ಇಂದು ರಾಜ್ಯದಾದ್ಯಂತ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಅದರಂತೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆ ಸಭಾಂಗಣದಲ್ಲಿ ಕೆಜಿಎಫ್ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ,
ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆ ಸಭಾಂಗಣದಲ್ಲಿ ಕೆಜಿಎಫ್ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ಶಶಿಧರ್ ಭಾಗವಹಿಸಿ ಮಾತನಾಡಿದರು. ರಾಮಾಯಣದಲ್ಲಿ ಸೀತೆ ಮಾತೆ ಮತ್ತು ಮಹಾಭಾರತದಲ್ಲಿ ದ್ರೌಪದಿಗೆ ಅಪಮಾನವಾಗುತ್ತೆ. ಇವೆಲ್ಲವನ್ನು ಇಬ್ಬರಿಬ್ಬರು ಸಹಿಸಿಕೊಳ್ಳುತ್ತಾರೆ. ಇಂದಿಗೂ ಸಹ ಮಹಿಳೆ ಚರಿತ್ರೆವಧ್ಯೆ ನಡೆಯುತ್ತಲೆ ಇದೆ ಎಂದು ತಿಳಿಸಿದ್ದಾರೆ. ಸಮಾಜದಲ್ಲಿ ಮಹಿಳೆಯ ಚಾರಿತ್ರ್ಯವಧೆಯಾದಾಗ ಆ ಮಹಿಳೆ ಅನುಭವಿಸುವ ನೋವು ಅಷ್ಟಿಷ್ಟಲ್ಲ, ಆ ನೋವು ಹೆಣ್ಣಿಗೆ ಮಾತ್ರ ಗೊತ್ತು ಎಂದು ಅವರು ಭಾವುಕರಾದರು.
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಅವರು ಬರೆದಿರುವ ಮಹಾಕಾವ್ಯಗಳಾಗಿರುವ ರಾಮಾಯಣ ಮತ್ತು ಮಹಾಭಾರತ ನೆನೆದು ಭಾವುಕರಾಗಿ ಮಾತನ್ನಾಡಿದ್ದಾರೆ. ಶಾಸಕಿ ರೂಪಕಲಾ ಶಶಿಧರ್ ಮಹಿಳೆಯರ ಅಸಹಾಯಕತೆ ಮತ್ತು ಚಾರಿತ್ರ್ಯದ ಕುರಿತು ಮಾತನಾಡುತ್ತಾ ಇಂದಿಗೂ ಜನರು ಖುಷಿ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾ ಕಣ್ಣೀರು ಹಾಕಿದ್ದಾರೆ. ಸಮಾಜದಲ್ಲಿ ಮಹಿಳೆಯ ಚರಿತ್ರೆವಧ್ಯೆಯದಾಗ ಆ ಮಹಿಳೆ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಆ ನೋವು ಹಣ್ಣಿಗೆ ಮಾತ್ರ ಗೊತ್ತಾಗುತ್ತೆ. ಮಹಿಳೆಯ ಅಸಹಾಯಕತೆ ಮತ್ತು ಚರಿತ್ರೆಯನ್ನು ಮಾತನಾಡುತ್ತಾ ಇಂದಿಗೂ ಜನ ಖುಷಿಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆ ಹೆಣ್ಣಿಗೆ ತಂದೆ ಮಾತ್ರ ಬೆಂಬಲವಾಗಿ ನಿಂತಿರುತ್ತಾರೆ ಎಂದು ರೂಪಕಲಾ ಶಶಿಧರ್ ಭಾವುಕರಾಗಿದ್ದಾರೆ.