Snake Bite ತೋಟದಲ್ಲಿ ಕೆಲಸ ಮಾಡುವಾಗ ಅನೇಕ ಬಾರಿ ರೈತರಿಗೆ ಅಥವಾ ಕೃಷಿ ಕೂಲಿಕಾರರಿಗೆ ಹಾವುಗಳು ಕಚ್ಚಿರುವ ಬಗ್ಗೆ ಕೇಳಿರುತ್ತೇವೆ. ಅದೇ ರೀತಿ ಬಿಹಾರದಲ್ಲೊಬ್ಬ ವ್ಯಕ್ತಿಗೆ ತೋಟದಲ್ಲಿ ಕೆಲಸ ಮಾಡುವಾಗ ಹಾವೊಂದು ಕಚ್ಚಿದೆ. ತನಗೆ ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದುಕೊಂಡು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯನ್ನು ಕಂಡು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಶಾಕ್ ಆಗಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ.
ಅಂದಹಾಗೆ ಈ ಘಟನೆ ಬಿಹಾರದ ಭಾಗಲ್ಪುರ ಎಂಬಲ್ಲಿ ನಡೆದಿದೆ. ಪ್ರಕಾಶ್ ಮಂಡಲ್ ಎಂಬ ವ್ಯಕ್ತಿಗೆ ತೋಟದಲ್ಲಿ ಕೆಲಸ ಮಾಡುವ ಸಮಯದಲ್ಲಿ (Snake Bite) ಕನ್ನಡಿ ಹಾವೊಂದು ಕಚ್ಚಿದೆ. ಬಳಿಕ ಎಚ್ಚೆತ್ತುಕೊಂಡ ಪ್ರಕಾಶ್ ಕಚ್ಚಿದ ಹಾವನ್ನು ಕೈಯಲ್ಲಿ ಹಿಡಿದು ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾನೆ. ಈ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳೂ ಸಹ ಶಾಕ್ ಆಗಿದ್ದಾರೆ. ಜೊತೆಗೆ ವೈದ್ಯರಿಗೆ ಚಿಕಿತ್ಸೆ ನೀಡಲು ಸಹ ಸಾಧ್ಯವಾಗಿಲ್ಲ. ಕಚ್ಚಿದ ಹಾವು ವಿಷಪೂರಿತವಾದದ್ದರಿಂದ ವೈದ್ಯರು ಸಹ ಆತಂಕಕ್ಕೆ ಗುರಿಯಾಗಿದ್ದರು. ತನ್ನ ಕೈಯಲ್ಲಿರುವ ವಿಡಿಯೋ ಬಿಟ್ಟರೇ ತಮಗೂ ಸಹ ಕಚ್ಚಬಹುದು ಎಂಬ ಭೀತಿ ಅಲ್ಲಿರುವವರಿಗೆ ಆವರಿಸಿತ್ತು ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಅಷ್ಟೇಅಲ್ಲದೇ ಕೈಯಲ್ಲಿರುವ ಹಾವನ್ನು ಹಿಡಿದುಕೊಂಡೇ ಇದ್ದರೇ ಚಿಕಿತ್ಸೆ ನೀಡುವುದು ಸಹ ಕಷ್ಟವಾಗಿತ್ತು. ಆದ್ದರಿಂದ ಹಾವನ್ನು ಆಸ್ಪತ್ರೆಯಿಂದ ಹೊರಗೆ ಬಿಡುವಂತೆ ಸೂಚನೆ ನೀಡಿದ್ದರು. ಕೊನೆಗೆ ಆ ವ್ಯಕ್ತಿ ಹಾವನ್ನು ಹೊರಗೆ ಬಿಟ್ಟು ಬಂದಿದ್ದಾನೆ. ನಂತರ ಪ್ರಕಾಶ್ ಮಂಡಲ್ ಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇನ್ನೂ ಈ ವಿಡಿಯೋವನ್ನು ಅಲ್ಲಿದ್ದ ಕೆಲವರು ವಿಡಿಯೋ ಮಾಡಿಕೊಂಡು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಡಿಮೆ ಸಮಯದಲ್ಲೇ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ವಿಡಿಯೋ ನೋಡಿದರೇ ಅನೇಕರಿಗೆ ಭಯ ಆಗುತ್ತದೆ ಎಂದು ಹೇಳಬಹುದು. ಸದ್ಯ ಹಾವು ಕಚ್ಚಿದ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ.