Viral Video – ರಸ್ತೆಗಳಲ್ಲಿ ಬೈಕರ್ ಗಳು ವಿವಿಧ ವಿನ್ಯಾಸಗಳನ್ನು ಮಾಡುವುದನ್ನು ನೋಡಿರುತ್ತೇವೆ. ಅಪಾಯಕಾರಿ ಸ್ಟಂಟ್ ಗಳನ್ನು, ವೀಲ್ಹಿಂಗ್ ಗಳನ್ನು ಮಾಡುತ್ತಾ ಪ್ರಾಣದ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಈ ಕುರಿತು ಎಷ್ಟೆಲ್ಲಾ ಜಾಗೃತಿ ಮೂಡಿಸಿದರೂ ಸಹ ಪುಂಡ ಪೋಕರಿಗಳು ಕ್ಯಾರೇ ಅನ್ನದೇ ತಮ್ಮ ಚಾಳಿಯನ್ನು ಮುಂದುವರೆಸುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವಾಹನ ಸವಾರನೊಬ್ಬ ಹಿಮ್ಮುಖವಾಗಿ ಕುಳಿತು ಹೈ ವೇ ರೋಡ್ ನಲ್ಲಿ ಸ್ಕೂಟಿ ಓಡಿಸಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆತನ ಈ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಷ ಹೊರಹಾಕುತ್ತಿದ್ದಾರೆ.
ಹೈವೇ ರಸ್ತೆಗಳಲ್ಲಿ ಯದ್ವಾತದ್ವಾ ವಾಹನಗಳನ್ನು ಓಡಿಸಿ ರಸ್ತೆಯಲ್ಲಿ ಓಡಾಡುವಂತಹ ಬೇರೆ ವಾಹನ ಸವಾರರಿಗೂ ತೊಂದರೆ ಕೊಡುತ್ತಿರುತ್ತಾರೆ. ಇಲ್ಲೊಬ್ಬ ಭೂಪ ಸ್ಕೂಟಿಯನ್ನು ಹಿಮ್ಮುಖವಾಗಿ ಕುಳಿತು ಚಲಾಯಿಸಿದ್ದಾನೆ. ಈ ವಿಡಿಯೋವನ್ನು ದಿವ್ಯಾ ಕುಮಾರಿ (@divyaKumaari) ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೋಡಿ ಈತ ಎಷ್ಟು ಮೂರ್ಖ, ಆತ ಸಾಯುವುದು ಮಾತ್ರವಲ್ಲದೇ, ಇತರ ಮುಗ್ದ ಜನರನ್ನೂ ತೊಂದರೆಗೆ ಸಿಲುಕಿಸುವಂತೆ ಮಾಡುತ್ತಾರೆ, ಎಂಬ ಟೈಟಲ್ ಬರೆದು ಈ ವಿಡಿಯೋ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎಲ್ಲೋ ಕಲರ್ ಟೀ ಶರ್ಟ್ ಧರಿಸಿದ ವ್ಯಕ್ತಿಯೋರ್ವ ಸ್ಕೂಟರ್ ಏರಿ ಹಿಮ್ಮುಖವಾಗಿ ಕುಳಿತು ಹೈವೇ ರಸ್ತೆಯಲ್ಲಿ ಓಡಿಸುತ್ತಾನೆ. ಕಳೆದ ಡಿ.20 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಲಕ್ಷಾಂತರ ವ್ಯೂಸ್ ಕಂಡಿದೆ. ಅನೇಕರು ಆತನ ವರ್ತನೆಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಓರ್ವ ಬಳಕೆದಾರ ಈ ರೀತಿಯ ವರ್ತನೆ ಮಾಡುವಂತಹವರ ವಿರುದ್ದ ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕು ಎಂದರೇ, ಮತ್ತೋರ್ವ ಇಂತಹ ವ್ಯಕ್ತಿಗಳಿಂದ ಬೇರೆ ಸವಾರರಿಗೂ ಸಮಸ್ಯೆಯಾಗುತ್ತದೆ ಎಂತಲೂ, ಮತ್ತೋರ್ವ ಈ ರೀತಿಯ ಹುಚ್ಚಾಟದಿಂದ ಅಪಘಾತಗಳು ಸಂಭವಿಸಬಹುದಾದ ಸಾಧ್ಯತೆಯಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕಾಮೆಂಟ್ ಗಳ ಮೂಲಕ ತಮ್ಮ ಆಕ್ರೋಷ ಹೊರಹಾಕುತ್ತಿದ್ದಾರೆ.