ಟ್ರಾಫಿಕ್ ಫೈನ್ (Traffic Fine) ಪಾವತಿಸಲು ವಾಹನ ಸವಾರರಿಗೆ ಗುಡ್‌ನ್ಯೂಸ್: ಮತ್ತೆ ಬಂತು ಶೇ.50ರಷ್ಟು ಬಂಪರ್ ರಿಯಾಯಿತಿ!

ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದ ಪ್ರಯಾಣ ಅಥವಾ ನೋ ಪಾರ್ಕಿಂಗ್… ಹೀಗೆ ಒಂದಲ್ಲಾ ಒಂದು ಕಾರಣಕ್ಕೆ ನಿಮ್ಮ ವಾಹನದ ಮೇಲೂ ಟ್ರಾಫಿಕ್ ದಂಡ (Traffic Fine) ಬಿದ್ದಿದೆಯಾ? ಸಾವಿರಾರು ರೂಪಾಯಿ ಫೈನ್ ಒಟ್ಟಾಗಿದ್ದು, ಅದನ್ನು ಕಟ್ಟಲು ಹಿಂದೇಟು ಹಾಕುತ್ತಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್!

Karnataka government announces 50 percent discount on pending traffic fines from June 21 to July 10, 2026.

ವಾಹನ ಸವಾರರ ಆರ್ಥಿಕ ಹೊರೆಯನ್ನು ಇಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ (Karnataka Government) ಮಹತ್ವದ ಹೆಜ್ಜೆ ಇಟ್ಟಿದ್ದು, ಬಾಕಿ ಇರುವ ಟ್ರಾಫಿಕ್ ದಂಡದ (Traffic Fine) ಮೇಲೆ ಮತ್ತೆ ಬರೋಬ್ಬರಿ ಶೇ. 50ರಷ್ಟು ರಿಯಾಯಿತಿ (50% Discount) ಪ್ರಕಟಿಸಿದೆ. ದಂಡ ಕಟ್ಟಲಾಗದೆ ಪರದಾಡುತ್ತಿದ್ದ ಸವಾರರಿಗೆ ಸಾರಿಗೆ ಮತ್ತು ಪೊಲೀಸ್ ಇಲಾಖೆ ಬಿಗ್ ರಿಲೀಫ್ ನೀಡಿದೆ.

Traffic Fine – ಯಾವಾಗಿನಿಂದ ಈ ಆಫರ್ ಶುರು?

ಈ ಬಾರಿಯ ಶೇ. 50ರ ರಿಯಾಯಿತಿ ಆಫರ್ ಜೂನ್ 21 ರಿಂದ ಜುಲೈ 10ರವರೆಗೆ ಲಭ್ಯವಿರುತ್ತದೆ. ಅಂದರೆ, ನಿಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಕ್ಲಿಯರ್ ಮಾಡಿಕೊಳ್ಳಲು ನಿಮ್ಮ ಮುಂದೆ ಬರೋಬ್ಬರಿ 20 ದಿನಗಳ ಸುವರ್ಣಾವಕಾಶವಿದೆ.

ಯಾವ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಿಗೆ ಇದು ಅನ್ವಯ?

ಎಲ್ಲಾ ದಂಡಗಳಿಗೂ ಈ ವಿನಾಯಿತಿ ಅನ್ವಯಿಸುವುದಿಲ್ಲ. ನಿರ್ದಿಷ್ಟ ಅವಧಿಯ ಪ್ರಕರಣಗಳಿಗೆ ಮಾತ್ರ ಸರ್ಕಾರ ಈ ಆಫರ್ ನೀಡಿದೆ. ಅವುಗಳ ವಿವರ ಇಲ್ಲಿದೆ:

  • ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ಗಳು: 2026ರ ಮೇ ತಿಂಗಳಿಗಿಂತ ಮೊದಲು ದಾಖಲಾಗಿರುವ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು.
  • ಸಾರಿಗೆ ಇಲಾಖೆಯ ಪ್ರಕರಣಗಳು: 1991 ರಿಂದ 2022ರವರೆಗಿನ ಸುದೀರ್ಘ ಅವಧಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳು.

Karnataka government announces 50 percent discount on pending traffic fines from June 21 to July 10, 2026.

ದಂಡವನ್ನು ಪಾವತಿಸುವುದು ಹೇಗೆ? ಇಲ್ಲಿದೆ ಸುಲಭ ದಾರಿ!

ದಂಡ ಕಟ್ಟಲು ಪೊಲೀಸ್ ಠಾಣೆ ಅಥವಾ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸಾರ್ವಜನಿಕರು ತಮ್ಮ ಬಾಕಿ ಮೊತ್ತವನ್ನು ಸುಲಭವಾಗಿ ಪಾವತಿಸಲು ಸರ್ಕಾರ ಹಲವು ಡಿಜಿಟಲ್ ಆಯ್ಕೆಗಳನ್ನು ಒದಗಿಸಿದೆ. ನೀವು ಈ ಕೆಳಗಿನ ವೇದಿಕೆಗಳ ಮೂಲಕ ಶೇ. 50ರಷ್ಟು ವಿನಾಯಿತಿಯ ದಂಡವನ್ನು ಪಾವತಿಸಬಹುದು. Read this also : ‘ನನಗೆ ಫೈನ್ ಓಕೆ, ನಿಮ್ಮ ಕಥೆಯೇನು?’ – ಟ್ರಾಫಿಕ್ ಪೊಲೀಸರಿಗೆ ಪ್ರಶ್ನಿಸಿದ ವಿದ್ಯಾರ್ಥಿ, ವೈರಲ್ ಆದ ವಿಡಿಯೋ…!

  • ಅಸ್ತ್ರಂ ಆ್ಯಪ್ (Astram App)
  • ಕೆಎಸ್‌ಪಿಎಸ್ ಆ್ಯಪ್ (KSPS App)
  • ಕರ್ನಾಟಕ ಒನ್ ಕೇಂದ್ರಗಳು (Karnataka One Centers): ರಾಜ್ಯಾದ್ಯಂತ ಇರುವ ನಿಮ್ಮ ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಿ ಪಾವತಿಸಬಹುದು.

ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ!

ನಿಮಗೆ ನೆನಪಿರಬಹುದು, ಕಳೆದ ವರ್ಷ ನವೆಂಬರ್ ತಿಂಗಳಲ್ಲೂ ಸರ್ಕಾರ ಇದೇ ರೀತಿ ಶೇ. 50ರಷ್ಟು ರಿಯಾಯಿತಿ ನೀಡಿತ್ತು. ಆಗ ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗದವರಿಗೆ ಇದೊಂದು ಅದ್ಭುತ ಅವಕಾಶ. ಬಾಕಿ ಇರುವ ನಿಮ್ಮ ಟ್ರಾಫಿಕ್ ಫೈನ್ ಅನ್ನು ನೀಡಲಾಗಿರುವ 20 ದಿನಗಳ ಒಳಗೆ ಕ್ಲಿಯರ್ ಮಾಡಿಕೊಳ್ಳಿ.

Leave a Comment

Your email address will not be published. Required fields are marked *

Scroll to Top