ಕೆಲಸಗಳ ಒತ್ತಡ ಸೇರಿದಂತೆ ಹಲವು ಕಾರಣಗಳಿಂದ ಮನೆ ಕೆಲಸಕ್ಕಾಗಿ ಮಹಿಳೆಯರನ್ನು ನೇಮಿಸಿಕೊಳ್ಳುತ್ತಾರೆ. ಮನೆಕೆಲಸದವರ ಮೇಲೆ ತುಂಬಾ ನಂಬಿಕೆಯಿಟ್ಟು ಮನೆಯ ಜವಾಬ್ದಾರಿಯನ್ನು ನೀಡುತ್ತಾರೆ. ಆದರೆ ಕೆಲವು ಕೆಲಸಗಾರರು ಮಾತ್ರ ಉಂಡ ಮನೆಗೆ ದ್ರೋಹ ಬಗೆಯುವಂತಹ ಕೆಲಸ ಮಾಡುತ್ತಾರೆ. ಈ ರೀತಿಯ ಮನೆಕೆಲಸದವರು ಮೋಸ ಮಾಡಿದ ಸುದ್ದಿಗಳನ್ನು ಕೇಳಿರುತ್ತೇವೆ. ಈ ಸಾಲಿಗೆ ಮತ್ತೊಂದು ಸುದ್ದಿ ಸೇರಿಕೊಂಡಿದೆ. ಮನೆಕೆಲಸದಾಕೆ ಮಾಡಿದ ನೀಚ ಕೆಲಸಕ್ಕೆ ಮನೆಯ ಮಾಲೀಕರು ಶಾಕ್ ಆಗಿದ್ದಾರೆ. ತನ್ನ ಮನೆಯವರಿಗೆ ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸಿ (Viral Video) ಕೊಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದೆ. ಘಾಜಿಯಾಬಾದ್ ನ ಥಾನಾ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದ ಫ್ಲಾಟ್ ಒಂದರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ವಾಸವಿದ್ದು, ಅವರ ಮನೆಯ ಕೆಲಸಕ್ಕಾಗಿ ಮಹಿಳೆಯೊಬ್ಬರನ್ನು ನೇಮಿಸಿಕೊಂಡಿದ್ದರು. ಈ ಮನೆಕೆಲಸದಾಕೆ ತನ್ನ ಮೂತ್ರವನ್ನು ಬೆರೆಸಿ ರೊಟ್ಟಿ ತಯಾರಿಸುವಾಗ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ರೀನಾ ಎಂದು ಗುರ್ತಿಸಲಾಗಿದೆ. ಕಳೆದ 8 ವರ್ಷದಿಂದ ಈ ಮಹಿಳೆಯ ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ರೀನಾ ತನಗೆ ಕೆಲಸ ಕೊಟ್ಟ ಮನೆಗೆ ದ್ರೋಹ ಬಗೆದಿದ್ದಾಳೆ.
ಕೆಲವೊಂದು ಮಾಹಿತಿಗಳ ಪ್ರಕಾರ ಈ ಉದ್ಯಮಿಯ ಮನೆಯವರು ಕೆಲವು ದಿನಗಳಿಂದ ನಿರಂತರವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಆದರೆ ತಮ್ಮ ಆರೋಗ್ಯ ಸಮಸ್ಯೆಗೆ ಕಾರಣ ಏನು ಎಂಬುದು ತಿಳಿದಿರಲಿಲ್ಲ. ಬಳಿಕ ಒಂದು ದಿನ ಉದ್ಯಮಿ ತಮ್ಮ ಅಡುಗೆ ಮನೆಯಲ್ಲಿ ಸೀಕ್ರೇಟ್ ಆಗಿ ಮೊಬೈಲ್ ಕ್ಯಾಮೆರಾ ಇಟ್ಟಿದ್ದಾರೆ. ಮನೆಕೆಲಸದಾಕೆಯ ದುಶ್ಕೃತ್ಯ ಈ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಕೆಲಸದಾಕೆ ರೀನಾ ತನ್ನ ಮೂತ್ರ ವಿಸರ್ಜನೆ ಮಾಡಿ ಅದೇ ಮೂತ್ರದಲ್ಲಿ ರೊಟ್ಟಿಯ ಹಿಟ್ಟು ಕಲಿಸಿ ರೊಟ್ಟಿಯನ್ನು ತಯಾರಿಸಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದ್ದು, ಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ರೀನಾಳನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು @SachinGuptaUP ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ತುಂಬಾನೆ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮನೆಕೆಲಸದಾಕೆ ಅಡುಗೆ ಕೋಣೆಯನ್ನು ಒಂದು ಪಾತ್ರೆಗೆ ಮೂತ್ರ ವಿಸರ್ಜಿಸುವಂತಹ ದೃಶ್ಯವನ್ನು ಕಾಣಬಹುದು. ನಂತರ ಅದೇ ಪಾತ್ರೆಗೆ ಹಿಟ್ಟು ಬೆರೆಸಿ ರೊಟ್ಟಿಯನ್ನು ತಯಾರಿಸಿದ್ದಾಳೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಆಕೆಗೆ ಕಠಿಣ ಶಿಕ್ಷೆಯಾಗಬೇಕೆಂದು ಅನೇಕರು ಕಾಮೆಂಟ್ ಗಳ ಮೂಲಕ ಒತ್ತಾಯಿಸುತ್ತಿದ್ದಾರೆ.
ಇನ್ನೂ ಮನೆಕೆಲಸದಾಕೆ ರೀನಾ ಆಹಾರದಲ್ಲಿ ಮೂತ್ರ ಬೆರಸಿದ್ದು ಏಕೆ ಎಂಬ ವಿಚಾರ ಕೇಳಿದ್ರೇ ನಿಮಗೂ ಶಾಕ್ ಆಗಬಹುದು. ಮೊದಲಿಗೆ ರೀನಾ ನನ್ನದು ಏನು ತಪ್ಪಿಲ್ಲ ಎಂದು ವಾದ ಮಾಡಿದ್ದಳು. ಬಳಿಕ ಸಿಸಿಟಿವಿ ದೃಶ್ಯ ತೋರಿಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಮನೆಯ ಮಾಲಕಿ ತನ್ನ ಮೇಲೆ ಸದಾ ಕಣ್ಣಿಡುತ್ತಿದ್ದಳು, ಸಣ್ಣ ಪುಟ್ಟ ತಪ್ಪುಗಳಿಗೂ ಬೈಯ್ಯುತ್ತಿದ್ದಳು. ಮನೆಯೊಡತಿಯ ಮೇಲಿನ ಕೋಪಕ್ಕಾಗಿ ಆಹಾರದಲ್ಲಿ ಮೂತ್ರ ಬೆರೆಸುತ್ತಿದ್ದಾಗಿ ರೀನಾ ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗಿದೆ.