ಎಮೋಷನಲ್ ಕಾಮೆಂಟ್ಸ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ, ಊಟ ಕೊಡಿ ಅಂದರೇ ಬೈದು ಕಳುಹಿಸಿಬಿಟ್ಟರು ಎಂದ ನಟ…..!

ಸ್ಯಾಂಡಲ್ ವುಡ್ ಸಿನಿರಂಗದ ಸ್ಟಾರ್‍ ನಟ ಕಂ ನಿರ್ದೇಶಕ ಉಪೇಂದ್ರ ರವರ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ ಎಂದೇ ಹೇಳಬಹುದು. ಚಿತ್ರ ವಿಚಿತ್ರವಾದ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕೇವಲ ಕನ್ನಡಿಗರನ್ನು ಮಾತ್ರವಲ್ಲದೇ ಸೌತ್ ಸಿನಿರಂಗದಲ್ಲೂ ಅವರ ಅಭಿಮಾನಿಗಳಿದ್ದಾರೆ. ಉಪೇಂದ್ರರವರ ಅನೇಕ ಸಿನೆಮಾಗಳು ತೆಲುಗಿನಲ್ಲೂ ಬಿಡುಗಡೆಯಾಗಿದೆ. ಇದೀಗ ಅವರ ಹಳೇಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಅವರು ತಮ್ಮ ಸಿನಿರಂಗದಲ್ಲಿ ಅನುಭವಿಸಿದ ಸಮಸ್ಯೆಗಳ ಬಗ್ಗೆ ಕಾಮೆಂಟ್ ಮಾಡಿದ್ದು, ಅವು ವೈರಲ್ ಆಗುತ್ತಿದೆ.

Real star upendra old video goes viral

ಸ್ಟಾರ್‍ ನಟ ಉಪೇಂದ್ರ ಬಡತನದಿಂದ ಬಂದು ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಿದ ವ್ಯಕ್ತಿಯಾಗಿದ್ದಾರೆ. ಅವರಿಗೆ ಸಿನಿರಂಗದಲ್ಲಿ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಜ್ಞಾನವಿದೆ. ನಟನಾಗಿ, ನಿರ್ದೇಶಕನಾಗಿ, ಕಥೆಗಾರನಾಗಿ, ಲಿರಿಕ್ ರೈಟರ್‍ ಆಗಿ, ಮ್ಯೂಸಿಕ್ ಡೈರೆಕ್ಟರ್‍ ಆಗಿ, ಗಾಯಕನಾಗಿಯೂ ತನ್ನಲ್ಲಿನ ಬಹುಮುಖ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ಕನ್ನಡ ಸಿನೆಮಾಗಳ ಜೊತೆಗೆ ಸೌತ್ ಸಿನಿರಂಗದಲ್ಲೂ ಅವರು ತಮ್ಮದೇ ಆದ ಫೇಂ ಪಡೆದುಕೊಂಡಿದ್ದಾರೆ. ಕೆಲವೊಂದು ತೆಲುಗು ಸಿನೆಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಬಿಡುಗಡೆಯಾದ ಅವರ ಸಿನೆಮಾಗಳು ತೆಲುಗಿನಲ್ಲೂ ಸಹ ಬಿಡುಗಡೆಯಾಗಿದ್ದು, ತೆಲುಗು ರಾಷ್ಟ್ರಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ಅದರಲ್ಲೂ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರ ಸನ್ ಆಫ್ ಸತ್ಯಮೂರ್ತಿ ಸಿನೆಮಾದಲ್ಲಿ ವಿಲನ್ ಆಗಿ ನಟಿಸಿ ಮತಷ್ಟು ಫೇಮಸ್ ಆದರು ಎಂದೇ ಹೇಳಬಹುದಾಗಿದೆ.

ಸದ್ಯ ಉಪೇಂದ್ರ ರವರ ಹಳೇಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸಿನಿರಂಗಕ್ಕೆ ಬಂದು ಸಕ್ಸಸ್ ಕಂಡು ಕೊಂಡ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಹಳೇಯ ವಿಡಿಯೋದಲ್ಲಿ ಉಪೇಂದ್ರ ಮಾತನಾಡುತ್ತಾ ನಾನೇನು ಇಲ್ಲದೇ ಸಿನಿರಂಗಕ್ಕೆ ಬಂದೇ. ಅದೆ ನನಗೆ ಪ್ಲಸ್ ಪಾಯಿಂಟ್, ಜಿರೋ ಯಿಂದ ಕೆರಿಯರ್‍ ಆರಂಭಿಸಿದೆ. ಕಳೆದುಕೊಳ್ಳುವುದಕ್ಕೆ ಏನು ಇಲ್ಲ. ಬಂದರೇ ಅದೇ ದೊಡ್ಡರು, ಅದು ತುಂಬಾ ಅದೃಷ್ಟ. ನಾನು ಒಂದು ಬಾರಿ ಶೂಟಿಂಗ್ ಗೆ ಹೋಗಿದೆ. ಅಲ್ಲಿ ಊಟ ಇಡುತ್ತಿದ್ದರು. ನಾನು ಸಹ ಪ್ಲೇಟ್ ತೆಗೆದುಕೊಂಡು ಅಲ್ಲಿಗೇ ಹೋದೆ. ಅಲ್ಲಿದ್ದ ಪ್ರೊಡಕ್ಷನ್ ಭಾಯ್ ಊಟ ಇಲ್ಲ ಹೋಗು ಎಂದು ಬೈದು ಕಳುಹಿಸಿಬಿಟ್ಟ. ಬಳಿಕ ನಾನು ಹಿರೋ ಆಗಿದ್ದ ಸಿನೆಮಾಗೆ ಅದೇ ಪ್ರೊಡಕ್ಷನ್ ಬಾಯ್ ಕೆಲಸ ಮಾಡಿದ್ದ. ಆದರೆ ನಾನು ಆತನಿಗೆ ಗೌರವ ಕೊಟ್ಟೆ. ಏಕೆಂದರೇ ಆ ಸಮಯದಲ್ಲಿ ನನ್ನ ಪರಿಸ್ಥಿತಿ ಆ ರೀತಿಯಿತ್ತು. ಅದಕ್ಕಾಗಿ ಆತ ಆ ರೀತಿ ಮಾತನಾಡಿದ್ದ, ಇದೀಗ ನಾನು ಅದನ್ನು ನೆನಪಿನಲ್ಲಿಟ್ಟುಕೊಂಡು ಆತನನ್ನು ಆಗ ಹಾಗೆ ಮಾಡಿದ್ದೆ, ಅಲ್ಲವೇ ನಾನು ಈಗ ತೋರಿಸುತ್ತೇನೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

Real star upendra old video goes viral 0

ಸದ್ಯ ಉಪೇಂದ್ರ ರವರ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ನೆಟ್ಟಿಗರು ಹಾಗೂ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಉಪೇಂದದ್ರ ಕೊನೆಯದಾಗಿ Kabzaa ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಉಪೇಂದ್ರ ರವರು UI, Buddivanta 2, Trishulam ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *

Next Post

ಅಲ್ಲಲ್ಲಿ ಕಾಣುವ ಈ ಸಸಿಯಲ್ಲಿದೆ ಔಷಧೀಯ ಗುಣಗಳು, ನಿಮಗಿದು ತಿಳಿದಿದೆಯೇ?

Sat Jun 1 , 2024
ನಮ್ಮ ಸುತ್ತಮುತ್ತಲಿನ ಕಾಣುವಂತಹ ಹಲವು ಸಸಿಗಳಲ್ಲಿ ಔಷಧಿಯ ಗುಣಗಳಿರುತ್ತವೆ. ಆ ಸಸ್ಯಗಳಲ್ಲಿರುವ ಔಷಧಿ ಗುಣಗಳ ಬಗ್ಗೆ ಮಾಹಿತಿ ತಿಳಿದೇ ಇರುವುದಿಲ್ಲ. ಅಂತಹ ಸಸ್ಯಗಳಲ್ಲಿ ಉಮ್ಮತ್ತಿ ಗಿಡ ಸಹ ಒಂದಾಗಿದೆ. ಈ ಸಸಿಯಲ್ಲಿನ ಎಲೆಗಳು, ಹೂವುಗಳಲ್ಲಿ ತುಂಬಾನೆ ಔಷಧಿಯ ಗುಣಗಳಿವೆ ಎಂದು ಹೇಳಲಾಗುತ್ತದೆ. ಈ ಸಸಿಯಲ್ಲಿನ ಔಷಧಿ ಗುಣಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಔಷಧಿ ಸಸಿಯಲ್ಲಿ ಏನೆಲ್ಲಾ ಔಷಧಿ ಗುಣಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿ…! (ಸಂಗ್ರಹ ಮಾಹಿತಿ) ಭಾರತದಲ್ಲಿ […]
Datura plant uses
error: Content is protected !!