Hardik Pandya – Natasa Divorce: ನಾಲ್ಕು ವರ್ಷಕ್ಕೆ ಅಂತ್ಯವಾಯ್ತು ಕ್ರಿಕೆಟಿಗನ ದಾಂಪತ್ಯ, ಅಧಿಕೃತ ಘೋಷಣೆ….!

ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ (Hardik Pandya – Natasa Divorce) ರವರ ದಾಂಪತ್ಯ ಜೀವನ ಅಧಿಕೃತವಾಗಿ ಅಂತ್ಯವಾಗಿದೆ. ಈ ಕುರಿತು ಸ್ವತಃ ಕ್ರಿಕೆಟಿಗ ಪಾಂಡ್ಯ ತಮ್ಮ ವಿಚ್ಚೇದನದ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಸುಮಾರು ದಿನಗಳಿಂದ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಜೊತೆಗೆ ನತಾಶಾ ಸಹ ಭಾರತ ಬಿಟ್ಟು ತಮ್ಮ ತವರಿಗೆ ಹೋಗಿದರು, ಅಂಬಾನಿ ಪುತ್ರನ ಮದುವೆಯಲ್ಲೂ ಪಾಂಡ್ಯ ಒಂಟಿಯಾಗಿ ಕಾಣಿಸಿಕೊಂಡರು. ಇದೀಗ ಪಾಂಡ್ಯ ತಮ್ಮ ವಿಚ್ಚೇದನದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Hardik Pandya – Natasa Divorce 1

(Hardik Pandya – Natasa Divorce) ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ತಮ್ಮ ವಿಚ್ಚೇದನದ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಟ್ಟಿಗೆ ವಾಸಿಸಿದ ಬಳಿಕ, ನತಾಶಾ ಹಾಗೂ ನಾನು ಪರಸ್ಪರ ಒಪ್ಪಿಗೆಯ ಮೇರೆಗೆ ನಿರ್ಧಾರ ಮಾಡಿದ್ದೇವೆ. ನಾವು ಸಂಬಂಧವನ್ನು ಉಳಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡಿದ್ದೇವೆ. ಆದರೆ ನಮ್ಮಿಬ್ಬರಿಗೂ ಅದು ಸಾಧ್ಯವಾಗದ ಕಾರಣ ನಾವು ಬೇರೆಯಾಗುವುದೇ ಸರಿಯಾದ ನಿರ್ಧಾರವೆಂದು ತೀರ್ಮಾನಿಸಿದ್ದೇವೆ. ಇದು ನಮಗೆ ತುಂಬಾ ಕಷ್ಟಕರವಾದ ನಿರ್ಧಾರವಾದರೂ ಸಹ ಬೇರೆಯಾಗಬೇಕಿದೆ. ನಾವಿಬ್ಬರು ಒಟ್ಟಿಗೆ ಕಳೆದ ಸಂತೋಷದ ಕ್ಷಣಗಳು, ಪರಸ್ಪರ ಗೌರವ ಹಾಗೂ ಒಂದು ಕುಟುಂಬವಾಗಿ ಕಳೆದಂತಹ ದಿನಗಳನ್ನು ತುಂಬಾ ಆನಂದಿಸಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.

Hardik Pandya – Natasa Divorce 0

ಇದೇ ಪೋಸ್ಟ್ ನಲ್ಲಿ ತಮ್ಮ ಮಗ ಅಗಸ್ಯನ ಬಗ್ಗೆ ಸಹ ಹೇಳಿದ್ದಾರೆ. ನಮ್ಮ ಜೀವನದಲ್ಲಿ ಅಗಸ್ಯ ನನ್ನ ಪಡೆದಿರುವುದಕ್ಕೆ ನಾವು ಅದೃಷ್ಟವಂತರು. ಅವನು ಸದಾ ನಮ್ಮ ಜೀವನದ ಅಡಿಪಾಯವಾಗಿ ಉಳಿಯುತ್ತಾನೆ. ನಾವಿಬ್ಬರೂ ಸೇರಿ ಅವನನ್ನು ನೋಡಿಕೊಳ್ಳುತ್ತೇವೆ. ಆತನಿಗೆ ಈ ಪ್ರಪಂಚದಲ್ಲಿ ಎಲ್ಲಾ ಸುಖ ಸಿಗುವಂತೆ ಮಾಡಲು ನಾವು ನಮ್ಮ ಕೈಯಲ್ಲಾದಷ್ಟು ಪ್ರಯತ್ನ ಮಾಡುತ್ತೇವೆ. ಅವನ ಸಂತೋಷಕ್ಕಾಗಿ ಎಲ್ಲವನ್ನೂ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ಈ ಕಷ್ಟದ ಸಮಯದಲ್ಲಿ ನಿಮ್ಮ ಬೆಂಬಲವನ್ನು ಪಡೆಯಲು ಹಾಗೂ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಳ್ಳಬೇಕೆಂದು ಆಶಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.

Hardik Pandya – Natasa Divorce 3

ಇನ್ನೂ ನತಾಶಾ ಸರ್ಬಿಯಾದಲ್ಲಿರುವ ತಮ್ಮ ತವರು ಮನೆಗೆ ಹೋಗಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ 2018 ರಲ್ಲಿ ಪರಸ್ಪರ ಭೇಟಿಯಾಗಿದ್ದ ಪಾಂಡ್ಯ ಹಾಗೂ ನತಾಶಾ 2020 ರಲ್ಲಿ ಮದುವೆಗೂ ಮುಂಚೆಯೇ ತಾವು ಪೋಷಕರಾಗುತ್ತಿರುವ ಬಗ್ಗೆ ವಿಚಾರ ಹಂಚಿಕೊಂಡಿದ್ದರು. 2020 ರ ಡಿಸೆಂಬರ್‍ ಮಾಹೆಯಲ್ಲಿ ಅಗಸ್ಯ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ 2023 ರಲ್ಲಿ ಈ ಜೋಡಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯಂತೆ ಮದುವೆಯಾಗಿದ್ದರು. ಅವರ ಮದುವೆ ಅದ್ದೂರಿಯಾಗಿ ನೆರವೇರಿತ್ತು.

Leave a Reply

Your email address will not be published. Required fields are marked *

Next Post

Bagepalli : ಬಾಗೇಪಲ್ಲಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಸಣ ಕಾರ್ಮಿಕ ಪ್ರತಿಭಟನೆ

Fri Jul 19 , 2024
ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಕಾರ್ಯಕರ್ತರು (Bagepalli News) ತಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ ಮಾತನಾಡಿ, ವಂಶಪರಂಪರೆಯಾಗಿ ಹಲವಾರು ವರ್ಷಗಳಿಂದ  ಮಸಣ ಕಾಯುವ ಕೆಲಸ ಮಾಡುತ್ತಾ ಬಂದಿದ್ದೇವೆ. ಮಸಣ ಕಾರ್ಮಿಕರನ್ನು ಗುರ್ತಿಸಿ ಸರ್ಕಾರದ ಸೌಲತ್ತುಗಳನ್ನು ನೀಡುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸಹ ನಮ್ಮನ್ನಾಳುವ ಯಾವುದೇ […]
Protest in Bagepalli Masana karmikas 1
error: Content is protected !!