Tuesday, June 24, 2025
HomeStateBagepalli : ಬಾಗೇಪಲ್ಲಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಸಣ ಕಾರ್ಮಿಕ ಪ್ರತಿಭಟನೆ

Bagepalli : ಬಾಗೇಪಲ್ಲಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಸಣ ಕಾರ್ಮಿಕ ಪ್ರತಿಭಟನೆ

ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಕಾರ್ಯಕರ್ತರು (Bagepalli News) ತಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ ಮಾತನಾಡಿ, ವಂಶಪರಂಪರೆಯಾಗಿ ಹಲವಾರು ವರ್ಷಗಳಿಂದ  ಮಸಣ ಕಾಯುವ ಕೆಲಸ ಮಾಡುತ್ತಾ ಬಂದಿದ್ದೇವೆ. ಮಸಣ ಕಾರ್ಮಿಕರನ್ನು ಗುರ್ತಿಸಿ ಸರ್ಕಾರದ ಸೌಲತ್ತುಗಳನ್ನು ನೀಡುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸಹ ನಮ್ಮನ್ನಾಳುವ ಯಾವುದೇ ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸಲುವಲ್ಲಿ ಸಂಪೂರ್ಣವಾಗಿ ವಇಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Protest in Bagepalli Masana karmikas

ರುದ್ರಭೂಮಿಯಲ್ಲಿ ಕೆಲಸ ಮಾಡುವ  ಮಸಣ ಕಾರ್ಮಿಕರನ್ನು ಸರ್ವೆ ಮಾಡಿ ಗುರ್ತಿಸಬೇಕು, ಮಸಣಕ್ಕೆ ಒಬ್ಬರನ್ನು ಮಸಣ ನಿರ್ವಾಹಕರನ್ನಾಗಿ ನೇಮಿಸಿಕೊಂಡು  ಕನಿಷ್ಠ ಕೂಲಿ ನೀಡಬೇಕು, ಮಸಣದಲ್ಲಿ ಗುಣಿ ತೆಗೆಯುವ ಹಾಗೂ ಮುಚ್ಚುವ  ಕೆಲಸಕ್ಕೆ ಕನಿಷ್ಠ 3 ಸಾವಿರ ರೂ.ಗಳನ್ನ ಸರ್ಕಾರ ನೀಡಬೇಕು, ಹಾಗೂ ಅಗತ್ಯ ಸಲಕರಣೆಗಳನ್ನು ನೀಡಬೇಕು, ಮಸಣ ಕಾರ್ಮಿಕರ ಮಕ್ಕಳಿಗೆ  ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ, ಬ್ಯಾಂಕ್‍ನಲ್ಲಿ ಸಾಲ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಜಿಲ್ಲಾಧ್ಯಕ್ಷ ಕೆ.ನಾಗರಾಜ್, ತಾಲೂಕು ಅಧ್ಯಕ್ಷ ಜಿ.ಕೃಣ್ಣಪ್ಪ, ಮುಖಂಡರಾದ ಅಶ್ವಥನಾರಾಯಣ, ಚೆನ್ನರಾಯಪ್ಪ, ಮುಸ್ತಾಫ್, ನಾರಾಯಣಸ್ವಾಮಿ, ಮೂರ್ತಿ, ಆದಿನಾರಾಯಣಪ್ಪ, ನರಸಿಂಹಪ್ಪ, ಸುಬ್ಬರಾಯಪ್ಪ ಮತ್ತಿತರರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular