Tech News: ಸದ್ಯ ಭಾರತದಲ್ಲಿ ಆಧಾರ್ ಕಾರ್ಡ್ ಇಲ್ಲದೇ ಕೆಲವೊಂದು ಕೆಲಸಗಳು ನಡೆಯೋದೆ ಇಲ್ಲ ಎಂದು ಹೇಳಬಹುದು. ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು, ಸಿಮ್ ಕಾರ್ಡ್ ಪಡೆಯುವುದು ಸೇರಿದಂತೆ ಹಲವು ಕೆಲಸಗಳಿಗಾಗಿ ಆಧಾರ್ ಬೇಕಾಗುತ್ತದೆ. ಇನ್ನೂ ಆಧಾರ್ ಕಾರ್ಡ್ ನಿಂದ ನೊಂದಣಿಯಾದ ಸಿಮ್ ಗಳು ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲೂ ಬಳಸಲಾಗುತ್ತದೆ. ಈಗಾಗಲೇ ಅಂತಹ ಪ್ರಕರಣಗಳ ಬಗ್ಗೆ ಅನೇಕ ಸುದ್ದಿಗಳನ್ನು ಸಹ ಕೇಳಿದ್ದೇವೆ. ಇದೀಗ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮಗೆ ತಿಳಿಯದೇ ಎಷ್ಟು ಸಿಮ್ ಗಳು (Tech News) ರಿಜಿಸ್ಟರ್ ಆಗಿದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಇಲ್ಲಿ ನಿಮ್ಮ ಆಧಾರ್ ನಂಬರ್ ಗೆ ಎಷ್ಟು ಸಿಮ್ ಗಳು ನೊಂದಣಿಯಾಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.
ದೂರಸಂಪರ್ಕ ಇಲಾಖೆಯ ಮಾರ್ಗಸೂಚಿಯಂತೆ ಒಂದು ಐಡಿ 9 ಮೊಬೈಲ್ ಸಂಖ್ಯೆಗಳನ್ನು ಪಡೆಯಬಹುದು. ಹೊಸ ಸಿಮ್ ಕಾರ್ಡ್ ಪಡೆಯಬೇಕಾದರೇ ಸ್ವೀಕರಿಸುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಅನ್ನು ಸಹ (Tech News) ಪುರಾವೆಯಾಗಿ ಪಡೆದುಕೊಳ್ಳುತ್ತಾರೆ. ಕೆಲವೊಂದು ಕಡೆ ಬೇರೆಯವರಿಗೆ ಸೇರಿದ ಆಧಾರ್ ಮಾಹಿತಿಯನ್ನು ಪಡೆದು ವಂಚನೆ ಮಾಡುವಂತಹ ಪ್ರಕರಣಗಳೂ ಸಹ ಹೆಚ್ಚಾಗಿದೆ. ಆದ್ದರಿಂ ದೂರ ಸಂಪರ್ಕ ಇಲಾಖೆ ಹೊಸ ವೆಬ್ ಸೈಟ್ ಆರಂಭಿಸಿದೆ. ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ ಮೆಂಟ್ ಹಾಗೂ ಕನ್ಸ್ಯೂಮರ್ ಪ್ರೊಟೆಕ್ಷನ್ (TAF-COP) ವೆಬ್ ಸೈಟ್ ನಲ್ಲಿ ತಮ್ಮ ಆಧಾರ್ ಕಾರ್ಡ್ ನೊಂದಿಗೆ ಎಷ್ಟು ಮೊಬೈಲ್ ಸಂಖ್ಯೆಗಳು ನೊಂದಣಿಯಾಗಿದೆ ಎಂಬುದನ್ನು ಪರಿಶೀಲನೆ ಮಾಡಬಹುದಾಗಿದೆ.
ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ ಮೆಂಟ್ ಹಾಗೂ ಕನ್ಸ್ಯೂಮರ್ ಪ್ರೊಟೆಕ್ಷನ್ (TAF-COP) ವೆಬ್ ಸೈಟ್ ನಲ್ಲಿ ನಿಮ್ಮ ಆಧಾರ್ ನೊಂದಿಗೆ ಎಷ್ಟು ಸಿಮ್ ಕಾರ್ಡ್ ಗಳು ನೊಂದಣಿಯಾಗಿದೆ (Tech News) ಎಂಬುದನ್ನು ಈ ಕೆಳಕಂಡಂತೆ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
- ಮೊದಲು TAFCOP ವೆಬ್‌ಸೈಟ್‌ಗೆ ಭೇಟಿ ನೀಡಿ: https://tafcop.sancharsaathi.gov.in/telecomUser/
- ಕೊಟ್ಟಿರುವ ಬಾಕ್ಸ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಬಳಿಕ ಕ್ಯಾಪ್ಚಾ ನಮೂದಿಸಿ ಮತ್ತು “ಒಟಿಪಿ ವಿನಂತಿ” ಕ್ಲಿಕ್ ಮಾಡಿ.
- OTP ಅನ್ನು ನಮೂದಿಸಿ ಮತ್ತು “ಲಾಗಿನ್” ಕ್ಲಿಕ್ ಮಾಡಿ. ನಿಮ್ಮ ಐಡಿಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ನೀವು ನೋಡುತ್ತೀರಿ.
- ಎಲ್ಲಾ ಸಕ್ರಿಯ ಮೊಬೈಲ್ ಸಂಖ್ಯೆಗಳು ನಿಮಗೆ ಅಥವಾ ನಿಮ್ಮ ಸಂಬಂಧಿಕರಿಗೆ ಸೇರಿವೆ ಎಂದು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳಿ.
- ಯಾವುದೇ ಸಂದೇಹವಿದ್ದಲ್ಲಿ, ಈ ವೆಬ್‌ಸೈಟ್ 03 ಆಯ್ಕೆಗಳನ್ನು ನೀಡುತ್ತದೆ; ನನ್ನ ಸಂಖ್ಯೆ ಅಲ್ಲ, ಅಗತ್ಯವಿಲ್ಲ ಮತ್ತು ಅಗತ್ಯವಿದೆ.
- TAF-COP ಪೋರ್ಟಲ್ ನಿಮ್ಮದಲ್ಲದ ಸಂಖ್ಯೆಗಳನ್ನು ವರದಿ ಮಾಡಲು ಮತ್ತು ನಿರ್ಬಂಧಿಸಲು ನಿಮಗೆ ಅನುಮತಿಸುತ್ತದೆ. “ನನ್ನ ಸಂಖ್ಯೆ ಅಲ್ಲ” ಕ್ಲಿಕ್ ಮಾಡುವ ಮೂಲಕ ನಿಮ್ಮ ಐಡಿಯೊಂದಿಗೆ ನೋಂದಾಯಿಸಲಾದ ಮತ್ತು ನಿಮ್ಮ ಕುಟುಂಬದ ಯಾವುದೇ ಸದಸ್ಯರಿಗೆ ಸಂಬಂಧಿಸದ ಸಂಖ್ಯೆಯನ್ನು ನೀವು ರಿಪೋರ್ಟ್ ಮಾಡಬಹುದು.