ಕಳ್ಳತನ, ಕೊಲೆ, ದೌರ್ಜನ್ಯ, ಜಗಳಗಳು ಹೀಗೆ ಪೊಲೀಸರಿಗೆ ಪ್ರತಿನಿತ್ಯ ದೂರು ಗಳು ಬರುತ್ತಿರುತ್ತದೆ. ದೂರಿನಂತೆ ಪೊಲೀಸರು ಕ್ರಮ ಸಹ ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಯುವಕ ಪೊಲೀಸರ ಬಳಿ ವಿಭಿನ್ನವಾದ ಮನವಿ ಮಾಡಿದ್ದಾನೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. Im Single, I Need Girl Friend ಎಂದು ಪೊಲೀಸರ ಮೊರೆ ಹೋಗಿದ್ದಾನೆ. ನಾನು ಇನ್ನೂ ಸಿಂಗಲ್, ನೀವು ನನಗೆ ಗರ್ಲ್ ಫ್ರೆಂಡ್ ಹುಡುಕಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ. ಅದಕ್ಕೆ ಪೊಲೀಸರು ಮಾಡಿದ್ದಾದರೂ ಏನು ಎಂಬುದನ್ನು ತಿಳಿಯಲು ಮುಂದೆ ಓದಿ…
ಯುವಕನೋರ್ವ ದೆಹಲಿ ಪೊಲೀಸರಲ್ಲಿ ವಿಚಿತ್ರ ಮನವಿಯೊಂದನ್ನು ಮಾಡಿದ್ದಾನೆ. ನಾನು ಇನ್ನೂ ಸಿಂಗಲ್ ಆಗಿದ್ದೀನಿ, ಇದರು ಸರಿಯಲ್ಲ. ನೀವು ನನಗೆ ಗರ್ಲ್ ಫ್ರೆಂಡ್ ಹುಡುಕಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ. ಅದಕ್ಕೆ ದೆಹಲಿ ಪೊಲೀಸರು ಸಹ ಸ್ಪಂಧಿಸಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ದೆಹಲಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಖಂಡಿತವಾಗಿ ನಿಮಗೆ ಗರ್ಲ್ ಫ್ರೆಂಡ್ ಹುಡುಕಲು ನಾವು ಸಹಾಯ ಮಾಡುತ್ತೇವೆ. ಆಕೆ ಎಲ್ಲಾದರೂ ನಾಪತ್ತೆಯಾಗಿದ್ದರೆ ಹೇಳಿ ನಾವು ಪಕ್ಕಾ ಸಹಾಯ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ಒಂದು ಸಲಹೆ ಸಹ ಕೊಟ್ಟಿದ್ದಾರೆ. ನೀವು ಸಿಗ್ನಲ್ ಆಗಿದ್ದರೇ ಯಾವತ್ತೂ ಗ್ರೀನ್ ಆಗಿರಿ, ರೆಡ್ ಆಗಬೇಡಿ ಎಂದು ಟಿಪ್ಸ್ ಸಹ ಕೊಟ್ಟಿದ್ದಾರೆ. ಅಂದರೇ ಪೊಲೀಸರು ಈ ಸಲಹೆಯ ಮೂಲಕ ಯುವಕನ ನಡೆ, ಗುಣದ ಕುರಿತು ಸೂಚನೆ ನೀಡಿದ್ದಾರೆ. ಸಂಬಂಧಕ್ಕೆ ಸಂಬಂಧಿಸಿದಂತೆ ಸದಾ ಗ್ರೀನ್ ಆಗಿರಿ, ರೆಡ್ ಆಗಬೇಡಿ ಎಂದು ಸಲಹೆಯನ್ನು ಸೂಚನೆಯ ಮೂಲಕ ನೀಡಿದ್ದಾರೆ.
ದೆಹಲಿ ಪೊಲೀಸರು ಯುವಕನ ವಿಚಿತ್ರ ಮನವಿಯನ್ನು ತಳ್ಳಿಹಾಕದೇ ಯುವಕನ ಮನವಿಗೆ ಉತ್ತರಿಸಿದ್ದು, ದೇಶದಾದ್ಯಂತ ಭಾರಿ ಸುದ್ದಿಯಾಗಿದೆ. ಸದ್ಯ ದೆಹಲಿ ಪೊಲೀಸರ ಈ ಉತ್ತರ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಅನೇಕರು ದೆಹಲಿ ಪೊಲೀಸರು ಉತ್ತರ ಸೂಪರ್, ಪ್ರತಿ ಭಾರಿ ನೀವು ಈ ರೀತಿಯ ಉತ್ತರ ನೀಡಿ ಎಲ್ಲರ ಮನ ಗೆಲ್ಲುತ್ತೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.