ಆನ್‌ ಲೈನ್ ಟ್ರೋಲಿಂಗ್‌ಗೆ ಬೇಸತ್ತು ಲೈವ್‌ನಲ್ಲೇ ವಿಷ ಕುಡಿದ ಖ್ಯಾತ ಇನ್ಫ್ಲುಯೆನ್ಸರ್ (Anita Bishnoi) ಅನಿತಾ ಬಿಷ್ಣೋಯ್..!

ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸುವುದು ಎಷ್ಟು ಸುಲಭವೋ, ಅಲ್ಲಿನ ಟ್ರೋಲ್ ಮತ್ತು ಸೈಬರ್ ಕಿರುಕುಳವನ್ನು ಎದುರಿಸುವುದು ಅಷ್ಟೇ ಕಷ್ಟ. ರಾಜಸ್ಥಾನದ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Anita Bishnoi) ಅನಿತಾ ಬಿಷ್ಣೋಯ್ ಅವರ ಪ್ರಕರಣ ಇದಕ್ಕೆ ತಾಜಾ ಉದಾಹರಣೆ.

Anita Bishnoi, Rajasthan social media influencer, during the cyberbullying controversy that sparked nationwide discussion

ನಿರಂತರ ಆನ್‌ಲೈನ್ ಕಿರುಕುಳ ಹಾಗೂ ವೈಯಕ್ತಿಕ ಒತ್ತಡದಿಂದ ಬೇಸತ್ತ ಅನಿತಾ, ಇನ್‌ಸ್ಟಾಗ್ರಾಮ್ ಲೈವ್‌ (Instagram Live) ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರನ್ನು ಜೋಧ್‌ಪುರದ ಎಂಡಿಎಂ (MDM) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ, ಆದರೂ ಮುಂದಿನ 24 ಗಂಟೆಗಳು ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸೈಬರ್ ಬುಲ್ಲಿಂಗ್‌ನ ಕರಾಳ ಮುಖವನ್ನು ಮತ್ತೆ ಚರ್ಚೆಗೆ ತಂದಿದೆ.

Anita Bishnoi – ಭಾವನಾತ್ಮಕ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಹೇಳಿದ್ದೇನು?

ಘಟನೆಗೂ ಮುನ್ನ ಬುಧವಾರ ಬೆಳಗ್ಗೆ ಅನಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದಿದ್ದರು. ಭಾವುಕರಾಗಿದ್ದ ಅವರು ತಮ್ಮನ್ನು ಟಾರ್ಗೆಟ್ ಮಾಡುತ್ತಿರುವವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

“ನನ್ನ ತೇಜೋವಧೆ ಮಾಡಲು ಸಂಚು ರೂಪಿಸುತ್ತಿರುವವರಿಗೆ ನಾನು ಹೇಳುವುದಿಷ್ಟೇ. ಸಾಯುವುದು ಸುಲಭವಲ್ಲ. ಆದರೆ ನನ್ನ ಮರ್ಯಾದೆ ಕಳೆಯುವುದರಿಂದ ನಿಮಗೆ ಏನೂ ಸಿಗುವುದಿಲ್ಲ. ಮಾತನಾಡಬೇಕಿದ್ದರೆ ನೇರವಾಗಿ ನನ್ನೆದುರು ಬಂದು ಮಾತನಾಡಿ. ಇಲ್ಲದಿದ್ದರೆ, ಮುಂದೆ ಆಗಬೇಕಾದದ್ದನ್ನು ಪೊಲೀಸರು ನೋಡಿಕೊಳ್ಳುತ್ತಾರೆ” ಎಂದು (Anita Bishnoi) ಕಣ್ಣೀರು ಹಾಕಿದ್ದರು. ಜೊತೆಗೆ, “ಇನ್ಮುಂದೆ ನಿಮ್ಮ ಈ ಸಹೋದರಿ ನಿಮಗೆ ಕಾಣಿಸುವುದಿಲ್ಲ” ಎಂಬ ಅವರ ಮಾತುಗಳು ಬೆಂಬಲಿಗರಲ್ಲಿ ತೀವ್ರ ಆತಂಕ ಮೂಡಿಸಿತ್ತು.

ಪತಿಯ ಗಂಭೀರ ಆರೋಪ: ಯಾರು ಈ ಮಾಲಾರಾಮ್?

ಅನಿತಾ ಅವರ ಪತಿ ದಿನೇಶ್ ಬಿಷ್ಣೋಯ್ ಅವರ ಪ್ರಕಾರ, ‘ಮಾಲಾರಾಮ್’ ಎಂಬ ಮತ್ತೊಬ್ಬ ಕಂಟೆಂಟ್ ಕ್ರಿಯೇಟರ್ ಅನಿತಾ ಅವರನ್ನು ಆನ್‌ಲೈನ್‌ನಲ್ಲಿ ನಿರಂತರವಾಗಿ ಟಾರ್ಗೆಟ್ ಮಾಡುತ್ತಿದ್ದರಂತೆ. ಇತರ ಕ್ರಿಯೇಟರ್‌ಗಳನ್ನೂ ಎತ್ತಿಕಟ್ಟಿ ಅನಿತಾ ವಿರುದ್ಧ ಸಂಘಟಿತ ಟ್ರೋಲಿಂಗ್ ಅಭಿಯಾನ ನಡೆಸಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.

“ಅನಿತಾ ಲೈವ್ ಬಂದು ಮಾಲಾರಾಮ್ ವಿರುದ್ಧ ಆರೋಪ ಮಾಡುತ್ತಿರುವ ಬಗ್ಗೆ ನನಗೆ ಕರೆ ಬಂತು. ಜೊತೆಗೆ ಆಕೆ ಯಾವುದೋ ಕಠಿಣ ನಿರ್ಧಾರ ತೆಗೆದುಕೊಳ್ಳಲಿದ್ದಾಳೆ ಎಂದು ತಿಳಿಯಿತು. ತಕ್ಷಣ ಮನೆಗೆ ಹೊರಟೆ. ಅಷ್ಟರಲ್ಲಾಗಲೇ ನನ್ನ ಮಗ ಕರೆ ಮಾಡಿ, ತಾಯಿ ಯಾವುದೋ ವಿಷಕಾರಿ ವಸ್ತು ಸೇವಿಸಿದ್ದಾರೆ ಎಂದು ತಿಳಿಸಿದ. ತಕ್ಷಣವೇ (Anita Bishnoi) ಆಕೆಯನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಿದೆವು” ಎಂದು ದಿನೇಶ್ ವಿವರಿಸಿದ್ದಾರೆ.

ವಿವಾದದ ಕಿಡಿ ಹೊತ್ತಿಸಿದ ಆ ಒಂದು ಪೋಸ್ಟ್!

ಅನಿತಾ ಅವರ ಕುಟುಂಬದವರ ಪ್ರಕಾರ, ಇತ್ತೀಚೆಗೆ ಅವರು ಹಂಚಿಕೊಂಡಿದ್ದ ಒಂದು (Viral Video Here) ಪೋಸ್ಟ್ ಈ ಎಲ್ಲಾ ಟ್ರೋಲಿಂಗ್‌ಗೆ ಪ್ರಮುಖ ಕಾರಣ. ಸಂಸ್ಕೃತಿ ಮತ್ತು ಮೌಲ್ಯಗಳ ಕುರಿತಾದ ಆ ಪೋಸ್ಟ್‌ನಲ್ಲಿ ಹೀಗಿತ್ತು:

“ಬಟ್ಟೆ ಚಿಕ್ಕದಾದರೆ, ಮರ್ಯಾದೆ ಎಲ್ಲಿಂದ ಬರುತ್ತದೆ? ರೊಟ್ಟಿಯ ಜಾಗಕ್ಕೆ ಬ್ರೆಡ್ ಬಂದರೆ, ಶಕ್ತಿ ಎಲ್ಲಿಂದ ಬರುತ್ತದೆ? ಮನುಷ್ಯ ಹಣದ ಗುಲಾಮನಾದರೆ, ಪ್ರೀತಿ ಎಲ್ಲಿಂದ ಬರುತ್ತದೆ?” ಈ ಮಾತುಗಳು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾದವು. ಕೆಲವರು ಇದನ್ನು ಬೆಂಬಲಿಸಿದರೆ, ಇನ್ನೂ ಕೆಲವರು ನಕಾರಾತ್ಮಕ ಕಮೆಂಟ್‌ಗಳ ಸುರಿಮಳೆಯೇ ಹರಿಸಿದರು. ದಿನ ಕಳೆದಂತೆ ಈ ಟೀಕೆಗಳು ತೀವ್ರ ಸ್ವರೂಪ ಪಡೆದುಕೊಂಡವು. Read this also : ಅಸಭ್ಯ ಇನ್‌ಸ್ಟಾಗ್ರಾಮ್ ರೀಲ್ಸ್‌: ಇಬ್ಬರು ಮಹಿಳಾ ಇನ್‌ಫ್ಲುಯೆನ್ಸರ್‌ ಗಳು ಮತ್ತು ತಂಡ ಅರೆಸ್ಟ್..!

ಬೆಂಬಲಕ್ಕೆ ನಿಂತ ಲಕ್ಷಾಂತರ ಅಭಿಮಾನಿಗಳು

ಅನಿತಾ ಅವರ ಈ ಕಠಿಣ ನಿರ್ಧಾರದ ನಂತರ ಅವರ (Anita Bishnoi) ಫಾಲೋವರ್ಸ್ ಆಘಾತಕ್ಕೊಳಗಾಗಿದ್ದಾರೆ. ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಸಾಂತ್ವನದ ಸಂದೇಶಗಳು ಹರಿದುಬರುತ್ತಿವೆ.

  • “ಸಹೋದರಿ, ದಯವಿಟ್ಟು ಇಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಈ ಅಣ್ಣ ಸದಾ ನಿಮ್ಮ ಜೊತೆಗಿದ್ದಾನೆ. ನಿಮಗೆ ಏನಾದರೂ ಅಗತ್ಯವಿದ್ದರೆ ಕರೆ ಮಾಡಿ, ಭರವಸೆ ಕಳೆದುಕೊಳ್ಳಬೇಡಿ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
  • ಮತ್ತೊಬ್ಬರು, “ಸತ್ಯವೇನೆಂದು ತಿಳಿಯದೆ ಬೆರಳು ಮಾಡುವವರು ಈ ಪ್ರಪಂಚದಲ್ಲಿ ಬಹಳಷ್ಟಿದ್ದಾರೆ. ನಿಮ್ಮ ವ್ಯಕ್ತಿತ್ವ, ಮೌಲ್ಯಗಳು ಹಾಗೂ ಕೆಲಸಗಳೇ ನಿಮ್ಮ ನಿಜವಾದ ಗುರುತು. ಸುಳ್ಳು ಆರೋಪಗಳಿಗೆ ಹೆದರಬೇಡಿ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ, ಧೈರ್ಯವಾಗಿರಿ” ಎಂದು ಬೆಂಬಲ ಸೂಚಿಸಿದ್ದಾರೆ.
Anita Bishnoi, Rajasthan social media influencer, during the cyberbullying controversy that sparked nationwide discussion
ರಾಜಸ್ಥಾನಿ ಸಂಸ್ಕೃತಿಯ ರಾಯಭಾರಿ ಅನಿತಾ

ಜೈಸಲ್ಮೇರ್ ಜಿಲ್ಲೆಯ ಲಾಠಿ ಗ್ರಾಮದವರಾದ (Anita Bishnoi) ಅನಿತಾ ಬಿಷ್ಣೋಯ್, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಫ್ಯಾನ್ ಬೇಸ್ ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಬರೋಬ್ಬರಿ 1.3 ಮಿಲಿಯನ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 6,45,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ರಾಜಸ್ಥಾನದ ಜಾನಪದ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಮಾಜಿಕ ಕಳಕಳಿಯ ವಿಡಿಯೋಗಳ ಮೂಲಕ ಅವರು ಮನೆಮಾತಾಗಿದ್ದರು.

ಸದ್ಯದ ಪರಿಸ್ಥಿತಿ ಮತ್ತು ಪೊಲೀಸರ ತನಿಖೆ

ಆಸ್ಪತ್ರೆಯ ಅಧೀಕ್ಷಕ ಡಾ. ವಿಕಾಸ್ ರಾಜಪುರೋಹಿತ್ ಅವರ ಪ್ರಕಾರ, ಸದ್ಯ ಅನಿತಾ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಅವರನ್ನು ತೀವ್ರ ನಿಗಾದಲ್ಲಿ ಇರಿಸಿದ್ದಾರೆ. ಕೇವಲ ಸೈಬರ್ ಕಿರುಕುಳ ಮಾತ್ರವಲ್ಲದೆ, ಇತ್ತೀಚಿನ ತಿಂಗಳುಗಳಲ್ಲಿ ನಡೆಯುತ್ತಿರುವ ಭೂವಿವಾದವೊಂದರ ಒತ್ತಡವೂ ಅವರ ಮೇಲಿತ್ತು ಎನ್ನಲಾಗಿದೆ. ಸದ್ಯ ಪೊಲೀಸರು ಈ ಎಲ್ಲಾ ಆಯಾಮಗಳಲ್ಲೂ ಮಾಹಿತಿ ಕಲೆಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಈ ಘಟನೆಯ ಹಿಂದಿನ ಸ್ಪಷ್ಟ ಚಿತ್ರಣ ಹೊರಬೀಳಬೇಕಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಎನ್ನುವುದು ಮನುಷ್ಯನ ಜೀವ ತೆಗೆಯುವ ಹಂತಕ್ಕೆ ಹೋಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? iRestora PLUS – Next Gen Restaurant POS Age Verification for WordPress Responsive Interactive Table Stripe Payment Add-on for BookPro Plugin Educatito | Multiconcept Education & Courses WordPress Theme Elementor Addon for Real 3D FlipBook Edufast – Education & Online Course WordPress Theme liMarquee – Horizontal and Vertical Scrolling of Text or Image or HTML Code Download File Name for WooCommerce Optimax – SEO & Marketing WordPress Theme