ಮನುಷ್ಯನ ಆರೋಗ್ಯ ವೃದ್ಧಿಯಾಗಬೇಕಾದರೆ ಪ್ರತಿದಿನ ಹಾಲನ್ನು ಸೇವಿಸಬೇಕು, ಆದರೆ ಪ್ರತಿನಿತ್ಯ ಹಾಲು ಖರೀದಿ ಮಾಡಿ ಎಲ್ಲರು ಸೇವನೆ ಮಾಡುವುದು ಕಷ್ಟವಾಗಿದೆ, ಹಾಗಾಗಿ ಪ್ರತಿಯೊಬ್ಬ ರೈತರು ಕನಿಷ್ಠ ಪಕ್ಷ ಮನೆಗೊಂದು ಹಸು ಸಾಕುವ ಮೂಲಕ ಹಾಲು ಉತ್ಪಾದನೆ ಮಾಡಿ ನೀವು ಬಳಕೆ ಮಾಡಿಕೊಂಡು ಉಳಿಕೆ ಹಾಲನ್ನು ಸಂಘಕ್ಕೆ ಮಾರಾಟ ಮಾಡುವಂತೆ (Milk Union) ಕೊಚಿಮುಲ್ ತಾಲೂಕು ನಿರ್ದೇಶಕ ಆದಿನಾರಾಯಣರೆಡ್ಡಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಇರಗರೆಡ್ಡಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ (Milk Union) ಸಂಘದ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೈನುಗಾರಿಕೆಯನ್ನು ಉತ್ತೇಜಸಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡಲಾಗುತ್ತಿದೆ, ಇದರ ಭಾಗವಾಗಿ ರೈತರ ಕರ್ನಾಟಕದ 14 ಹಾಲು ಒಕ್ಕೂಟಗಳ ಪೈಕಿ ಕೊಚಿಮುಲ್ ಒಕ್ಕೂಟ ಮಾತ್ರ ಪ್ರತಿ ಲೀಟರ್ ಹಾಲು ಖರೀದಿಗೆ 30 ರೂಪಾಯಿ ಹಣ ನೀಡಲಾಗುತ್ತಿದೆ. (Milk Union) ಸಂಘಕ್ಕೆ ಹಾಲು ಮಾರಾಟ ಮಾಡುವವರು ಒಕ್ಕೂಟಕ್ಕೆ 450 ರೂಪಾಯಿ ಹಣ ಪಾವತಿಸಿ ವಿಮೆ ಮಾಡಿಸಿದರೆ ಆಕಸ್ಮಿಕವಾಗಿ ಸಂಘದ ಷೇರುದಾರರು ಸಾವನ್ನಪ್ಪಿದರೆ 1 ಲಕ್ಷ ರೂಪಾಯಿ ಪರಿಹಾರ ಹಣ ಸಿಗಲಿದೆ. ರಾಸುಗಳಿಗೆ ವಿಮೆ ಮಾಡಿಸಬೇಕಾದರೆ ಒಕ್ಕೂಟ 890 ಕಟ್ಟುತ್ತದೆ ನೀವು 890 ರೂಪಾಯಿ ಕಟ್ಟಿದರೆ ನಿಮ್ಮ ಹಸುಗಳು ಆಕಸ್ಮಿಕವಾಗಿ ಜೀವ ಹೋದಲ್ಲಿ 60 ರಿಂದ 70 ಸಾವಿರ ಪರಿಹಾರ ದೊರೆಯಲಿದೆ ಹಾಗಾಗಿ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ ಎಂದರು.
ಒಕ್ಕೂಟದಿಂದ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳ ವಸತಿ ನಿಲಯವನ್ನು ನಿರ್ಮಾಣ ಮಾಡಿದ್ದೂ, (Milk Union) ಸಂಘದ ಷೇರುದಾರರ ಮಕ್ಕಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಂತಹವರ ಮಕ್ಕಳು 3 ಸಾವಿರ ರೂಪಾಯಿ ಕಟ್ಟಿದರೆ ಸಾಕು ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ಮಾಹಿತಿ ನೀಡಿದರು. (Milk Union) ತಾಲೂಕಿನ 14 ಸಂಘಗಳಿಗೆ ತಲಾ 8.5 ಲಕ್ಷ ಅನುದಾನ ನೀಡಿ ಸ್ವಂತ ಕಟ್ಟಡಗಳನ್ನು ಕಟ್ಟಿಸಲಾಗಿದೆ ಎಂದರು. ಪಟ್ಟಣದಲ್ಲಿ ಸುಮಾರು 1. 5 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಶಿಬಿರ ಕಚೇರಿ ನಿರ್ಮಿಸಲಾಗಿದೆ ಎಂದರು.
ಶಿಬಿರ ಕಚೇರಿಯ ವಿಸ್ತರಣಾಧಿಕಾರಿ ಧರಣಿಕುಮಾರ್ ಮಾತನಾಡಿ, ವರ್ಷ ಪೂರ್ತಿ ತಾವು ಸಂಘಕ್ಕೆ ಮಾರಾಟ ಮಾಡಿದ ಹಾಲಿನಿಂದ ಸಂಘಕ್ಕೆ ಬಂದ ಲಾಭ ನಷ್ಟ ಕುರಿತು ಸರ್ವ ಸದಸ್ಯರ ಸಮ್ಮುಖದಲ್ಲಿ ಚರ್ಚೆ ಮಾಡುವುದು ಸಭೆಯ ಮುಖ್ಯ ಉದ್ದೇಶವಾಗಿದ್ದು, ವಾರ್ಷಿಕ ಆಯವ್ಯಯ ಮಂಡಿಸಿ ಕಳೆದ ಸಾಲಿನಲ್ಲಿ 1.96.809 ರೂಪಾಯಿ ಲಾಭ ಬಂದಿದ್ದು, ಖರ್ಚು ವೆಚ್ಚಗಳನ್ನು ಕಳೆದು, ಒಟ್ಟು 21,668 ಲಾಭ ಬಂದಿದೆ. ಈ ಲಾಭದಲ್ಲಿ ಶೇ.43 ರಷ್ಟು ಬೋನಸ್ ಹಣವನ್ನು ಹಾಲು ಮಾರಾಟಗಾರರಿಗೆ ವಾಪಾಸ್ ಕೊಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಷೇರುದಾರ ನರಸಿಂಹರೆಡ್ಡಿ ಮಾತನಾಡಿ, ರಾಸುಗಳಿಗೆ ಬಳಸುವ ಬೂಸಾ, ಚಕ್ಕೆ, ಪಶು ಆಹಾರ ದರಗಳು ಹೆಚ್ಚಾಗುತ್ತಿದ್ದೂ, ಹಾಲಿನ ದರ ಏರಿಸಿಲ್ಲ, ರೈತರಿಗೆ ಲಾಭ ಸಿಗುತ್ತಿಲ್ಲ, ಹೈನುಗಾರಿಕೆ ಮಾಡಲು ಕಷ್ಟ ಆಗುತ್ತಿದೆ, ಹಾಗಾಗಿ ದರ ಹೆಚ್ಚಿಸಿ ಅದನ್ನು ರೈತರಿಗೆ ತಲುಪುವಂತೆ ಮಾಡಬೇಕೆಂದು ಮನವಿ ಮಾಡಿದರು. ಬಳಿಕ ಶಿಬಿರ ಕಚೇರಿಯ (Milk Union) ಉಪ ವ್ಯವಸ್ಥಾಪಕರಾದ ಡಾ.ನವ್ಯಶ್ರೀ ಮಾತನಾಡಿ, ಸಂಘದಿಂದ ಉತ್ತಮ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡುತ್ತಿದ್ದು, ಶೇಖರಣೆ ಬಹಳ ಕಡಿಮೆ ಇದೆ, ನೀವುಗಳು ಶೇಖರಣೆ ಪ್ರಮಾಣ ಹೆಚ್ಚಿಸಿಕೊಂಡಲ್ಲಿ ಹೆಚ್ವಿನ ಆದಾಯ ಬರಲಿದೆ ಎಂದು ತಿಳಿಸಿದರು.

ಬಳಿಕ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ ಮಾತನಾಡಿ, (Milk Union) ಹಸುಗಳಿಗೆ ಕೇವಲ ಹಸಿ ಹುಲ್ಲು, ಜೋಳದ ಸಪ್ಪೆ, ಬೂಸಾ, ಹಿಂಡಿ ಮಾತ್ರ ನೀಡದೆ, ಹಲವು ರೀತಿಯ ಸೊಪ್ಪುಗಳನ್ನು ಕೊಡಬಹುದಾಗಿದ್ದು ಅಂತಹ ಸೊಪ್ಪುಗಳನ್ನು ಕೊಟ್ಟಲ್ಲಿ ಹಾಲಿನ ಪ್ರಮಾಣ ಹೆಚ್ಚಾಗಲಿದ್ದು, ಒಕ್ಕೂಟದ ವತಿಯಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು. ಈ ವೇಳೆ (Milk Union) ಸಂಘದ ನಿರ್ದೇಶಕರಾದ ಶಿವಪ್ಪ, ಶ್ರೀನಿವಾಸ, ನಡಿಪನ್ನ, ವೆಂಕಟೇಶಪ್ಪ, ಅಶ್ವತಪ್ಪ, ರಾಮರೆಡ್ಡಿ, ನರಸಿಂಹರೆಡ್ಡಿ, ಅಕ್ಕಲಪ್ಪ, ಗೋಪಾಲಪ್ಪ, ಅಕ್ಕಲಮ್ಮ ಸೇರಿದಂತೆ, ಷೇರುದಾರರು, ಸಂಘದ ಕಾರ್ಯದರ್ಶಿ ಟಿ. ವಿಜಯ್ ಕುಮಾರ್, ಹಾಲು ಪರೀಕ್ಷಕ ಶಿವರಾಜ್ ಕುಮಾರ್ ಸೇರಿದಂತೆ ಗ್ರಾಮದ ಮುಖಂಡರು, ಸಾರ್ವಜನಿಕರು ಹಾಜರಿದ್ದರು.