Eid Milad: ಈದ್ ಮಿಲಾದ್ ಹಬ್ಬದ ಅಂಗವಾಗಿ ಕವಿಗೋಷ್ಠಿ ಕಾರ್ಯಕ್ರಮ….!

ಪ್ರವಾದಿ ಮಹಮ್ಮದರ ಜನ್ಮದಿನ ಈದ್ ಮಿಲಾದ್ ಹಬ್ಬದ (Eid Milad) ಸಲುವಾಗಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಉರ್ದು ಕವಿಗೋಷ್ಠಿ, ಪ್ರವಚನ ಹಾಗೂ ನಾತೆ ಶರೀಫ್ ಕಾರ್ಯಕ್ರಮವನ್ನು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿತ್ತು. ಈ (Eid Milad)ಸಮಯದಲ್ಲಿ ಹಲವಾರು ಕವಿಗಳು ತಮ್ಮ ಶಾಯರಿಗಳ ಮೂಲಕ ಮಹಮ್ಮದರ ಜೀವನ, ಸಾಧನೆ ಹಾಗೂ ತತ್ವಗಳ ಕುರಿತು ಅರಿವು ಮೂಡಿಸಿದರು.

Eid MIlad Kavigoshti 1

ಈ ಸಮಯದಲ್ಲಿ (Eid Milad) ಮುಸ್ಲಿಂ ಸಮುದಾಯದ ಮುಖಂಡ ಹಾಗೂ ನ್ಯೂ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ಖಲೀಲುಲ್ಲಾ ಹಾಗೂ ಜಾಮಿಯಾ ಮಸೀದಿಯ ಮುಖ್ಯಸ್ಥರಾದ ಮುಫ್ತಿ ಅಸಿಫುಲ್ಲ ಮಾತನಾಡಿ ಪ್ರವಾದಿಗಳ ಬಗ್ಗೆ ತಿಳಿಸಿದರು. ಪರಿಸರ ವಾದಿ ಡಾ.ಗುಂಪುಮರದ ಆನಂದ್ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಹಾಗೂ ಸಮುದಾಯದ ಮುಖಂಡರಿಗೆ ಗಿಡ ನೀಡುವ ಮೂಲಕ ಶುಭ ಹಾರೈಸಿದರು.

Eid MIlad Kavigoshti 2

ಈ ಕಾರ್ಯಕ್ರಮದಲ್ಲಿ ಈದ್ ಮಿಲಾದ್ ಸಲುವಾಗಿ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್‍, ಮುಖಂಡರಾದ ಅಸ್ಲಾಂಖಾನ್, ಶಾಬುಲ್ ಹಸನ್, ಅಬ್ದುಲ್ ಸುಭಾನ್ ಸಾಬ್, ಶಫಿಉಲ್ಲ, ಸದ್ದಾಂ, ಸೊಹೈಲ್, ಜಾವೀದ್, ಸಕ್ಲೈನ್, ಖಲೀಲ್, ಜಬೀಉಲ್ಲ, ರಾಜೇಶ್, ಶಶಿ, ಅಸ್ಲಾಂಪಾಷ ಮೊದಲಾದವರಿದ್ದರು

Leave a Comment

Your email address will not be published. Required fields are marked *

Scroll to Top