ಕರ್ನಾಟಕದ ಪ್ರಮುಖ ಹಾಗೂ ಪ್ರಸಿದ್ದ ದೇವಾಲಯಗಳಲ್ಲಿ ಶೃಂಗೇರಿಯ ಶಾರದಾಂಬಾ ದೇವಿ (Sringeri Temple) ದೇವಾಲಯ ಸಹ ಒಂದಾಗಿದೆ. ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿರುವ ಶ್ರೀ ಶಾರದಾ ಮಾತೆಯ (Sringeri Temple) ದರ್ಶನಕ್ಕಾಗಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇದೀಗ ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಮುಖ ಸೂಚನೆಯೊಂದು ಬಂದಿದ್ದು, ಸದ್ದಿಲ್ಲದೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಆ.15 ರಿಂದ ವಸ್ತ್ರ ಸಂಹಿತೆ ಕಡ್ಡಾಯ ಎಂದು ಹೇಳಲಾಗಿದೆ.
ಕಾಫಿನಾಡು ಚಿಕ್ಕಮಗಳೂರಿನ ಶೃಂಗೇರಿ ದೇವಾಸ್ಥಾನ (Sringeri Temple) ಆಡಳಿತ ಮಂಡಳಿ ಸದ್ದಿಲ್ಲದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಶ್ರೀ ಶಾರಾದ ಮಾತೆಯ ದರ್ಶನ ಹಾಗೂ ಶ್ರೀಗಳ ಪಾದಪೂಜೆಗೆ ಬರುವ ಭಕ್ತಾಧಿಗಳಿಗೆ ಭಾರತೀಯ ಸಂಪ್ರದಾಯಂತೆ ಉಡುಗೆ ಧರಿಸಿ ಬರಲು ಆಡಳಿತಾಧಿಕಾರಿಗಳಿಗೆ ವಿನಂತಿಸಿದ್ದಾರೆ. ಪುರುಷರಿಗೆ ಧೋತಿ ಹಾಗೂ ಶಲ್ಯ ಹಾಗೂ ಉತ್ತರೀಯ ಧರಿಸಬೇಕು. ಮಹಿಳೆಯರು ಸೀರೆ-ರವಿಕೆ, ಸಲ್ವಾರ್ ಜೊತೆಗೆ ದುಪ್ಪಟ ಅಥವಾ ಲಂಗ ದಾವಣಿ ಧರಿಸಬೇಕು. ಯಾರಾದರೂ ಈ ನಿಯಮ ಉಲ್ಲಂಘಿಸಿದರೇ ಅಂತಹವರಿಗೆ ಅರ್ಧಮಂಟಪದ ಒಳಗೆ ಪ್ರವೇಶ ನಿಷೇಧಿಸಲಾಗಿದೆ. ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ ಎಂದು ಆಡಳಿತಾಧಿಕಾರಿಗಳು ಮಹತ್ವದ (Sringeri Temple) ಪ್ರಕಟನೆ ಹೊರಡಿಸಿದ್ದಾರೆ.
ಇನ್ನೂ ಮುಜರಾಯಿ ಇಲಾಖೆಗೆ ಸೇರಿದ ದೇವಿರಮ್ಮನ ದೇವಾಲಯದಲ್ಲೂ ಸಹ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಮಿಡಿ, ಸ್ಕರ್ಟ್, ಸ್ಲೀವ್ ಲೆಸ್ ಡ್ರೆಸ್, ಹಾಕಿಕೊಂಡು ಬಂದರೇ ದೇವಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರೇ ಈ ದೇವಾಲಯಕ್ಕೆ ಬರುತ್ತಾರೆ. ಅವರ ಪೈಕಿ ಹೆಚ್ಚಾಗಿ ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿಕೊಂಡು ದೇವಾಲಯಕ್ಕೆ ಬರುತ್ತಿರುತ್ತಾರೆ. ಇದರಿಂದ ಭಕ್ತರಿಗೆ ಇರುಸು-ಮುರುಸು ಉಂಟಾಗುತ್ತದೆ ಈ ಹಿನ್ನೆಲೆಯಲ್ಲಿ ದೇವಾಲಯದ ಅಭಿವೃದ್ದಿ ಮಂಡಳಿ ವಸ್ತ್ರ ಸಂಹಿತೆ ಜಾರಿಗೆ ತರಲು ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.