟಿ ಇಲಾಖೆಯು ‘ಡೇಟಾ ಅನಾಲಿಟಿಕ್ಸ್’ ಬಳಸಿ ಪ್ರತಿಯೊಂದು ವಹಿವಾಟನ್ನು ಸುಲಭವಾಗಿ ಪತ್ತೆಹಚ್ಚುತ್ತದೆ. ನಿಮ್ಮ ಆದಾಯ ಮತ್ತು ಖರ್ಚುಗಳ ಮಧ್ಯೆ ತೇಡಾ ಇದ್ದರೆ ತಕ್ಷಣವೇ ಸಿಕ್ಕಿಬೀಳುತ್ತೀರಿ. ಆದ್ದರಿಂದ ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಮತ್ತು ನಿಯಮಗಳನ್ನು ತಪ್ಪದೇ ಪಾಲಿಸಿ!
